ಇತ್ತೀಚಿನ ಸುದ್ದಿ
28 ವರ್ಷ ಹಳೆಯ ನಕಲಿ ಅಂಕಪಟ್ಟಿ ಪ್ರಕರಣ: ಅಯೋಧ್ಯೆ ಬಿಜೆಪಿ ಶಾಸಕ ಅನರ್ಹ; 5 ವರ್ಷ ಜೈಲು
12/12/2021, 11:50
ಲಕ್ನೋ(reporterkarnataka.com): ಅಯೋಧ್ಯೆಯ
ಗೋಸಾಯಿಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ಕಾಲೇಜು ಪ್ರವೇಶ ಪಡೆಯುವಾಗ ನಕಲಿ ಅಂಕ ಪಟ್ಟಿ ಬಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿ ಜೈಲು ಶಿಕ್ಷೆ ವಿಧಿಸಿದೆ.
ಇಂದ್ರ ಪ್ರತಾಪ್ ಅವರಿಗೆ 8 ಸಾವಿರ ರೂ. ದಂಡದ ಜೊತೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶೆ ಪೂಜಾ ಸಿಂಗ್ ಅವರು ತೀರ್ಪು ನೀಡಿದ್ದಾರೆ.
ಇದು 28 ವರ್ಷಗಳ ಹಳೆಯ ಪ್ರಕರಣವಾಗಿದ್ದು,ತಿವಾರಿ ಅವರ 5 ವರ್ಷಗಳ ಶಾಸಕ ಸ್ಥಾನದ ಅಧಿಕಾರಾವಧಿ ಇನ್ನು ಕೆಲವೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಅದಕ್ಕೆ ಮುನ್ನವೇ ತೀರ್ಪು ಪ್ರಕಟವಾಗಿದೆ.
ತಿವಾರಿ ವಿರುದ್ಧ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ 1991ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತಿವಾರಿ ಅವರು ಮೊದಲ ವರ್ಷದ ನಕಲಿ ಅಂಕಪಟ್ಟಿ ತಯಾರಿಸಿ ಬಿಎಸ್ಸಿ ಎರಡನೇ ವರ್ಷಕ್ಕೆ ಪ್ರವೇಶ ಪಡೆದಿದ್ದರು ಎಂದು ಪ್ರಿನ್ಸಿಪಾಲ್ ಯದುವಂಶ್ ರಾಮ್ ತ್ರಿಪಾಠಿ ಆರೋಪಿಸಿ ದೂರು ದಾಖಲಿಸಿದ್ದರು. ಪ್ರಕರಣದ ಕುರಿತು 28 ವರ್ಷಗಳ ಕಾಲ ದೀರ್ಘ ವಿಚಾರಣೆ ನಡೆದಿತ್ತು. ಈ ನಡುವೆ ಪ್ರಿನ್ಸಿಪಾಲ್ ತ್ರಿಪಾಠಿ ಸಾವನ್ನಪ್ಪಿದ್ದರು.
……