10:13 AM Friday30 - January 2026
ಬ್ರೇಕಿಂಗ್ ನ್ಯೂಸ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ…

ಇತ್ತೀಚಿನ ಸುದ್ದಿ

ಕುಟುಂಬದ ದೈವ, ದೇವರ ಆರಾಧನೆಯಿಂದ ಒಳಿತು: ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ 

26/11/2021, 18:27

ಮಂಗಳೂರು(reporterkarnataka.com) : ನಮ್ಮ ಕುಟುಂಬದ ದೈವ, ದೇವತಾರಾಧನೆ ಅಗತ್ಯವಾಗಿ ನಡೆಯಬೇಕಾಗಿದೆ. ನಮ್ಮ ಹಿರಿಯರು ಮಾಡಿಕೊಂಡು ಬಂದ ಸಂಪ್ರದಾಯ, ಕಟ್ಟುಕಟ್ಟಳೆಗಳನ್ನು ಪಾಲಿಸಿಕೊಂಡು ಬಂದಲ್ಲಿ ನಮಗೆ ಸುಖಃ ಸಮೃದ್ಧಿ ಸಿಗುತ್ತದೆ.  ಕುಟುಂಬದ ದೇವತಾಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮೂಡುಬಿದಿರೆ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.

ಕೊಣಾಜೆ ಬೆಳ್ಮ ಅಡ್ಕರಮಜಲುವಿನ ಬೋಲ್ಡನ್‌ ಕುಟುಂಬಸ್ಥರ ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಿಸಿದ ದೈವದ ಮನೆಯಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ಪ್ರತಿಷ್ಠಾಪನೆ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ನಾವು ಎಷ್ಟು ಪೂಜೆ, ಪುನಸ್ಕಾರ ಮಾಡುತ್ತೇವೆನ್ನುವುದು ಮುಖ್ಯ ಅಲ್ಲ. ಅಂತರಂಗ ಶುದ್ಧಿ ಇಟ್ಟುಕೊಂಡು ದೈವಸ್ಥಾನದ ಪ್ರವೇಶಿಸೋಣ. ನನ್ನ ಜೊತೆಗೆ ನನ್ನ ಕುಟುಂಬದವರಿಗೂ ಒಳ್ಳೆಯದಾಗಲಿ ಎನ್ನುವ ಒಳ್ಳೆಯ ಮನಸ್ಸಿನಿಂದ ಒಂದು ಹೂವಿನ ಎಸಲು ಇಟ್ಟರೂ ದೈವ ದೇವರು ಸಂತೃಪ್ತರಾಗುತ್ತಾರೆ. ನಾವೆಲ್ಲರೂ ಒಳ್ಳೆಯ ಮನಸ್ಸಿನಿಂದ ದೇವರ ಕಾರ್ಯದಲ್ಲಿ ಭಾಗಿಯಾಗಬೇಕು. ನಮ್ಮ ಮನಸ್ಸು, ನಾಲಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.


ದೈವದೇವರ ಕಾರ್ಯದಲ್ಲಿ ಯಾವುದೇ ಮನಕ್ಲೇಷಗಳನ್ನು ಇಟ್ಟುಕೊಂಡು ಪಾಲ್ಗೊಳ್ಳಬಾರದು.  ನಮ್ಮ ಜೀವನವನ್ನು ನೋಡಿ ಇನ್ನೊಬ್ಬರು ಕಲಿಯುವಂತಾಗಬೇಕು. ಸದಾ ಒಳ್ಳೆಯದನ್ನು ಮಾಡಬೇಕು. ಹೀಗಿದ್ದರೆ ಮಾತ್ರ ನಮ್ಮ ಬದುಕು ಸಾರ್ಥಕ. ಇಲ್ಲಿ ಜಗದೊಡೆಯ ದೇವರು. ಇಲ್ಲಿ ನಾನು ಎನ್ನುವುದನ್ನು ಬಿಟ್ಟು, ದೇವರು ನನ್ನಿಂದ ಈ ಸೇವೆ ಮಾಡಿಸಿದರು ಎನ್ನುವ ಸೇವೆಯನ್ನು ಮಾಡಿಸಿದರೇ ಅದೇ ಸಾರ್ಥಕ ಎಂದು ಹರಸಿದರು.



ನೂತನ ಮನೆಯಲ್ಲಿ ದೈವಗಳ ಪ್ರತಿಷ್ಠಾಪನೆ :  

ದೈವಗಳಿಗೆ ನಿರ್ಮಿಸಿದ ನೂತನ ದೈವದ ಗೃಹಪ್ರವೇಶವನ್ನು ಅಂಬ್ಲಮೊಗರು ಪ್ರಶಾಂತ್‌ ಉಡುಪ ದಿವ್ಯಹಸ್ತದಿಂದ ನೆರವೇರಿಸಲಾಯಿತು. ನಾಗದೇವರಿಗೆ ತಂಬಿಲ, ಅಶ್ಲೇಷ ಪೂಜೆ, ವಾಸ್ತು ಹೋಮ, ಅಘೋರ ಹೋಮ, ಸತ್ಯನಾರಾಯಣ ಪೂಜೆ, ವೆಂಕಟ್ರಮಣ ಪೂಜೆ, ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ, ಗುಳಿಗನಿಗೆ ಕೋಲೋತ್ಸವ ನಡೆಯಿತು. 



ವಾಸ್ತು ಶಿಲ್ಪಿ ಪ್ರಸನ್ನ ಮುಳಿಯಾಲು, ಗಣೇಶ್‌ ಭಟ್‌ ಮಿತ್ತೂರು, ಬೋಲ್ದನ್ ಕುಟುಂಬಸ್ಥರ ತರವಾಡು ಮನೆಯ ಹಿರಿಯರಾದ ಐತಪ್ಪ ಬೆಳ್ತಂಗಡಿ, ಮೋಹಿನಿ ಬೆಳ್ಮ, ಕಾರ್ಯಕಾರಿ ಸಮಿತಿ ಪ್ರಮುಖರು, ಕುಟುಂಬಸ್ಥರು, ಊರಿನ ಭಕ್ತಾದಿಗಳು, ಹಿಂದೂ ಸಮಾಜದ ಮುಖಂಡರು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು