9:11 AM Saturday20 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ವಿವಿಧತೆಯನ್ನು ಸಂಭ್ರಮಿಸುವುದೇ ಭಾರತೀಯತೆ:  ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೊಯ್ ಕಾಸ್ತೆಲಿನೊ

03/11/2021, 22:14

ಮಂಗಳೂರು(reporterkarnataka.com): ಭಾರತವು ವಿವಿಧ ಭಾಷೆ, ಸಂಸ್ಕೃತಿಗಳ ದೇಶವಾಗಿದೆ. ಇಲ್ಲಿ ಸೋದರ ಭಾಷೆಯಲ್ಲಿ ಮಾತನಾಡಲು ಕಲಿತರೆ ಮಾತ್ರ ಸಾಕಾಗದು ನಮ್ಮ ಮಾತೃಭಾಷೆ ಯನ್ನೂ ಒಳಗೊಂಡಂತೆ ಎಲ್ಲಾ ಭಾಷೆಗಳನ್ನು ಸಂಭ್ರಮಿಸಬೇಕು ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೊಯ್ ಕಾಸ್ತೆಲಿನೊ ಹೇಳಿದರು.

ಅವರು ಡೊನ್ ಬೊಸ್ಕೊ ಹೊಲ್ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಧ್ವಜವನ್ನು ಅರಳಿಸಿದ ನಂತರ ಮಾತನಾಡಿದರು.

1956 ಮೈಸೂರು ಕನ್ನಡ ರಾಜ್ಯದ ನಂತರ ಇಂದಿನವರೆಗೆ ಭಾಷೆಯನ್ನು ಶ್ರೀಮಂತ ಮಾಡಿದ ಕವಿಗಳ, ಲೇಖಕರ ಹಾಗೂ ಸಾಹಿತ್ಯದ ವಿವಿಧ ಸಂಸ್ಕೃತಿಗಳ ಉಳಿಸಿ ಬೆಳೆಸಿದವರಿಗೆ ನಮನ ಹೇಳುವ ರಾಜ್ಯೋತ್ಸವ ಕಾರ್ಯಕ್ರಮ ಪಿಂಗಾರ ಸಾಹಿತ್ಯ ಬಳಗದಲ್ಲಿ 18 ವರುಷಗಳಿಂದ ಮಾಡುವುದು ಅಭಿನಂದನಾರ್ಹ‌ ಎಂದರು.

58 ಧಾರವಾಹಿಗಳನ್ನು ಬರೆದು ವಿವಿಧ ವಾರ ಹಾಗೂ‌ ಮಾಸ ಪತ್ರಿಕೆಗಳಲ್ಲಿ ‌ಪ್ರಕಟಗೊಂಡ ಪ್ರಯುಕ್ತ ” ಕನ್ನಡ ‌ಕಸ್ತೂರಿ” ಬಿರುದನ್ನು ಪಿ ವಿ ಪ್ರದೀಪ್ ಕುಮಾರ್ ಅವರಿಗೆ ‌ಪ್ರದಾನ ಮಾಡಿದ ಮುಖ್ಯ ಅತಿಥಿ ಸಾವ್ಕಾರ್ ಕಿರಣ್‌ ಪೈ‌ ಮಾತನಾಡಿ ಮಾತುಗಳು ‌ಮಾತ್ರವೇ ಒಬ್ಬರನ್ನೊಬ್ಬರು ಬೆಸೆಯಬಲ್ಲವು. ನಮ್ಮೊಳಗಿನ ಆಶಯಗಳನ್ನು ಸರಿಯಾಗಿ ಹೇಳಲು‌ ನಾವು ಒಳಗೇ ಒಳ್ಳೆಯವರಾಗಬೇಕು. ಸಾಹಿತಿ ಪ್ರದೀಪ್ ಅಂತಹವರು ಸಾಹಿತ್ಯದಿಂದ ಬದಲಾವಣೆ ಸಮಾಜದಲ್ಲಿ ಬದಲಾವಣೆ ಮಾಡಬಲ್ಲರು ಎಂದರು.

ಸನ್ಮಾನ‌ ಸ್ವೀಕರಿಸಿದ  ಪ್ರದೀಪ್ ಕುಮಾರ್ ಮಾತನಾಡಿ ಬಯಸದೇ ಬಂದ ಭಾಗ್ಯ ಇದು.ಕೇಳದೆ ಪ್ರಶಸ್ತಿ ನೀಡಿದ‌ ಪಿಂಗಾರ ಸಂಸ್ಥೆಯನ್ನು ಮರೆಯಲಾರೆ ಎಂದರು.

