ಇತ್ತೀಚಿನ ಸುದ್ದಿ
ಮಂಗಳೂರು-ಮುಂಬೈಗೆ ಮಲ್ಟಿ ಆಕ್ಸೆಲ್ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ: ಪ್ರಯಾಣ ದರ ಎಷ್ಟು ಗೊತ್ತೇ?
18/12/2021, 09:51
ಮಂಗಳೂರು (reporterkarnataka.com): ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು-ಮುಂಬೈ (ಮಂಗಳೂರಿನಿಂದ ವಯಾ ಮೂಡಬಿದಿರೆ, ಕಾರ್ಕಳ, ನಿಟ್ಟೆ, ಬೆಳ್ಮಣ್ಣು, ಶಿರ್ವ, ಮಂಚಕಲ್, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ನಿಪ್ಪಾಣಿ, ಕೊಲ್ಲಾಪುರ, ಸತಾರ, ಪೂನಾ ಮಾರ್ಗವಾಗಿ ಮುಂಬೈ) ಮಾರ್ಗದಲ್ಲಿ ವೋಲ್ವೋ ಮಲ್ಟಿಆಕ್ಸಲ್ ಸಾರಿಗೆಯು ಡಿ.12ರಿಂದ ಕಾರ್ಯಾಚರಣೆ ಆರಂಭಿಸಿದೆ.
ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಮಧ್ಯಾಹ್ನ 12.45 ಗಂಟೆಗೆ ಹೊರಟು ಮೂಡಬಿದಿರೆಗೆ 1.45ಕ್ಕೆ ತಲುಪಲಿದೆ. ಕಾರ್ಕಳದಿಂದ 2.15 ಕ್ಕೆ ಹೊರಟು ನಿಟ್ಟೆ, ಬೆಳ್ಮಣ್ಣು, ಶಿರ್ವ ಮಂಚಕಲ್, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ನಿಪ್ಪಾಣಿ, ಕೊಲ್ಲಾಪುರ, ಸತಾರ, ಪೂನಾ ಮಾರ್ಗವಾಗಿ ಮುಂಬೈಗೆ ಬೆಳಿಗ್ಗೆ 7 ಕ್ಕೆ ತಲುಪುತ್ತದೆ.
ಮರು ಪ್ರಯಾಣದಲ್ಲಿ ಮುಂಬೈಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಪೂನಾ, ಸತಾರ, ಕೊಲ್ಲಾಪುರ, ನಿಪ್ಪಾಣಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಶಿರ್ವಮಂಚಕಲ್, ಬೆಳ್ಮಣ್ಣು, ನಿಟ್ಟೆ, ಕಾರ್ಕಳ ಬೆಳಿಗ್ಗೆ 6.30ಕ್ಕೆ ತಪುಪಲಿದೆ ನಂತರ ಮೂಡಬಿದ್ರೆಯಿಂದ ಬೆಳಿಗ್ಗೆ 7ಕ್ಕೆ ಹೊರಟು ಮಂಗಳೂರಿಗೆ ಬೆಳಿಗ್ಗೆ 8 ಗಂಟೆಗೆ ತಲುಪುತ್ತದೆ.
ಮಂಗಳೂರಿನಿಂದ ಮುಂಬೈಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 1,400 ರೂ.ಗಳು. ಪ್ರಯಾಣಿಕರಿಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ಸು ನಿಲ್ದಾಣ ಮೊ.ಸಂಖ್ಯೆ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ಮೊ.ಸಂಖ್ಯೆ: 9663211553, ಉಡುಪಿ ಬಸ್ಸು ನಿಲ್ದಾಣ ಮೊ.ಸಂಖ್ಯೆ: 9663266400, ಕುಂದಾಪುರ ಬಸ್ಸು ನಿಲ್ದಾಣ ಮೊ.ಸಂಖ್ಯೆ: 9663266009 ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.