11:58 PM Saturday4 - May 2024
ಬ್ರೇಕಿಂಗ್ ನ್ಯೂಸ್
ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ…

ಇತ್ತೀಚಿನ ಸುದ್ದಿ

ಅಬ್ಬಬ್ಬಾ.!! ಬೆರಗಾಗಿಸಿ ಬಿಡುತ್ತೆ ಇವರ ಸಾಹಸ ; 5425ಮೀ ಎತ್ತರ ಶಿಖರ ಏರಿ, 3 ಸಾವಿರ ಕಿಮೀ. ಸೈಕ್ಲಿಂಗ್ ಮಾಡಿ, 300 ಕಿಮೀ. ಸಮುದ್ರಯಾನ ಮುಗಿಸಿದ ಧೀರೆಯರು..!

01/11/2021, 21:24

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(Reporterkarnataka.com):
ಸಾಗರದ ಆಳವನ್ನು ಕಂಡರೆ ಬೆಚ್ಚಿ ಬೀಳುತ್ತೇವೆ, ಸಾವಿರ ಅಡಿ ಎತ್ತರದ ಬೆಟ್ಟವನ್ನು ಹತ್ತುವ ಕಲ್ಪನೆಯೇ ಅಪಾಯಕಾರಿಯಾಗಿ ಕಾಣುತ್ತದೆ. ಹತ್ತು ಕಿಲೋ ಮೀಟರ್ ಸೈಕಲಿಂಗ್ ಮಾಡುವುದೇ ಸುಸ್ತುದಾಯಕ ಎನಿಸುತ್ತದೆ.

ವೀಡಿಯೋ..

ಆದರೆ ಇಲ್ಲೊಂದು ನುರಿತ ಹುಡುಗಿಯರ ತಂಡ 5,425 ಮೀಟರ್ ಎತ್ತರದ ಕಾಶ್ಮೀರದ ಕೊಲೋಯ್‌ ಶಿಖರವನ್ನು ಯಶಸ್ವಿಯಾಗಿ ಏರಿ, 3,000 ಕಿ.ಮೀ ದುರ್ಗಮ ಹಾದಿಯ ಸೈಕಲ್ ಯಾನವನ್ನು ಮುಗಿಸಿ, ಕಾರವಾರದಿಂದ ಮಂಗಳೂರಿನವರೆಗೂ 300 ಕಿ.ಮೀ ಕಯಾಕಿಂಗ್ ಯಾನ ಯಶಸ್ವಿಯಾಗಿ ಪೂರ್ತಿಗೊಳಿಸಿ ತಾಯ್ನಾಡಿಗೆ ವಾಪಾಸಾಗಿದ್ದಾರೆ.


ಕಾರವಾರದಿಂದ ಹೊರಟು ಸೋಮವಾರ ಉಳ್ಳಾಲ ಬೀಚ್‌ ತಲುಪಿದ ಯುವತಿಯರ ತಂಡವನ್ನು ಸಂಭ್ರಮದಿಂದ ಬರ ಮಾಡಿಕೊಂಡು ಅಭಿನಂದಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋಟ ಶ್ರೀನಿವಾಸ ಪೂಜಾರಿ, ಸಮಾಜದ ಕಟ್ಟಕಡೆಯ ಸಮುದಾಯದಿಂದ ಬಂದಂತಹ ಯುವತಿಯರು ಇಂದು ಅಭಿಯಾನವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ್ದಾರೆ. ಈ ಮೂಲಕ ಇತರರಿಗೂ ಅವರು ಸ್ಪೂರ್ತಿಯಾಗಿದ್ದಾರೆ. ಹಾಗೆಯೆ ಅವರಿಗೆ ವಿಧಾನ ಸಭೆಯಲ್ಲಿಯೂ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.