ರಾಜ್ಯೋತ್ಸವ ಕಾರ್ಯಕ್ರಮದ ಅದ್ಯಕ್ಷ ತೆಯನ್ನು ಹೆಸರಾಂತ ‌ಗಝಲ್‌ ಕವಿ ಡಾ ಸುರೇಶ ನೆಗಳಗುಳಿ  ವಹಿಸಿ ಮಾತನಾಡಿ, ಕನ್ನಡದ ಮನಗಳು ಅಭಿವೃದ್ದಿಶೀಲ ಆಲೋಚನೆಗಳಿಂದ ಇರಬೇಕು. ಇದರ ಪರಿಣಾಮವಾಗಿ ಎಲ್ಲರೂ ಜೊತೆಗೂಡಿ ಬೆಳೆಯಬಹುದು ಎಂದು ನುಡಿದರು. 

ಮುಖ್ಯ ಅತಿಥಿಗಳಾಗಿ ಚುಟುಕು ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕಿನ ಅದ್ಯಕ್ಷ ಕಾ ವಿ ಕೃಷ್ಣ ದಾಸ್ ಮಾತನಾಡಿ ಸಾಹಿತ್ಯದಲ್ಲಿ ನಮ್ಮದು ಪರರದು ಎಂಬುದಿಲ್ಲ ಅದು ಬರೆದು ಪ್ರಕಟಿಸಿದ ನಂತರ ಸಾರ್ವಜನಿಕ ಎಂದರು.

ಕೊಂಕ್ಣಿ ನಾಟಕ ಸಭಾ ದ ಉಪಾಧ್ಯಕ್ಷ ‌ಲಿಸ್ಟನ್ ಡಿಸೋಜ ಇಡೀ ಕಾರ್ಯವನ್ನು ಅಯೋಜಿಸಿದ ಎಲ್ಲಾ ಅತಿಥಿ ಗಣ್ಯರಿಗೆ ವಂದಿಸಿದರು.

ಕೊಂಕ್ಣಿ ಅಕಾಡೆಮಿ ‌ಸದಸ್ಯರಾದ ಇರ್ವತ್ತೂರು‌ ನವೀನ್ ನಾಯಕ್ ಮಾತನಾಡಿ, ಪಿಂಗಾರ  ಸಂಸ್ಥೆಯು ನಿರಂತರತೆ ಕಾಪಾಡಿದೆ.ಇದು ನಾವೆಲ್ಲಾ ಜೊತೆಗೂಡಿ ಸಹಕರಿಸುವ ಸಂಸ್ಥೆ,ಎಂದರು.


ನಂತರ ಆಯ್ದ ಕವಿಗಳಿಂದ ವೈದ್ಯೆ ಡಾ ವಾಣಿ ಶ್ರೀ ಕಾಸರಗೋಡು ಅವರ ಅದ್ಯಕ್ಷ ತೆಯಲ್ಲಿ ಕನ್ನಡ ಕವಿಗೋಷ್ಟಿ ನಡೆಯಿತು. ಹೆಸರಾಂತ ಕವಿಗಳಿಂದ ಕವಿತೆಗಳು ಮಂಡನೆಯಾದುವು.

ಸಿಯಾನ ಬಿ‌.ಎಂ. ಜೊಸ್ಸಿ ಪಿಂಟೊ, ಕಾ ವಿ ಕೃಷ್ಣದಾಸ್, ಶಾಂತ ಪುತ್ತೂರು, ವೈದ್ಯ ಡಾ ಸುರೇಶ ನೆಗಳಗುಳಿ, ಜಯಾನಂದ ಪೆರಾಜೆ, ದೀಪಾ ಪಾವಂಜೆ, ಶ್ವೇತಾ ಕಜೆ, ದಯಾನಂದ ರೈ ಕಳುವಾಜೆ, ಹಿತೇಶ್ ಕುಮಾರ್‌, ಲಕ್ಷ್ಮಿ ವಿ ಭಟ್, ಮಂಜುಶ್ರೀ ನಲ್ಕ,ಮನ್ಸೂರ್ ಮುಲ್ಕಿ, ಪರಿಮಳ ಮಹೇಶ್, ರಾಮಕೃಷ್ಣ ಶಿರೂರು,ರೇಮಂಡ್ ಡಿಕೂನಾ ತಾಕೊಡೆ, ಅಶೋಕ್ ಕಡೇಶಿವಾಲಯ

ಮೊದಲು ಕಾರ್ಯಕ್ರಮ ಸಂಚಾಲಕರಾದ ರೇಮಂಡ್ ಡಿಕೂನಾ ಸ್ವಾಗತಿಸಿದರು. ಸಂಸ್ಥೆಯ ಸಂಯೋಜಕರಾದ ಲಿಸ್ಟನ್‌‌ ಡಿಸೋಜ ವಂದಿಸಿದರು. ಜೊಸ್ಸಿ ಪಿಂಟೊ ‌ಕಿನ್ನಿಗೋಳಿ ನಿರೂಪಿಸಿದರು. ಬೊನಿಫಸ್ ಪಿಂಟೊ ಸಹಕರಿಸಿದರು. ಯುವ ಗಾಯಕ ಕುಂಟಿನಿ ಪುತ್ತೂರು ಕನ್ನಡ ಗೀತೆಗಳನ್ನು ಹಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು