ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ಅಭಿಮಾನಿ ನೇಣು ಬಿಗಿದು ಆತ್ಮಹತ್ಯೆ; ಬಸುರಿ ಪತ್ನಿಯ ಆಕ್ರಂದನ
30/10/2021, 22:25
ಸಂತೋಷ್ ಅತ್ತಿಕೆರೆ ಚಿಕ್ಕಮಗಳೂರು
info.reporterkarnataka@gmail.com
ಖ್ಯಾತ ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ನೊಂದು ಚಿಕ್ಕಮಗಳೂರು ಜಿಲ್ಲೆಯ ಶ್ರೀನಿವಾಸ ನಗರದ ರಾಮಪುರದ
ಅಭಿಮಾನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶನಿವಾರ ಮಧ್ಯಾಹ್ನ 2.30ರಿಂದ 3.45 ಗಂಟೆ ಅವಧಿಯಲ್ಲಿ ಈ ಘಟನೆ ನಡೆದಿದೆ.
ಶರತ್ ಕುಮಾರ್( 30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಕೂಲಿ ಕಾರ್ಮಿಕರಾದ ಶರತ್ ಕುಮಾರ್ ಅವರು ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದು ನಿನ್ನೆಯಿಂದ ಟಿವಿ ನೋಡಿ ತುಂಬಾ ಬೇಸರದಲ್ಲಿದ್ದರು. ಈ ದಿನ ಮನೆಯ ರೂಮಿನ ಕೋಣೆಯಲ್ಲಿ ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
ವಿವಾಹಿತರಾದ ಅವರಿಗೆ ಹೆಂಡತಿ, ಒಂದೂವರೆ ವರ್ಷದ ಹೆಣ್ಣು ಮಗುವಿದ್ದು, ಈತನ ಪತ್ನಿ ಪುನಃ ಗರ್ಭಿಣಿ ಆಗಿರುತ್ತಾರೆ. ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇವರ ಸಂಬಂಧಿಕರು ತಮಿಳುನಾಡಿನಲ್ಲಿ ಇದ್ದು ನಾಳೆ ಬಂದ ನಂತರ ಅಂತ್ಯಸಂಸ್ಕಾರ ನಡೆಯಲಿದೆ.














