3:11 AM Saturday23 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ ಪ್ರಕರಣ: 4 ಮಂದಿ ವಿರುದ್ಧ ಎಫ್ ಐಆರ್ ದಾಖಲು

18/12/2021, 09:48

ಮೈಸೂರು(reporterkarnataka.com):

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ ಪ್ರಕರಣಕ್ಕೆ ಸಂಬoಧಿಸಿದoತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೈಮುಲ್ ಅಧ್ಯಕ್ಷ ಪ್ರಸನ್ನ ಅವರು ಮೈಮುಲ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ನಕಲಿ ನಂದಿನಿ ತಪ್ಪ ತಯಾರಿಸುತ್ತಿದ್ದ ಪ್ರಕರಣದ ಬಗ್ಗೆ ನೇರವಾಗಿ ಎಸ್ಪಿಗೆ ದೂರು ನೀಡಿದ್ದೇನೆ. ಪ್ರಕರಣ ಸಂಬoಧ ಮುರುಗೇಶ್, ಅಶ್ವಿನಿ, ಸಂತೋಷ್, ಕುಮಾರ್ ಎಂಬುವವರ ಮೇಲೆ ಎಫ್‌ಐಆರ್ ಆಗಿದೆ.

ಮೈಸೂರಿನ ಹೊರವಲಯದ ಹೊಸಹುಂಡಿಯಲ್ಲಿ ನಕಲಿ ತುಪ್ಪ ತಯಾರಿಕೆ ಕಂಡು ಬಂದಿದೆ. ಅಲ್ಲಿಗೂ ನಾವು ಭೇಟಿ ನೀಡಿ, ನಕಲಿ ತುಪ್ಪ ತಯಾರಿಕೆ ಘಟಕವನ್ನ ಸೀಜ್ ಮಾಡಿಸಿದ್ದೇವೆ. ಇದೇ ಮೊದಲು ಈ ಇಂತಹ ಕಲಬೆರಕೆ ಜಾಲ ಕಂಡು ಬಂದಿರೋದು. ಸರ್ಕಾರದ ಮಟ್ಟದಲ್ಲಿ ತನಿಖೆಗೆ ಮನವಿ ಮಾಡಿದ್ದೇವೆ. ಗೋದಾಮಿನಲ್ಲಿ ಸಿಕ್ಕಂತಹ ಎಲ್ಲಾ ನಕಲಿ ವಸ್ತುಗಳನ್ನ ಸೀಜ್ ಮಾಡುವಂತಹ ಕೆಲಸವಾಗಿದೆ. ಫುಡ್ ಡಿಪಾರ್ಟ್ಮೆಂಟ್‌ಗೂ ಮಾದರಿಯನ್ನ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಡಾಲ್ಡಾ, ಪಾಮ್ ಆಯಿಲ್ ನಂತಹ ವಸ್ತುಗಳನ್ನು ಬಳಸಿದ್ದಾರೆ. ಇಲ್ಲಿ ತಯಾರಾದ ನಕಲಿ ತುಪ್ಪ ಎಲ್ಲೆಲ್ಲಿ ಪೂರೈಕೆಯಾಗುತ್ತಿತ್ತು. ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದರ ತನಿಖೆಯಾಗುತ್ತಿದೆ. ಯಾರೇ ಪ್ರಭಾವಿಗಳಿದ್ದರೂ ಬಿಡಲ್ಲ, ಜೈಲಿಗೆ ಕಳುಹಿಸುತ್ತೇವೆ. ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡು, ಅವರನ್ನು ಸೇವೆಯಿಂದಲೇ ವಜಾ ಮಾಡುತ್ತೇವೆ. ಅಲ್ಲದೇ ಜೈಲಿಗೂ ಕಳುಹಿಸುತ್ತೇವೆ ಎಂದು ಗುಡುಗಿದರು.

ಇಂತಹ ಅಕ್ರಮಗಳನ್ನ ತಡೆಯಲು ವಿಜುಲಿಯನ್ಸ್ ಟೀಂ ಚುರುಕುಗೊಳಿಸುತ್ತೇವೆ ಎಂದರು

ಪ್ರತಿ ವಾರಕ್ಕೊಮ್ಮೆ ಎಲ್ಲಾ ಮಿಲ್ಕ್ ಪಾರ್ಲರ್‌ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಲು ಬಗ್ಗೆ ಪ್ರತಿ ವಾರ ಉತ್ಪನ್ನಗಳನ್ನ ಲ್ಯಾಬ್‌ಗೆ ತಂದು ಪರಿಶೀಲಿಸುತ್ತೇವೆ. ಕೂಲಂಕುಶವಾಗಿ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರ ತರುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ರೈತರು, ಗ್ರಾಹಕರು ಮೈಮುಲ್ ಗೆ ಎರಡು ಕಣ್ಣುಗಳಿದ್ದಂತೆ. ಇಬ್ಬರ ವಿಶ್ವಾಸವನ್ನ ಮೈಮುಲ್ ಕಾಪಾಡಿಕೊಳ್ಳಲಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು