2:19 PM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಕವನ : ನಮ್ಮ ನಡೆ ಶಾಲೆ ಕಡೆ | ಉಮಾ ಮಾಧವಿ

23/10/2021, 16:49

ಅಂದು ,
ಸಂಚಾರಿ ವಾಣಿಯನ್ನು ಮುಟ್ಟಿ ನೋಡಲು 
ಬಿಡದ ಹಿರಿಯರು,
ಆದರೆ ಚಿಣ್ಣರಿಗೆ ಬಲು ಆಸೆ 
ಏನಿರಬಹುದು? ಅದರಲ್ಲಿ ತಿಳಿವಾಸೆ
ಚಿಣ್ಣರು ಜಾಣರು ಗುಟ್ಟೆಲ್ಲಾ ಬಲ್ಲರು 

ಇಂದು ,
 ಅದೇ ಹಿರಿಯರು ಬನ್ನಿ ವೀಡಿಯೋ ಪಾಠ
ನೋಡಿ ಎಂದರು
ಚಿಣ್ಣರಿಗೆ ವೀಡಿಯೋ ನೋಡಿ ನೋಡಿ ಕಣ್ಣಾಲಿಗಳು ಸೋತವು, ಜೇಡರ ಬಲೆಯಂತೆ
ಕಣ್ಣೆಲ್ಲ ಮಯ ಮಯ 

ಯಾರಿಗೆ ಬೇಕು ?ಈ ವಾಣಿ
ವರ್ಕ್ ಉಂಟು, ನೆಟ್ ಇಲ್ಲ, ವೈಫೈ ಹಾಕಿಲ್ಲ
ಆನ್ಲೈನ್ ಪಾಠದ ಗೋಳು ತಲೆಯೆಲ್ಲಾ ಹಾಳು  .

ಹೌದು 
ಅಂದು ಈ ಚಿಣ್ಣರು ಕಾಯುತ್ತಿದ್ದರು
ಶಾಲೆಗೆ ಯಾವಾಗ ರಜೆ.
ಇಂದು ಬಕಪಕ್ಷಿಯಂತೆ ಕಾಯುವರು
ಶಾಲೆ ಯಾವಾಗ ಎಂದು 
ಸುದ್ದಿ ಬಂತು
 ಶಾಲೆ ಆರಂಭವಾಗುವುದೆಂದು, ಕೇಳಿದ್ದೇ ತಡ ,ಚಿಣ್ಣರು
 ಸಂಚಾರಿವಾಣಿ ಯನ್ನು ಎತ್ತಿ ಹಾಕಿ 
ನಮಸ್ಕಾರ -ಎಂದಿಗೂ ನಿನ್ನ ಸಹವಾಸ ಬೇಡಪ್ಪ ಎನ್ನುತ್ತಾ 
ಖುಷಿ ಖುಷಿಯಿಂದ ಚಿಣ್ಣರೆಲ್ಲ ಒಟ್ಟುಗೂಡಿ
 ಹೆಗಲ ಮೇಲೆ ಚೀಲ ಹಾಕಿ ನಿಷ್ಕಲ್ಮಶ 
ನಗುವಿನೊಂದಿಗೆ ಹೊರಟಿದ್ದಾರೆ.

 ತರಗತಿಯಲ್ಲಿ ಪಾಠ ಕೇಳುವ ಆಸೆಯಿಂದ
 ಟೀಚರನ್ನು ನೋಡುವ ಉತ್ಸಾಹದಿಂದ
 ಗೆಳೆಯರೊಡನೆ ಆಡುವ ಆತುರದಿಂದ 
ನಗುತ್ತಾ ನಗುತ್ತಾ ಹೇಳುತ್ತಾರೆ ,ಅಯ್ಯೋ ದೇವರೇ ,ಎಂದೆಂದಿಗೂ 
ಈ ಮಾರಿ ಕೊರೋನಾ ಬಾರದಿರಲಿ .
ಸದಾಕಾಲ ನಮ್ಮ ನಡೆ ಶಾಲೆ ಕಡೆಗೆ ಇರಲಿ .   

– ಉಮಾ ಮಾಧವಿ
 ನಿವೃತ್ತ ಶಿಕ್ಷಕಿ, ಕೊಳಲಗಿರಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು