9:32 AM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಉಪಯೋಗಕ್ಕೆ ಬಾರದ ಮಸ್ಕಿ ಕೃಷಿ ಕೇಂದ್ರ: ಕರ್ನಾಟಕ ರೈತ ಸಂಘದಿಂದ ಮುತ್ತಿಗೆ, ಪ್ರತಿಭಟನೆ

22/10/2021, 09:27

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ 
ಅಂತರಗಂಗೆ ರಾಯಚೂರು
info.reporterkarnataka@gmail.com

ರೈತರಿಗಾಗಿ ಸರಕಾರ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಅದು ನಿಜವಾದ ರೈತರಿಗೆ ತಲುಪುವುದೇ ಇಲ್ಲ.

ಕೃಷಿ ಕೇಂದ್ರದಲ್ಲಿಯೂ ರೈತರಿಗೆ ಸರಿಯಾದ ರೀತಿಯ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಹೀಗಾದರೆ ದೇಶಕ್ಕೆ ಅನ್ನ ಹಾಕು ರೈತನ ಪಾಡು ಹೇಗೆ ಎಂದು ಮಸ್ಕಿ ರೈತ ಸಂಘದ ಅಧ್ಯಕ್ಷ ವಿಜಯ್ ಬಡಿಗೇರ್ ಆಕ್ರೋಶ ವ್ಯಕ್ತ ಪಡಿಸಿದರು.

ಮಸ್ಕಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕೃಷಿ ಕೇಂದ್ರ ಯಾರು ವಾಸವಿರದ ಜಾಗದಲ್ಲಿದೆ. ಜನರು ಅಲ್ಲಿಂದ ನಡೆದುಕೊಂಡು ಬರಬೇಕು. ಅಲ್ಲದೆ ರೈತರಿಗೆ ಬೇಕಾಗುವ ಕೃಷಿಗೆ ಅಗತ್ಯ ವಸ್ತುಗಳು ಸಿಗುವುದೇ ಇಲ್ಲ. ಟ್ಯಾಕ್ಟರ್, ಬಿತ್ತುವ ಯಂತ್ರೋಪಕರಣಗಳು ಅರ್ಜಿ ಹಾಕಿ ಎರಡು ವರ್ಷಗಳಾದರೂ ಇನ್ನು ಬಂದಿಲ್ಲ. ಹೀಗಾದರೆ ರೈತರ ಪಾಡೇನು. ರೈತರಿಗೆ ಅನುಕೂಲವಾಗದ ಕೃಷಿ ಕೇಂದ್ರ ಇದ್ದು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು

ಮುತ್ತಿಗೆ ಹಾಕಿದರು. ಕೃಷಿ ಅಧಿಕಾರಿಗಳು ಮನವಿ ಪತ್ರಕ್ಕೆ ಸ್ಪಂದಿಸಿ ರೈತರು ಅನುಕೂಲವಾಗುವ ರೀತಿಯಲ್ಲಿ ಕೊಡಲಾಗುವುದು ಎಂದು ಹೇಳಿದರು.

ಅಮೀನ್ ಪಾಸ್ ದಿದ್ದಿಗಿ ಮಾತನಾಡಿ, ರೈತನ ಬಾಳು ಕಣ್ಣೀರಿನ ಗೋಳು. ರೈತ ಹೊಲದಲ್ಲಿ ಬೆಳೆದ ಬೆಳಗೆ ಬಂದ ಹಣ ದಲ್ಲಾಳಿಗಳು ತಿನ್ನುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಸರಕಾರ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಸಮರ್ಪಕವಾದ ಬೀಜಗಳನ್ನು, ಸಮರ್ಪಕ ಯಂತ್ರೋಪಕರಣಗಳ ರೈತರಿಗೆ ಒದಗಿಸಿಕೊಡಬೇಕೆಂದು ಅಧಿಕಾರಿಗಳ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ರೈತ ಮುಖಂಡರು ಭಾಗವಹಿಸಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು