ಇತ್ತೀಚಿನ ಸುದ್ದಿ
ನಾಗರಬೆಂಚಿ: ಕನಕಮೂರ್ತಿ ಅನಾವರಣ; ಸಾಮೂಹಿಕ ವಿವಾಹ ವೈಭವ
05/12/2021, 18:26

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ
ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಪಟ್ಟಣದ ನಾಗರಬೆಂಚಿ ಗ್ರಾಮದಲ್ಲಿ ನೂತನ ಕನಕ ಮೂರ್ತಿಯ ಅನಾವರಣ ಮತ್ತು ಸಾಮೂಹಿಕ ವಿವಾಹ, ಧಾರ್ಮಿಕ ಸಭೆ ಕಾರ್ಯಕ್ರಮ ಜರಗಿತು.
ಮಸ್ಕಿಯ ಷಟಸ್ಥಲ ಬ್ರಹ್ಮ ಹೊರ ರುದ್ರಮುನಿ ಶಿವಾಚಾರ್ಯರು, ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಕನಕ ಮೂರ್ತಿ ಪ್ರತಿಷ್ಠಾಪನ ಮಾಡುವುದರ ಜತೆಗೆ ಸಾಮೂಹಿಕ ವಿವಾಹಕ್ಕೆ ಹೊಸ ಜೀವನಕ್ಕೆ ಕಾಲಿಡುತ್ತಿರುವ 11 ಜೋಡಿ ದಂಪತಿಗಳಿಗೆ ಶುಭ ಹಾರೈಸಿದರು.
ವೇದಿಕೆಯನ್ನು ಉದ್ದೇಶಿಸಿ ಮಾತನಾಡಿ ಮಸ್ಕಿಯ ವರ ರುದ್ರಮುನಿ ಶಿವಾಚಾರ್ಯರು, ಸರ್ವಧರ್ಮದವರು ಸೇರಿ ಒಳ್ಳೆಯ ಕಾರ್ಯಕ್ರಮ ಮಾಡುತ್ತಿರುವುದು ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವು ಅತ್ಯಂತ ಪುಣ್ಯದ ಕೆಲಸ ಎಂದು ಹೇಳಿದರು.
ಪ್ರತಿಯೊಬ್ಬ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಮನಸ್ಸಿಗೆ ಮತ್ತು ಜೀವನ ನೆಮ್ಮದಿ ಸಿಗುತ್ತದೆ. ಇಂತಹ ಕಾರ್ಯಕ್ರಮಗಳು ಮಾಡುವುದರಿಂದ ಪುಣ್ಯದ ಕೆಲಸ ಬರುತ್ತದೆ ಎಂದು ನುಡಿದರು.
ನ್ಯಾಯವಾದಿ ಗುಡಿಹಾಳ ನಿರುಪಾದೆಪ್ಪ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮುಂತಾದವರು ಉಪಸ್ಥಿತರಿದ್ದರು.