8:20 PM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

8 ದಿನ ಕಳೆದರೂ ದುರಸ್ತಿ ಕಾಣದ ಮೂಡಿಗೆರೆ ಸರಕಾರಿ ಆಸ್ಪತ್ರೆ ಡಯಾಲಿಸೀಸ್ ಯಂತ್ರ!; ಉಸಿರು ಬಿಗಿ ಹಿಡಿದ ಕಿಡ್ನಿ ರೋಗಿಗಳು!!

04/11/2021, 18:53

ಸಂತೋಷ್ ಅತ್ತಿಗೆರೆ ಮೂಡಿಗೆರೆ
info.reporterkarnataka@gmail.com

ಮೂಡಿಗೆರೆ ಎಂಜಿಎಂ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸೀಸ್ ಘಟಕದ ಯಂತ್ರ ಕೆಟ್ಟು ಹೋಗಿ 8 ದಿನಗಳು ಕಳೆದಿದ್ದು, ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಇದೇ ಆಸ್ಪತ್ರೆಯನ್ನು ನಂಬಿ ಬದುಕಿರುವ ಕಿಡ್ನಿ ಸಮಸ್ಯೆಯ ನೂರಾರು ರೋಗಿಗಳು ಚಿಕಿತ್ಸೆ ಇಲ್ಲದೆ ಉಸಿರು ಬಿಗಿ ಹಿಡಿದುಕೊಂಡು ಒದ್ದಾಡುತ್ತಿದ್ದಾರೆ.

ಆಸ್ಪತ್ರೆಯ ಡಯಾಲಿಸೀಸ್ ಯಂತ್ರ ಕೆಟ್ಟು ಹೋಗಿ ಬರೋಬ್ಬರಿ 8 ದಿನಗಳು ಕಳೆದಿವೆ. ಆರೋಗ್ಯ ಇಲಾಖೆ, ಸ್ಥಳೀಯ ಶಾಸಕರು ಕ್ಯಾರೇ ಮಾಡದೆ ಏನೂ ಆಗಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಶ್ರೀಮಂತರು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಡಯಾಲಿಸೀಸ್ ಮಾಡಿಕೊಳ್ಳುತ್ತಾರೆ. ಆದರೆ ಬಡವರು, ಕೆಳ ಮಧ್ಯಮ ವರ್ಗದವರು ಏನು ಮಾಡಬೇಕು ಸ್ವಾಮಿ? ಅವರ ಉಸಿರಿಗೆ ಬೆಲೆ ಇಲ್ವೇ?

ಇದೀಗ ಆಸ್ಪತ್ರೆಯ ಯಂತ್ರ ಕೆಟ್ಟು ಹೋಗಿರುವುದರಿಂದ ವಾರಕ್ಕೆರಡು ಮೂರು ಡಯಾಲಿಸೀಸ್ ಮಾಡಿಸುವವರಿಗೆ ವಾರಕ್ಕೊಂದು ಡಯಾಲಿಸೀಸ್ ನೀಡುತ್ತಿದ್ದಾರೆ. ಇದರಿಂದ ರೋಗಿಗಳು ದೇಹದಲ್ಲಿ ನೀರು ಹಾಗೂ ಇತರೆ ತ್ಯಾಜ್ಯಗಳು ಹೊರ ಹೋಗದೆ ಶ್ವಾಸ ಕೋಶದಲ್ಲಿ ನೀರು ತುಂಬಿ ಉಸಿರಾಡಲು ತೊಂದರೆ ಪಡುತ್ತಿದ್ದಾರೆ. 

ಇತ್ತೀಚಿನ ಸುದ್ದಿ

ಜಾಹೀರಾತು