ಇತ್ತೀಚಿನ ಸುದ್ದಿ
ಅಥಣಿ: ವಿಕಲಚೇತನರಿಗೆ ಕ್ರಿಕೆಟ್ ಕಿಟ್ ವಿತರಿಸಿದ ಡಾ. ಶಿವಬಸು ನಾಯಿಕ
23/11/2021, 19:59
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲ್ಲೂಕಿನ ಅವರಕೋಡ ಗ್ರಾಮದ ರಾಷ್ಟ್ರೋತ್ಥಾನ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಆರೋಗ್ಯ ನಿರೀಕ್ಷಣಾ ಅಧಿಕಾರಿಯಾದ ಡಾ. ಶಿವಬಸು ನಾಯಿಕ ಅವರು ವಿಕಲಚೇತನರಿಗೆ ಕ್ರಿಕೆಟ್ ಕಿಟ್ ವಿತರಣೆ ಮಾಡಿದರು.
ಡಾ.ಶಿವಬಸು ನಾಯಿಕ ಅವರು ವಿಕಲಚೇತನರ ಕುರಿತು ಇವರು ವಿಕಲಚೇತನರಲ್ಲ ಇವರು ವಿಶೇಷಚೇತನರು ಇವರಿಗೆ ಸ್ಪೂರ್ತಿ ನೀಡುವುದು ನಮ್ಮ ಕರ್ತವ್ಯ. ಒಬ್ಬ ವ್ಯಕ್ತಿ ಸದೃಢತೆ ಇದ್ದರೂ ಕೂಡ ಯಾವುದೇ ಕೆಲಸ ಕಾರ್ಯಕ್ಕೆ ಮುಂದೆ ನುಗ್ಗಲ್ಲ. ಆದರೆ ಇವರು ವಿಕಲಚೇತನರಿದ್ದರೂ ಕೂಡಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ರಾಷ್ಟ್ರಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಿ ಎಂದು ಶುಭ ಹಾರೈಸಿದರು.
ವಿಕಲಚೇತನರು ತಾಲೂಕ ಮಟ್ಟ, ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಿ ಈಗ ರಾಜ್ಯಮಟ್ಟದ ತ್ರಿಕೋನ ಪಂದ್ಯಾವಳಿಯಲ್ಲಿ ಇದೇ ತಿಂಗಳು ನವೆಂಬರ್ 28ರಂದು ತಮ್ಮದೇ ಆದ ಛಾಪು ಮೂಡಿಸಲಿದ್ದಾರೆ. ಇವರು ಕಲ್ಪನೆಗೂ ಮೀರಿದ ಕನಸು ಕಂಡು ನನಸು ಮಾಡಿಕೊಂಡ ಸರದಾರರು ಎಂದು ಹೇಳಿದರೆ ತಪ್ಪಾಗಲಾರದು.
ಎಲ್ಲ ವಿಕಲಚೇತನರು ತಮಗೆ ಕ್ರಿಕೆಟ್ ಕಿಟ್ ವಿತರಿಸಿದ ಡಾ. ಶಿವಬಸವ ನಾಯಯಿಕ ಇವರಿಗೆ ಸನ್ಮಾನಿಸಿದರು. ಶಿವ ಬಸು ನಾಯಿಕ ಇವರ ಬಗ್ಗೆ ಹೇಳುವುದಾದರೆ ಇವರು ಒಂದಿಲ್ಲೊಂದು ಸಮಾಜದ ಕಾರ್ಯದಲ್ಲಿ ಜನಸೇವೆಗೆ ಸದಾ ಸಿದ್ಧ ಇವರು ಶಿಕ್ಷಣ ಪ್ರೇಮಿ, ಕ್ರೀಡಾ ಪ್ರೇಮಿ, ರೋಗಿಗಳ ಪಾಲಿನ ದೇವರು ಎಂದೇ ಹೆಸರಾದ ವ್ಯಕ್ತಿ. ವಿಕಲಚೇತನರ ಕುರಿತು ಹಲ್ಯಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮುದಕಣ್ಣ ಶೇಗುಣಸಿ, ಭಾರತೀಯ ಕಿಸಾನ್ ಸಂಘದ ಮುಖಂಡರಾದ ಭರಮಣ್ಣ ನಾಯಕ, ದಶರಥ ಗುರುಗಳು ಮತ್ತು ವಿಕಲಚೇತನರಿಬ್ಬರು ಮಾತನಾಡಿದರು.