ಶಾಸಕ ಯು.ಟಿ.ಖಾದರ್ ಮಾತನಾಡಿ, ಯುವತಿಯರ ಈ ಸಾಧನೆ ಸಮುದಾಯದ ಇತರ ಯುವತಿಯರಿಗೂ ಮಾದರಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಗುಲ್ಬರ್ಗಾದಲ್ಲಿರುವ ಜನರಲ್ ಕಾರಿಯಪ್ಪ ಅಡ್ವೆಂಚರ್ ಕ್ಲಬ್‌ನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರಂಭಿಸುವಂತೆ ಸರಕಾರಕ್ಕೆ ಮನವೊಲಿಸಲಾಗುವುದು ಎಂದರು.

ಈ ಸಂದರ್ಭ ತಂಡದಲ್ಲಿದ್ದ ಮೈಸೂರಿ‌ನ ಬಿಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ,ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಕೀರ್ತಿ ಪಯಾಸ್,  ಉಳ್ಳಾಲ ನಗಸಭೆ ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್ ಉಳ್ಳಾಲ್, ಸದಸ್ಯರಾದ ಭಾರತಿ, ಸುರೇಶ್ ಭಟ್ ನಗರ, ನಗರಸಭೆ ಪೌರಾಯುಕ್ತ ರಾಯಪ್ಪ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಜನ ಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ಸಾಧನೆಯ ಹಾದಿ:
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್‌ 17ರಂದು ಅಭಿಯಾನ ಶುರುಮಾಡಿರುವ ಯುವತಿಯರು, ಈಗಾಗಲೇ ಅತಿ ದುರ್ಗಮ ಹಾಗೂ ಅಪಾಯಕಾರಿ ಕಾಶ್ಮೀರದ ಕೊಲೋಯ್‌ ಶಿಖರವನ್ನು ಯಶಸ್ವಿಯಾಗಿ ಏರಿ ಇಳಿದಿದ್ದಾರೆ. 2019ರಲ್ಲಿ ಕೊಲೋಯ್ ಶಿಖರ್ ಏರುವಾಗ ಇಬ್ಬರು ಮೃತಪಟ್ಟಿದ್ದರು. ಬಳಿಕ ಈ ಶಿಖರವನ್ನು ಯಾರೂ ಏರಿರಲಿಲ್ಲ. ಇದೀಗ ಕರ್ನಾಟಕದ ಕುವರಿಯರು ಶಿಖರ ಏರಿರುವುದು ಸಾಧನೆಯೇ ಸರಿ.
ಶಿಖರವೇರಿದ ಬಳಿಕ ಲಡಾಕ್‌ನ ಖರ್ದೂಲಾದ ಅತಿ ಎತ್ತರದ ಪಾಯಿಂಟ್‌ನಿಂದ ಕಾರವಾರದವರೆಗೂ 3,000 ಕಿ.ಮೀ ಸವಾಲಿನ ಹಾದಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಒಂದೇ ದಿನ 200 ಕಿ.ಮೀ ಸೈಕ್ಲಿಂಗ್‌ ಮಾಡಿದ್ದು ಯುವತಿಯರ ಸಾಧನೆ.


ಕಾರವಾರದಿಂದ ಮಂಗಳೂರಿನವರೆಗೆ ಸಮುದ್ರದಲ್ಲಿ 300 ಕಿ.ಮೀ ಕಯಾಕಿಂಗ್ ಯಾನವನ್ನೂ ಪೂರ್ತಿಗೊಳಿಸಿದ್ದಾರೆ.

ಈ ಸಾಹಸಯಾನಕ್ಕೆ ಬೆಂಬಲವಾಗಿ ಕೀರ್ತಿ, ವಿಜಯ್‌ ರಾಘವನ್, ಶಬ್ಬೀರ್, ಬಷೀರ್, ವಿನಾಯಕ್ ನಿಂತಿದ್ದರು.

