11:06 AM Wednesday27 - November 2024
ಬ್ರೇಕಿಂಗ್ ನ್ಯೂಸ್
ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ…

ಇತ್ತೀಚಿನ ಸುದ್ದಿ

ಪರಿಶಿಷ್ಟ ಕಾಲೋನಿಯಲ್ಲಿ ಸ್ಮಶಾನ ಮಂಜೂರು:  ಮನೆ ತೆರವಿಗೆ ಅಧಿಕಾರಿಗಳ ಸೂಚನೆ; ಸಾರ್ವಜನಿಕರು ವಿರೋಧ; ಶಾಸಕ ಕುಮಠಳ್ಳಿ ಏನು ಮಾಡುತ್ತಿದ್ದಾರೆ?

26/12/2021, 12:23

ಬೆಳಗಾವಿ(reporterkarnataka.com): ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ   ಸ್ಮಶಾನಕ್ಕೆ  ಭೂಮಿ ಮೂಜೂರು ಮಾಡಿದ್ದು, ಸುತ್ತಮುತ್ತಲಿರುವ ಅನಧಿಕೃತ ಮನೆಗಳ ತೆರವಿಗೆ ಸೂಚನೆ ನೀಡಿರುವ ಅಧಿಕಾರಿಗಳ ಕ್ರಮ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಥಣಿ  ತಹಶೀಲ್ದಾರ್ ಡಿ.ಎಚ್. ಕೋಮಾರ ಹಾಗೂ ಸಿಪಿಐ ಶಂಕರಗೌಡ ಬಸವನಗೌಡರ ಅವರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ತೆರವುಗೊಳಿಸಲು ಸೂಚಿಸಿದರು.

ಐಗಳಿ ಗ್ರಾಮದ ಜನತಾ ಕಾಲನಿಯಲ್ಲಿ ಸುಮಾರು 5 ಎಕರೆ ಸರಕಾರಕ್ಕೆ ನೀಡಿದ ದಾನದ  ಜಮೀನು ಇದ್ದು ಅದರಲ್ಲಿ ಮೂರು ಎಕರೆ ಜನ ವಸತಿ ಪ್ರದೇಶ ಹಾಗೂ ಎರಡು ಎಕರೆ ಸ್ಮಶಾನ  ಭೂಮಿಯಿದ್ದು  ಎರಡು ಎಕರೆಯಲ್ಲಿ  ಶವ ಸಂಸ್ಕಾರ ಮಾಡಲು ಅಗತ್ಯ ಕ್ರಮವಹಿಸಲು ಗ್ರಾಮ ಪಂಚಾಯತಿ ಅಭಿವೃಧ್ಧಿ  ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ನಡೆಗೆ ದಲಿತರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ನಮಗೆ 1972 ರಲ್ಲಿ  ಗ್ರಾಮ ಪಂಚಾಯತಿ ವತಿಯಿಂದ  ಹಕ್ಕುಪತ್ರ ನೀಡಿ ಮನೆ ಮಂಜೂರು ಮಾಡಿದ್ದಾರೆ.  ನಾವು ಹಲವಾರು ದಶಕದಿಂದ ವಾಸ ಮಾಡುತ್ತಿದ್ದೇವೆ. ಈ ಜಾಗದಲ್ಲಿ ನಾವು ಮನೆಗಳನ್ನು ಕಟ್ಟಿಕೋಂಡು ಜೀವನ ಸಾಗಿಸುತ್ತಿದ್ದೇವೆ. ಏಕಾಎಕಿ ಅಧಿಕಾರಿಗಳು ಬಂದು ಇದು ಸ್ಮಶಾನ ಭೂಮಿ ಇದೆ  ಎಂದು ಯಾವುದೇ ಮುನ್ನಸೂಚನೆ ಇಲ್ಲದೇ ಮನೆಗಳನ್ನು ತೆರವುಗೋಳಿಸಲು ಮುಂದಾಗಿದ್ದಾರೆ.  ಇದರಿಂದ ಎಸ್ಸಿ  ಹಾಗೂ ಇನ್ನೂಳಿದ ಸಮುದಾಯದ ಕುಟುಂಬಗಳು ಬೀದಿಗೆ ಬಿಳ್ಳುವು ಆತಂಕದಲ್ಲಿ ಇದ್ದಿವೆ ಎಂದು ಸ್ಥಳೀಯರು ತಿಳಿಸಿದರು.

ಗ್ರಾಮದಲ್ಲಿ ಹಲವಾರ ಕಡೆ ಸರಕಾರಿ ಗೌಟನ ಜಾಗ ಇದ್ದು, ಸಾರ್ವಜನಿಕರು ವಾಸಿಸುವ ಸ್ಥಳದಲ್ಲಿ   ಸ್ಮಶಾನ  ಮಾಡುವುತ್ತೀರುವುದು ಸರಿ ಅಲ್ಲ. ಅದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು   ಎಂದು ಜನತಾ ಕಾಲನಿಯ ಸಾರ್ವಜನಿಕರು ಮತ್ತು  ಗ್ರಾಮಸ್ಥರ   ಬೇಡಿಕೆಯಾಗಿದೆ. ಈ ಕುರಿತು ಅಥಣಿ ಶಾಸಕರು  ಮಹೇಶ ಕುಮಠಳ್ಳಿ  ಅವರು ಗಮನಹರಿಸಲು  ಸಾರ್ವಜನಿಕರು ಒತ್ತಾಯಿಸಿದ್ದರೆ.

ಇತ್ತೀಚಿನ ಸುದ್ದಿ

ಜಾಹೀರಾತು