ಇತ್ತೀಚಿನ ಸುದ್ದಿ
ನಿರಂತರ ಮಳೆ: ಅಥಣಿಯಲ್ಲಿ ಸಾವಿರಾರು ಎಕರೆ ದ್ರಾಕ್ಷೆ ಬೆಳೆ ನಾಶ; ಆಕಾಶದತ್ತ ಮುಖ ಮಾಡಿದ ರೈತರು
25/11/2021, 15:20
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದಲ್ಲಿ ರೈತನ ಕಷ್ಟ ಹೇಳಿ ತೀರದು.ಉತ್ತರ ಕರ್ನಟಕದಲ್ಲಿ ಮಳೆ ಏನೋ ಕಡಿಮೆ ಇದೆ, ಆದರೆ ಮೋಡ ಕವಿದ ವಾತಾವರಣದಿಂದ ವಾಣಿಜ್ಯ ಬೆಳೆ ದ್ರಾಕ್ಷಿ ಈಗ ರೋಗಕ್ಕೆ ತುತ್ತಾಗಿ ಬೆಳೆ ಸಂಪೂರ್ಣ ನಾಶವಾಗಿದೆ.
ಕೋವಿಡನಿಂದ್ ಸತತ ಎರಡು ವರ್ಷ ನಷ್ಟ ಅನುಭವಿಸಿದ ರೈತ ಈಗಲಾದರೂ ಲಾಭ ಆಗಬಹುದು ಎಂದು ರಾತ್ರಿ-ಹಗಲು ಕಷ್ಟಪಟ್ಟು ಇನ್ನೇನು ಬೆಳೆ ಚೆನ್ನಾಗಿ ಬಂತು ಅನ್ನೋವಷ್ಟರಲ್ಲಿ ಪ್ರಕೃತಿ ವಿಕೋಪಕ್ಕೆ ರೈತ ಬಲಿಪಶು ಆಗಿದ್ದಾನೆ.
ತುಂತುರು ಮಳೆಗೆ ದ್ರಾಕ್ಷಿ ಬೆಳೆ ಸಂಪೂರ್ಣ ಕೊಳೆತುಹೋಗಿವೆ. ಎಕರೆಗೆ ಸುಮಾರು ಎರಡರಿಂದ ಮೂರು ಲಕ್ಷ ರೂಪಾಯಿ ಖರ್ಚಾಗಿದ್ದು ಈಗ ಒಂದು ರೂಪಾಯಿ ಕೂಡ ನಮಗಿಲ್ಲ. ಸೂಕ್ತ ಪರಿಹಾರ ಒದಗಿಸುವುದಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತ ಪಾಂಡುರಂಗಹಬಗುಂಡೆ ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಅಥಣಿ ತಾಲೂಕಿನ ಅನಂತಪುರ ಹೂಬಳಿ ವ್ಯಾಪ್ತಿಯಲ್ಲಿ ಸುಮಾರು 100ರಿಂದ 200 ಎಕರೆ ದ್ರಾಕ್ಷಿ ಬೆಳೆದ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ಒದಗಿಸಿ ಎಂದು ಮಾಂತೇಶ್ ಚಿಗ್ರೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ರೈತರಾದ ಪ್ರವೀಣ್ ಪವಾರ ಮಾತನಾಡಿ ನಾನು ಸುಮಾರು 60 ಲಕ್ಷ ಖರ್ಚು ಮಾಡಿ ದ್ರಾಕ್ಷಿ ಬೆಳೆ ಬೆಳೆದಿದ್ದೇನೆ. ಬಡ್ಡಿ ಸಹಿತ ಬಂದಿಲ್ಲ ಎಂದು ನೋವನ್ನ ಹಂಚಿಕೊಂಡರು ಏನೆ ಆಗಲಿ ನೊಂದ ರೈತರ ಕೈ ಹಿಡಿಯುತ್ತ ಸರ್ಕಾರ ಅನ್ನೋದನ್ನ ಕಾದು ನೋಡಬೇಕಾಗಿದೆ.