ಸಾಧಕಿಯರ ಪರಿಚಯ :
ಶಿವಮೊಗ್ಗ ಜಿಲ್ಲೆಯವರಾದ ಐಶ್ವರ್ಯಾ, ಧನಲಕ್ಷ್ಮಿ ಹಾಗೂ ಬೆಂಗಳೂರಿನವರಾದ ಆಶಾ ಓರಿಯಂಟೇಷನ್ ಹಾಗೂ ಪ್ರಾಥಮಿಕ ಹಂತದ ಪರ್ವತಾರೋಹಣ ಕೋರ್ಸ್ ತೇರ್ಗಡೆಯಾಗಿದ್ದು, 2020ರಲ್ಲಿ ಮಿಷನ್ ಸುಭದ್ರ ಕಾರ್ಯಕ್ರಮದಡಿ ಭದ್ರಾನದಿಯಲ್ಲಿ 135 ಕಿ.ಮೀ ಕಯಾಕಿಂಗ್ ಯಾನ ಪೂರೈಸಿದ್ದಾರೆ. 2020, 2021ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದಾರೆ. ಧನಲಕ್ಷ್ಮಿ 2021ರಲ್ಲಿ ಖೇಲೋ ಇಂಡಿಯಾ ವಿಂಟರ್‌ಗೇಮ್ಸ್‌ನಲ್ಲಿ 5 ಕಿ.ಮೀ ಹಾಗೂ 1.5 ಕಿ.ಮೀ ಸ್ಕೋ ಪೂಸ್ ಓಡುವ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಮಡಿಕೇರಿಯವರಾದ ಪುಷ್ಟ 2020ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕ್‌ ಸ್ಕೈಂಬಿಂಗ್ ತರಬೇತಿ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಬಿಂದು, 2020ರಲ್ಲಿ ಮೊಟ್ಟಮೊದಲ ಬಾರಿಗೆ ಮಧುಗಿರಿಯಲ್ಲಿ ನಡೆದ ಮಹಿಳೆಯರ ಶಿಲಾರೋಹಣ ಅಭಿಯಾನದಲ್ಲಿ 350 ಮೀಟರ್‌ನ ‘ನಿರ್ಭಯ’ 6 ‘ಸಿ’ ಗ್ರೇಡ್ ಮಾರ್ಗ ತೆರೆದ ತಂಡದ ಅಭ್ಯರ್ಥಿಯಾಗಿದ್ದರು. 2020ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕ್ ಕ್ಲೈಂಬಿಂಗ್ ತರಬೇತಿ ಶಿಬಿರಗಳಲ್ಲಿ ತೇರ್ಗಡೆ ಹೊಂದಿದ್ದು, 2021ರಲ್ಲಿ ಕೋಲಾರ್‌ ಬೌಲರಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಪಡೆದಿದ್ದಾರೆ.

ಕಾರ್ಯಕ್ರಮಕ್ಕೆ ಯುವ ಸಬಲೀಕರಣ ಇಲಾಖೆ ಜತೆ ಫೇಮ್ ಅಡ್ವೆಂಚರ್ ಉಳ್ಳಾಲ,ಜೆಸಿಐ ಮಂಗಳಗಂಗೋತ್ರಿಯ ಅಧ್ಯಕ್ಷ ಎನ್. ಜೆಸಿ ಫ್ರಾಂಕಿ ಫ್ರಾನ್ಸಿಸ್, ಉಪಾಧ್ಯಕ್ಷೆ ಜೆಸಿ ಜಯಲಕ್ಷ್ಮಿ, ಕಾರ್ಯದರ್ಶಿ
ಪ್ರತಿಮಾ ಹೆಬ್ಬಾರ್ ಹಾಗೂ ಲಯನ್ಸ್ ಕ್ಲಬ್ ತಂಡ ಕೂಡ ಸಾಥ್ ನೀಡಿತ್ತು

ಇತ್ತೀಚಿನ ಸುದ್ದಿ

ಜಾಹೀರಾತು