1:38 PM Saturday8 - August 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ…

ಇತ್ತೀಚಿನ ಸುದ್ದಿ

ಮಂಗಳೂರು: ದೀಪಾವಳಿ ದಿನವೇ ರಥಬೀದಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಟೂರ್ ಮೆನೇಜರ್ ಭೀಕರ ಕೊಲೆ

04/11/2021, 12:02

ಮಂಗಳೂರು(reporterkarnataka.com):

ನಗರದ ಕಾರ್ ಸ್ಟ್ರೀಟ್ ನ ಅಪಾರ್ಟ್ ವೊಂದರಲ್ಲಿ ಬುಧವಾರ ರಾತ್ರಿ ವಿನಾಯಕ ಕಾಮತ್ ಎಂಬುವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಅದೇ ಅಪಾರ್ಟ್ ಮೆಂಟಿನ ನಿವಾಸಿಗಳಾದ ಕೃಷ್ಣಾನಂದ ಕಿಣಿ ಹಾಗೂ ಅವರ ಮಗ ಅವಿನಾಶ್ ಕಿಣಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಮೃತರ ಪತ್ನಿ ಅಮಣಿ ಕಾಮತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಾರ್ ಸ್ಟ್ರೀಟ್ ನ ವೀರವೆಂಕಟೇಶ ಅಪಾರ್ಟ್ ಮೆಂಟ್  ಈ ಹತ್ಯೆ ನಡೆದಿದೆ. ವಿನಾಯಕ ಕಾಮತ್  ಎಂಬವರು ಪತ್ನಿ ಅಮಣಿ ಕಾಮತ್, ಪುತ್ರ ಮೂರುವರೆ ವರ್ಷ ಪ್ರಾಯದ ಉತ್ತಮ ಕಾಮತ್ ಹಾಗೂ ಅತ್ತೆ ವಿಜಯಲಕ್ಷ್ಮೀ ಕಾಮತ್ ಅವರ ಜತೆ ಕಳೆದ 5 ವರ್ಷಗಳಿಂದ ಇದೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು. ಕೊಲೆ ಆರೋಪಿಗಳಾದ ಕೃಷ್ಣಾನಂದ ಕಿಣಿ ಹಾಗೂ ಅವರ ಪುತ್ರ ಅವಿನಾಶ್ ಕಿಣಿ ಕೂಡ ಇದೇ ಅಪಾರ್ಟ್ ಮೆಂಟ್ ನ ನಿವಾಸಿಗಳಾಗಿದ್ದಾರೆ. ವಿಕ್ರಮ ಟ್ರಾವೆಲ್ಸ್ ನಲ್ಲಿ ಟೂರ್ ಮೆನೇಜರ್ ಆಗಿರುವ ವಿನಾಯಕ

ಕಾಮತ್ ಅವರ ಜತೆ ಆರೋಪಿಗಳು ಈ ಹಿಂದೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿದ್ದರು. ಬುಧವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಅಪಾರ್ಟ್ ಮೆಂಟ್ ನವರು ಕೆಳಗಡೆ ಪಟಾಕಿ ಸಿಡಿಸುತ್ತಿದ್ದಾಗ ವಿನಾಯಕ ಕಾಮತ್ ಕೂಡ ಅಲ್ಲಿಗೆ ಹೋಗಿದ್ದರು. ಇದೇ ವೇಳೆ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರು ಕಾರ್ ಪಾರ್ಕಿಂಗ್ ಸ್ಥಳದಲ್ಲಿ

ವಿನಾಯಕ ಕಾಮತ್ ಜತೆ ಜಗಳವಾಡಿ ಚೂರಿಯಿಂದ ಇರಿದ್ದಾರೆ. ತೀವ್ರ ಗಾಯಗೊಂಡ ವಿನಾಯಕ ಕಾಮತ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 1.30ರ ವೇಳೆಗೆ ಮೃತಪಟ್ಟಿದ್ದಾರೆ.

ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರು ಕೊಲೆ ಮಾಡುವ ಉದ್ದೇಶದಿಂದಲೇ ವಿನಾಯಕ ಕಾಮತ್ ಜತೆ ಜಗಳವಾಡಿ ಚೂರಿಯಿಂದ ಇರಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು