ಇತ್ತೀಚಿನ ಸುದ್ದಿ
ಲಿಂಗಸುಗೂರು: ಪವರ್ ಸ್ಟಾರ್ ಪುನೀತ್ ನಿಧನಕ್ಕೆ ಜೆಡಿಎಸ್ ವಕ್ತಾರ ಸಿದ್ದು ಬಂಡಿ ನೇತೃತ್ವದಲ್ಲಿ ಸಂತಾಪ
30/10/2021, 09:32
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಕನ್ನಡದ ಹೆಸರಾಂತ ನಟ ಪುನೀತ್ ರಾಜಕುಮಾರ್ ರವರು ನಿಧನಕ್ಕೆ ಲಿಂಗಸುಗೂರು ಜೆಡಿಎಸ್ ರಾಜ್ಯ ಮುಖಂಡ ಸಿದ್ದು ಬಂಡಿ ಅವರು ನೇತೃತ್ವದಲ್ಲಿ ಸಂತಾಪ ಸೂಚಿಸಿ ನಂತರ ಮೌನಾಚರಣೆ ಮಾಡಲಾಯಿತು.
ಭಗವಂತ ಅವರ ಅತ್ಮಕ್ಕೆ ಚಿರಶಾಂತಿ ನೀಡಲಿ, ಕುಟುಂಬಸ್ಥರಿಗೆ ಲಕ್ಷಾಂತರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಲಿಂಗಸುಗೂರು ತಾಲೂಕು ಜೆಡಿಎಸ್ ವತಿಯಿಂದ ಪ್ರಾರ್ಥಿಸುತ್ತೇವೆ ಎಂದು ಸಿದ್ದುಬಂಡಿ ಹೇಳಿದರು.
ಅವರ ಅನಿರೀಕ್ಷಿತ ಈ ಸಾವು ಕರುನಾಡಿನಲ್ಲಿ ಕಣ್ಣಿರ ಕಡಲನ್ನೆ ಸೃಷ್ಟಿಮಾಡಿದೆ. ಅವರನ್ನು ಕಳೆದುಕೊಂಡ ಕನ್ನಡ ನಾಡು ನಿಜಕ್ಕೂ ಶೋಕ ಸಾಗರಕ್ಕೆ ಜಾರಿ ಬಿದ್ದಿದೆ.
ಈ ಸಂದರ್ಭದಲ್ಲಿ ನಾಗಭೂಷಣ ಅಧ್ಯಕ್ಷರು ತಾಲೂಕು ಜೆಡಿಎಸ್ ಗೋವಿಂದರಾಜ್ ಅಮ್ಮಾಪುರ್ ತಾಲೂಕು ಉಪಾಧ್ಯಕ್ಷರು ಜೆಡಿಎಸ್ ಇಮ್ತಿಯಾಜ್ ಪಾಷಾ ಅಧ್ಯಕ್ಷರು ಯುವ ಘಟಕ ವಿಜಯ ಪೂಜಾರಿ ಸಿದ್ದು ಬಡಿಗೇರ್ ಪರುಶುರಾಮ ಕೆಂಭಾವಿ ಸಾದಾ ಕಟ್ಟಿಮನಿ ಮತ್ತು ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದರು.














