2:53 AM Tuesday30 - April 2024
ಬ್ರೇಕಿಂಗ್ ನ್ಯೂಸ್
ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ… ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು

ಇತ್ತೀಚಿನ ಸುದ್ದಿ

ಸಾಲು ಸಾಲು ದೀಪಗಳ ಮಾಲೆ, ಆಕಾಶಬುಟ್ಟಿ: ದೀಪಾವಳಿ ಏನಿದರ ಅರ್ಥ?: ನಕರಾತ್ಮದಿಂದ ಸಕರಾತ್ಮವೇ?

03/11/2021, 07:50

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ, ಅರ್ಥಾತ್ ನಮ್ಮ ಜೀವನದ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ತರಲಿ ಎಂದು ಸಂಭ್ರಮಿಸುವ ಒಂದು ವಿಶೇಷ ಪರ್ವ ದೀಪಾವಳಿ. 

ನಿಶೆಯನ್ನು ಹೊಡೆದೋಡಿಸುವುದು ಎಂಬ ಅರ್ಥವೂ ಇದೆ. ನಮ್ಮ ಮನದ ಋಣಾತ್ಮಕ ಭಾವಗಳನ್ನು ತೊರೆದು ಸಕಾರಾತ್ಮಕನ್ನು ಬೆಳಗಿಸಲು ದೀಪಗಳನ್ನು ಬೆಳಗುತ್ತೇವೆ. ದೀಪಾವಳಿ ಎಂದರೆ ತಕ್ಷಣ ನೆನಪಿಗೆ ಬರುವುದು ಸಾಲು ಸಾಲು ದೀಪಗಳ ಸಾಲು, ಆಕಾಶಬುಟ್ಟಿ, ಪ್ರತಿನಿತ್ಯ ಮನೆಯಲ್ಲಿ ಬೆಳಗುವ ದೀಪ ಜೀವನದ ಆಶೋತ್ತರಗಳ ದ್ಯೋತಕ. 

ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಶುಭ ಸಮಾರಂಭ ಆರಂಭವಾಗುವುದು ದೀಪ ಬೆಳಗುವ ಮೂಲಕ. ಇಲ್ಲಿ ಬೆಳಕನ್ನು ಜೀವನ ವೃದ್ಧಿಯ ದ್ಯೋತಕವಾಗಿ ಕಾಣುತ್ತೇವೆ. ದೀಪದ ಬೆಳಕು ಯಾವಾಗಲೂ ಊರ್ಧ್ವ ಮುಖಿಯಾಗಿರುತ್ತದೆ. ಅಂದರೆ ನಾವು ದೀಪದಂತೆ ಉರಿದು ಇತರರ ಬಾಳಿಗೆ ಬೆಳಕು ನೀಡಬೇಕೆಂಬುದೇ ಆಶಯ.

ಕಾರ್ತಿಕ ಮಾಸದಲ್ಲಿ ಆಚರಿಸುವ ಈ ಹಬ್ಬದ ಜೊತೆಗೆ ಎಲ್ಲಾ ದೇವಾಲಯಗಳಲ್ಲಿಯೂ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾರ್ತಿಕ ಮಾಸದುದ್ದಕ್ಕೂ ದೀಪೋತ್ಸವವನ್ನು ಆಚರಿಸಲಾಗುತ್ತದೆ.

ಭಾರತೀಯರಾದ ನಮಗೆ ದೀಪ ಎನ್ನುವುದು ಸೂರ್ಯನ ಪುಟ್ಟ ಪ್ರತಿರೂಪದಂತೆ.

ಜ್ಞಾನದ ಸಂಕೇತ ವೈರತ್ವದ ಮೇಲೆ ವಿಜಯ ಗಳಿಸಿದ ಸಂಕೇತ, ಮುಖ್ಯವಾಗಿ ನಮ್ಮೊಳಗಿನ ಎಲ್ಲಾ ದುರ್ಗುಣಗಳನ್ನು ಹೊಡೆದೋಡಿಸಿ ಬೆಳಕನ್ನು ಬೆಳಗಿಸುವ ಹಬ್ಬ.

 ಶ್ರೀರಾಮಚಂದ್ರನ ಪಟ್ಟಾಭಿಷೇಕ ನರಕಾಸುರನ ಸಂಹಾರ ಇದೆಲ್ಲವೂ ನಡೆದದ್ದು ಇದೇ ದಿನದಂದು.

ಒಟ್ಟಿನಲ್ಲಿ ದೀಪಾವಳಿಯೆಂದರೆ ಕರಾಳ ಶಕ್ತಿಗಳನ್ನು ಸಂಹರಿಸಿ ಎಲ್ಲರ ಬದುಕಿನಲ್ಲಿ ಬೆಳಕು ತಂದ ಪರ್ವದಿನ. ಈ ದೀಪಾವಳಿ ನಮಗೆಲ್ಲರಿಗೂ ಸುಖ ಸಮೃದ್ಧಿ ನೆಮ್ಮದಿ ತರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

” ಲೋಕ ಸಮಸ್ತಾ  ಸುಖಿನೋ ಭವಂತು””

✍️

ಇತ್ತೀಚಿನ ಸುದ್ದಿ

ಜಾಹೀರಾತು