ಇತ್ತೀಚಿನ ಸುದ್ದಿ
ಬೆಂಗಳೂರು ಬಳಿ ಅಮೆಜಾನ್ ಕಂಪೆನಿಯ ಲಾರಿ ಅಪಹರಣ: ಕೋಟ್ಯಂತರ ಮೌಲ್ಯದ ವಸ್ತು ಕಳವು
31/10/2021, 19:09
ಬೆಂಗಳೂರು(reporterkarnataka.com) : ಅಮೆಜಾನ್ ಕಂಪನಿಗೆ ಸೇರಿದ ಕಂಟೇನರ್ ಲಾರಿಯೊಂದನ್ನು ಅಪಹರಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನಗೊಂಡನಹಳ್ಳಿಯಲ್ಲಿ ನಡೆದಿದೆ.
ದೇವನಹಳ್ಳಿ ಮಾರ್ಗವಾಗಿ ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಬಳಿಯ ಫ್ಯಾಕ್ಟರಿಗೆ ತೆರಳುತ್ತಿದ್ದ ಕಂಟೇನರ್ ಲಾರಿಯ ಜಿಪಿಎಸ್ ಕಿತ್ತು ಬಿಸಾಕಿದ್ದು, ಬಳಿಕ ಲಾರಿ ಅಪಹರಿಸಿದ್ದಾರೆ.
ಅದರಲ್ಲಿದ್ದ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಸೇರಿ ಸುಮಾರು ಒಂದುವರೆ ಕೋಟಿ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.