6:57 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗಲಿ: ಶಿವಕುಮಾರ ಸವದಿ

06/11/2021, 14:34

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ನೂತನ ಹೆಜ್ಜೆ ಇಟ್ಟಿದೆ. ಕ್ರಿಕೆಟ್ ಪಟುಗಳಿಗೆ ನುರಿತ ಆಟಗಾರರಿಂದ ತರಬೇತಿ ನೀಡಲು ಅಥಣಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್  ಸ್ಪೋರ್ಟ್ಸ್ ಕ್ಲಬ್ ಮುಂದಾಗಿದೆ.

ಅಥಣಿ ಪಟ್ಟಣದಲ್ಲಿರುವ ಸುವರ್ಣ ವಿದ್ಯಾಭೂಮಿಯ ಹಿಂದುಗಡೆ ಈ ಸ್ಪೋರ್ಟ್ಸ್ ಕ್ಲಬ್ ಹಾಗೂ ತರಬೇತಿ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. 

ನಂತರ ಮಾತನಾಡಿದ ಯುವ ಮುಖಂಡ ಶಿವಕುಮಾರ ಸವದಿ, ಗ್ರಾಮೀಣ ಭಾಗದ ಯುವಕರಿಗೆ ಕ್ರೀಡೆಯ ಮಹತ್ವ ತಿಳಿಸುವ ಮೂಲಕ ಅವರಿಗೆ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಆನಂದ ಮಟಗಾರ ಅವರ ನೇತೃತ್ವದ ಈ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗುವಂತಾಗಲಿ ಎಂದು ಶುಭ ಹಾರೈಸಿದರು.


ಸುಸಜ್ಜಿತವಾದ ಕ್ರಿಕೆಟ್ ಮೈದಾನದಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಪಡೆದ ಕ್ರೀಡಾಳುಗಳು ಉನ್ನತ ಮಟ್ಟದ ಸಾಧನೆ ಮಾಡುವಂತಾಗಿ ಈ ಕ್ರಿಕೆಟ್ ಕ್ಲಬ್   ಹೆಸರುವಾಸಿಯಗಲಿ ಎಂದು ಕ್ಲಬ್ ನ ರೂವಾರಿಗಳಾದ ಆನಂದ ಮಟಗಾರ್, ಮಲ್ಲಪ್ಪ ಗದ್ಯಾಳ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕ್ರೀಡೆಗಳಲ್ಲಿ ಆಸಕ್ತಿರುವ 8 ರಿಂದ 23 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ತರಬೇತಿ ನೀಡಿ ಸಂಪನ್ಮೂಲ ಭರಿತ ಕ್ರಿಡಾಪಟುಗಳನ್ನಾಗುವಂತೆ ಮಾಡುವುದು ಈ ಕ್ಲಬ್ ನ ಮೂಲ ಉದ್ದೇಶವಾಗಿದೆ. ಈಗಾಗಲೇ 26-10- 2021ರಿಂದ ಪ್ರವೇಶಗಳು ಪ್ರಾರಂಭವಾಗಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅರ್ಹತೆ ಪಡೆದ ನುರಿತ ತರಬೇತುದಾರರಿಂದ 15 ದಿನಗಳಿಗೊಮ್ಮೇ ತರಬೇತಿ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ. ವಾರಕ್ಕೊಮ್ಮೆ ಅಭ್ಯಾಸ ಪಂದ್ಯಗಳನ್ನು ನಡೆಸಿ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗುತ್ತದೆ.

ಹೀಗೆ ಅನೇಕ ನೂತನ ಆಲೋಚನೆ ಗಳೊಂದಿಗೆ ಈ ಕ್ಲಬ್ ಮುನ್ನಡೆಯುತ್ತಿರುವುದು ತಾಲೂಕಿನ ಕ್ರೀಡಾಳುಗಳಿಗೆ ಹೊಸ ಹುರುಪಿನೊಂದಿಗೆ ತರಬೇತಿ ಪಡೆಯುವಂತಾಗಿದೆ.


ಈ ವೇಳೆಯಲ್ಲಿ ಆನಂದ ಮಟಗಾರ, ಬಸಯ್ಯ ಸ್ವಾಮೀಜಿ, ಮಾರುತಿ ಬಸಗೌಡರ್, ಮಲ್ಲಪ್ಪ ಗದ್ಯಾಳ, ಆಕಾಶ್ ಹೊನ್ನಳ್ಳಿ,ಮಾಂತೇಶ್ ಮಾಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು