ಇತ್ತೀಚಿನ ಸುದ್ದಿ
ಟ್ವೆಂಟಿ-20 ವಿಶ್ವಕಪ್ ಸೂಪರ್ -12 ಪಂದ್ಯ: ಪಾಕಿಗೆ ಭಾರತದ ವಿರುದ್ಧ 10 ವಿಕೆಟ್ ಗಳ ಗೆಲುವು
25/10/2021, 00:07
ದುಬೈ(reporterkarnataka.com): ಆರಂಭಿಕ ಬ್ಯಾಟ್ಸ್ ಮನ್ ಗಳಾದ ಬಾಬರ್ ಆಝಂ (ಔಟಾಗದೆ 68)ಹಾಗೂ ಮುಹಮ್ಮದ್ ರಿಝ್ವಾನ್ (ಔಟಾಗದೆ 78) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ಟ್ವೆಂಟಿ-20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕ್ ಮೊದಲ ಬಾರಿ ಗೆಲುವಿನ ನಗೆ ಬೀರಿತು.
ಬಾಬರ್ ಆಝಂ ಹಾಗೂ ರಿಝ್ವಾನ್ ಪಾಕಿಸ್ತಾನ ವಿರುದ್ಧದ ಟ್ವೆಂಟಿ-20ಯಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಆಝಂ 40 ಎಸೆತಗಳಲ್ಲಿ(4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.)ಅರ್ಧಶತಕಗಳನ್ನು ಪೂರೈಸಿದರು.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಪವರ್ ಪ್ಲೇ ವೇಳೆ ಅಗ್ರ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.