11:16 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಸದ್ದುಗದ್ದಲವಿಲ್ಲದೆ ವಾರ್ಡ್ ತುಂಬಾ ಫುಡ್ ಕಿಟ್ ವಿತರಿಸುತ್ತಿರುವ ಕಾರ್ಪೊರೇಟರ್: ಇವರೇ ಪ್ರವೀಣ್ ಚಂದ್ರ ಆಳ್ವ

31/05/2021, 21:07

ಮಂಗಳೂರು(reporterkarnataka news): ಕೊರೊನ ಲೊಕ್ಡೌನ್ ಹಿನ್ನೆಲೆ ಜನರು ಉದ್ಯೋಗವಿಲ್ಲದೆ ಅದೆಷ್ಟೋ ಮಂದಿ ತಮ್ಮ ದಿನ ನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದಾರೆ. ಅದಲ್ಲದೆ ಕಳೆದ ಬಾರಿ ಸರ್ಕಾರದಿಂದ ಒಂದಿಷ್ಟು ಆಹಾರ ಕಿಟ್ಟುಗಳು ಬಂದಿತ್ತು. ಸರಿಯಾದ ಫಲಾನುಭಾವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.  ಆದರೂ ತಕ್ಕ ಮಟ್ಟಿಗೆ ರಾಜಕೀಯ ನಾಯಕರು ಕಿಟ್ಟನ್ನು ಒದಗಿಸಿ ಜನರಿಗೆ ಸಹಾಯ ಹಸ್ತ ನೀಡಿದ್ದರು.

ಇದೀಗ ಮಂಗಳೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ಒಬ್ಬರು ಯಾವುದೇ ಸದ್ದುಗದ್ದಲವಿಲ್ಲದೆ, ಪ್ರಚಾರವಿಲ್ಲದೆ ಕಿಟ್ ಹಂಚುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ, ಪ್ರವೀಣ್ ಚಂದ್ರ ಆಳ್ವ ಅವರು.ಪಾಲಿಕೆಯ ಕಂಕನಾಡಿ 49 ನೇ ಬಿ ವಾರ್ಡ್ ನ ಕಾರ್ಪೊರೇಟರ್  ಆಗಿರುವ ಪ್ರವೀಣ್ ಚಂದ್ರ ಆಳ್ವ ಸ್ವಂತ ಖರ್ಚಿನಲ್ಲಿ  ತಮ್ಮ ವಾರ್ಡಿನ ಎಲ್ಲಾ ಮತದಾರರ ಮನೆ ಮನೆಗೆ  ತೆರಳಿ ಬಡವ ಬಲ್ಲಿದ ಎಂಬ ಬೇಧ ಭಾವ ಇಲ್ಲದೆ 10 ಕೆಜಿ ಅಕ್ಕಿ,  ಉಪ್ಪಿನಕಾಯಿ ಡಬ್ಬವನ್ನು ವಿತರಿಸಲು ಪ್ರಾರಂಭಿಸಿದ್ದಾರೆ. ಇಂತಹ ಅಪರೂಪದ ಯುವ ರಾಜಕಾರಣಿ ಪ್ರತೀ ವಾರ್ಡಿಗೂ ಇರಬೇಕೆಂದು ಆ ವಾರ್ಡಿಯಾ ಜನ ಸಾಮಾನ್ಯರು  ಬಯಸುತ್ತಿದ್ದಾರೆ. ಈ ಬಗ್ಗೆ ರಿಪೋರ್ಟರ್ ಕರ್ನಾಟಕಕ್ಕೆ ಫಲಾನುಭಾವಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಯುವ ಕಾಂಗ್ರೆಸ್ ನ ಸುನಿಲ್ ಕುಮಾರ್ ಜಪ್ಪಿನಮೊಗರು ಹಾಗೂ ಅವರ ಆತ್ಮೀಯ ತಂಡ ಕಿಟ್ ವಿತರಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು