3:19 AM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ದೇವರ ತೋಟದ ಸುಂದರ ಕುಸುಮಗಳು: ಮಕ್ಕಳ ಪ್ರಗತಿಯ ಬಗ್ಗೆ ನಮಗೆ ಬದ್ಧತೆ ಇರಲಿ

13/11/2021, 23:51

ಇಂದಿನ ಮಕ್ಕಳೇ ಮುಂದಿನ ಭಾವಿ ಪ್ರಜೆಗಳು.ಮಕ್ಕಳ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ. ಇದಕ್ಕಾಗಿ ಮಕ್ಕಳಲ್ಲಿ ಯಾವ ಸಂಸ್ಕಾರಗಳನ್ನು ಬೆಳೆಸುತ್ತೇವೆ ಅದೇ ರೀತಿ ನಾಳಿನ ಭವಿಷ್ಯ ರೂಪುಗೊಳ್ಳುತ್ತದೆ.
ಶಾಲೆಗಳಲ್ಲಂತೂ  ಈ ದಿನವೂ ಸಂಭ್ರಮವೋ ಸಂಭ್ರಮ ಹೊಸಬಟ್ಟೆ ತೊಟ್ಟು ಹರುಷದಿಂದ ನೋಡುವುದೇ ಸಂಭ್ರಮ. ನಾನು ಶಿಕ್ಷಕಿಯಾಗಿ, ಅದರಲ್ಲೂ ಪ್ರಾಥಮಿಕ ಶಿಕ್ಷಕಿ ಯಾಗಿರುವುದು ಭಾಗ್ಯವೇ ಸರಿ. 

ಮಗು ಮನೆಯಲ್ಲಿನ ಮೊದಲ ಹೂವನ್ನು ನನಗೆ ತಂದು ನೀಡಿದಾಗ ಆ ಮುಖದಲ್ಲಿನ  ಸಂತೋಷ ನನ್ನ ಶಿಕ್ಷಕ ವೃತ್ತಿಗೆ ಸಾರ್ಥಕತೆ ತಂದುಕೊಟ್ಟಿತು.

18-20 ವರ್ಷಗಳ ಮೊದಲು ಶಾಲೆಯಲ್ಲಿ ನನ್ನಿಂದ ಕೈತುತ್ತು  ಉಂಡ ಮಗು ಬಹು ವರ್ಷಗಳ ನಂತರ ಸಿಕ್ಕಾಗ ನನ್ನನ್ನು ಪರಿಚಯಿಸಿದ ರೀತಿ ಇವರು “ನನ್ನ ಟೀಚರ್ ಅಲ್ಲ.  ನನ್ನ ಅಮ್ಮ” ಎಂದಾಗ ಕಣ್ಣಲ್ಲಿ ಆನಂದಭಾಷ್ಪ. 

ಮಕ್ಕಳು ದೇವರ ತೋಟದ ಸುಂದರ ಕುಸುಮಗಳು. ಒಂದೊಂದು ವಿಭಿನ್ನ ಸುಂದರ ಆಕರ್ಷಕ.ಮಕ್ಕಳ ಸರ್ವಾಂಗೀಣ ಪ್ರಗತಿ ಕೇವಲ ಶಿಕ್ಷಕರ, ಹೆತ್ತವರ ಜವಾಬ್ದಾರಿ ಆಗಿರದೆ ಸಮಾಜದ ಜವಾಬ್ದಾರಿಯೂ ಹೌದು.

ಎಳವೆಯಲ್ಲಿಯೇ ಮಗುವಿಗೆ ಮೌಲ್ಯಗಳ ಅರಿವು ಶಿಸ್ತು,ಸಂಯಮಗಳನ್ನು ಕಲಿಸಿ ಬೆಳೆಸಬೇಕು ಇದರ ಜೊತೆಗೆ  ಒಂದು ಸಂಗತಿ ನೆನಪಿಡಬೇಕಾಗಿದೆ. ಮಗು ಎದುರಿಗಿದ್ದವರನ್ನು ನೋಡಿಯೇ ಅನುಸರಿಸಿ ಕಲಿಯುತ್ತದೆ. ಹಾಗಾಗಿ ಹಿರಿಯರಾದ ನಮ್ಮ ಜವಾಬ್ದಾರಿ ತುಂಬಾ ಹಿರಿದು.

ಮಗುವಿಗೆ ಆದರ್ಶವಾಗಿ ಮೌಲ್ಯಗಳನ್ನು ಅನುಸರಿಸಿ ನಾವು ಸಾಗಿದ್ದೆ ಆದರೆ ಮಗು ನಮ್ಮನ್ನು ಅನುಸರಿಸಬಹುದು. ಇಂದಿನ ಈ ಪುಟ್ಟ ಮಕ್ಕಳು ಮುಂದಿನ ದೇಶದ ಭವಿಷ್ಯದ ಪ್ರಜೆಗಳು ಭಾರತದ ನಿರ್ಮಾಣಕಾರರು. ಮಗುವಿನ ಮನಸ್ಸು ಮಣ್ಣಿನ ಮುದ್ದೆಯಂತೆ. ಅದಕ್ಕಾಗಿ ಕುಂಬಾರಿಕೆಯ ಕೆಲಸ ನಾವು ಮಾಡಬೇಕಾಗಿದೆ.

ಒಳಿತು ಕೆಡುಕುಗಳ ತಿಳುವಳಿಕೆ ಮತ್ತು ಮಣ್ಣಿನಿಂದ ಸುಂದರ ಕಲಾಕೃತಿಗಳ ನಿರ್ಮಾಣ ನಮ್ಮ ಜವಾಬ್ದಾರಕುಗಳ ತಿಳುವಳಿಕೆ  ಇತ್ತು. ಮಣ್ಣಿನಿಂದ ಸುಂದರ ಕಲಾಕೃತಿಗಳ ನಿರ್ಮಾಣ ನಮ್ಮ ಜವಾಬ್ದಾರಿ. 

ಒಟ್ಟಿನಲ್ಲಿ ಮಕ್ಕಳ ದಿನಾಚರಣೆ ಪರ್ವಕಾಲದಲ್ಲಿ ಮಕ್ಕಳ ಪ್ರಗತಿಯ ಬಗ್ಗೆ ನಮ್ಮ ಬದ್ಧತೆಯನ್ನು ನವೀಕರಿಸಲು ಸಕಾಲ ನಮ್ಮ ಭವ್ಯ ಭಾರತ ಮುಂದಿನ ಭವ್ಯ ಪ್ರಜೆಗಳಿಂದ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂಬುದೇ ನನ್ನ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು