ಇತ್ತೀಚಿನ ಸುದ್ದಿ
ದೀರ್ಘಕಾಲದ ಗೆಳೆಯನ ಜತೆ ದಾಂಪತ್ಯ ಜೀವನ: ಸಪ್ತಪದಿ ತುಳಿದ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ನಟಿ ಶುಭಾ ಪೂಂಜ
05/01/2022, 19:47
ಮಂಗಳೂರು(reporterkarnataka.com): ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ನಟಿ ಶುಭಾ ಪೂಂಜ ಅವರು ತನ್ನ ದೀರ್ಘಕಾಲದ ಗೆಳೆಯ ಸುಮಂತ್ ಅವರನ್ನು ಮಂಗಳೂರಿನಲ್ಲಿ ಸರಳವಾಗಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮಜಲಬೆಟ್ಟುಬೀಡುವಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶುಭಾ ಹಾಗೂ ಸುಮಂತ್ ಸಪ್ತಪದಿ ತುಳಿದರು. ಮದುವೆ ಸಮಾರಂಭದಲ್ಲಿ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ, ಮಜಾಭಾರತ ಖ್ಯಾತಿಯ ರಾಘು ಪಾಲ್ಗೊಂಡಿದ್ದರು.
ಶುಭಾ ಪೂಂಜ ಅವರು ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಮದುವೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ.