12:26 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ಶಿವದೀಕ್ಷೆ ಸಂಸ್ಕಾರ ಶಿಬಿರ: 151 ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ ದೀಕ್ಷೆ

02/11/2021, 11:25

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮಸ್ಕಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಶಿವದೀಕ್ಷೆ ಸಂಸ್ಕಾರ ಶಿಬಿರದಲ್ಲಿ 151 ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ ನಡೆಸಲಾಯಿತು.

ಮುಖಂಡ ಚಂದ್ರ ಭೂಪಲ್ ನಾಡಗೌಡ್ರು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಲ್ಲ ಮಠಾಧೀಶರುಗಳ ಹಾಗೂ ಜಂಗಮ ಸಮಾಜದ ಗುರುಹಿರಿಯರ ನಂತರ ಆಶೀರ್ವಾದ ಪಡೆದರು. ನಂತರ ಜಗದ್ಗುರುಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ, ವಿಧ ವಿಧದ ಭಜನೆ, ಬಾಜಿ, ಡೊಳ್ಳು, ಕಳಸ ಕನ್ನಡಿ ಒಂದಿಗೆ ಪ್ರಮುಖ ಬೀದಿಗಳಲ್ಲಿ ಶರಣರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಚಿಕ್ಕಮಗಳೂರಿನಿಂದ ಕಲಾ ಪುರೋಹಿತರನ್ನು ಕರಿಸಿ ನೋಡುಗರನ್ನು ಆಕರ್ಷಿಸುವಂತೆ ಕಾರ್ಯಕ್ರಮಗಳು ಜರುಗಿದವು. ಶರಣರ ಆಶೀರ್ವಾದದಿಂದ ಕಾರ್ಯಕ್ರಮಕ್ಕೆ ಆಯೋಜಿಸಿದ್ದ ಭಕ್ತರ ಪಾವನ ಎಂಬಂತೆ ಶರಣರ ಮಾರ್ಗದರ್ಶನ ಜೀವನದ ಅವಶ್ಯಕ ಎಂಬುವುದನ್ನು ನಾವು ಹರಿದು ಕೊಳ್ಳಬೇಕೆಂದು ಶರಣರು ಹೇಳಿದರು ಕಾರ್ಯಕ್ರಮದ ಪ್ರಮುಖ ಘಟ್ಟವಾದ ಜಂಗಮ ಸಮಾಜದ ಧರ್ಮೋಪದೇಶ ಜಾಗೃತಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಸತ್ಯಧ್ವನಿ ಪತ್ರಿಕೆ ಸಂಪಾದಕ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ, ಶಿವಶರಣರು, ಪುರೋಹಿತರು, ಬಸವರಾಜ್ ಬಾದರ್ಲಿ, ಶಿಕ್ಷಕ ವೈಜನಾಥ್, ಮಲ್ಲಯ್ಯ

ನವಲಿ, ವೀರೇಶ್ ರಾರವಿ, ಶಿವಕುಮಾರ್, ಗೀತಾ ಹಿರೇಮಠ, ಶಿವಲೀಲಾ ಹಿರೇಮಠ ಪುರೋಹಿತರು ಬಸವರಾಜ್ ಗೊರೆಬಾಳ್,ಅಭಿನವ ಗಿಣಿವಾರ, ಶಿವಯೋಗಿ ಮಸ್ಕಿಯ ಗಚ್ಚಿನ ಮಠದ ವರ ರುದ್ರಮುನಿ ಶಿವಾಚಾರ್ಯರು ತುರುವಿಹಾಳ, ಅಮರಗುಂಡ ದೇವರು ಅಭಿನವ ಸೋಮನಾಥ ಶಿವಾಚಾರ್ಯರ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು