10:49 AM Thursday31 - October 2024
ಬ್ರೇಕಿಂಗ್ ನ್ಯೂಸ್
ಪಿಎಲ್ಐ ಯೋಜನೆಯಡಿ ಮೆರಿಲ್ ಸುಧಾರಿತ ಉತ್ಪಾದನಾ ಸೌಲಭ್ಯ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು…

ಇತ್ತೀಚಿನ ಸುದ್ದಿ

ಕಾಗವಾಡ: ಮಹಾರಾಷ್ಟ ಸಿಎಂ ಉದ್ದವ್ ಠಾಕ್ರೆ ಪ್ರತಿಕೃತಿಗೆ ಬೆಂಕಿ ಹಚ್ಚಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ; ವಾಹನ ಸಂಚಾರ ರದ್ದು

18/12/2021, 15:51

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ಮಹಾರಾಷ್ಟ್ರದ ಗಡಿಯಲ್ಲಿರವ ಕಾಗವಾಡ ಪಟ್ಟಣದಲ್ಲಿ ಕನ್ನಡ ಪರ ಸಂಘಟನೆಗಳಿಂದ ಮರಾಠಿಗರ ಪುಂಡಾಟಿಕೆ ವಿರುದ್ದ ಪ್ರತಿಭಟನೆ ನಡೆಯಿತು. ರಸ್ತೆ ಮಧ್ಯದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ ಠಾಕ್ರೆ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಮಹಾರಾಷ್ಟ್ರದ ಸಿಎಂ ಉದ್ದವ ಠಾಕ್ರೆ ಪ್ರತಿಮೆಗೆ ಚಪ್ಪಲಿಯಿಂದ ಹೊಡೆದು ಕರವೇ ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬೆಂಕಿ ಹಚ್ಚಿದರು.

ಕಾಗವಾಡ ಪಟ್ಟಣದಲ್ಲಿ ಮರಾಠಿ ಬೋರ್ಡ್ಗಳನ್ನು ಕಿತ್ತು ಹಾಕಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಶಿವಸೇನೆಗೆ ಧಿಕ್ಕಾರ ಕೂಗಿ ಗಡಿಯಲ್ಲಿ ಕರವೇ ಇತರೆ ಕನ್ನಡ ಸಂಘಟನೆಯ ಕಾರ್ಯಕರ್ತರು ಆಕ್ರೋಶ ಹೊರಗೆಡಹಿದರು.

ಗಡಿಯಲ್ಲಿ ಬಿಗುವಿನ ವಾತಾವರಣ ನೆಲೆಸಿದೆ. ಕರ್ನಾಟಕದ ವಾಹನಗಳು ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದ ವಾಹನಗಳನ್ನು ಕರ್ನಾಟಕಕ್ಕೆ ಸಂಚರಿಸಿದಂತೆ ಪೊಲೀಸರಿಂದ ನಿರ್ಭಂಧ ಹೇರಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು