11:31 AM Saturday11 - October 2025
ಬ್ರೇಕಿಂಗ್ ನ್ಯೂಸ್
ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ ಮೈಸೂರು ಧರ್ಮಪ್ರಾಂತ್ಯ ಹೊಸ ಧರ್ಮಾಧ್ಯಕ್ಷರಾಗಿ ಡಾ. ಫ್ರಾನ್ಸಿಸ್ ಸೆರಾವೊ: ಧಾರ್ಮಿಕ ವಿಧಿ ವಿಧಾನ… ಮೂಡಿಗೆರೆಯಲ್ಲಿ ಭಯಾನಕ ಅಪಘಾತ | ಬೈಕ್ ಮೇಲೇರಿದ ಕ್ರೇನ್: ಮಹಿಳೆ ಸ್ಥಳದಲ್ಲೇ ಸಾವು;…

ಇತ್ತೀಚಿನ ಸುದ್ದಿ

ಸರ್ವರ್ ಸಮಸ್ಯೆ: ಫೇಸ್ಬುಕ್, ವಾಟ್ಸಾಪ್, ಇನ್ಟ್ಟಾಗ್ರಾಂ ಜಾಲತಾಣಗಳಿಂದ ಜಾಗತಿಕ ಆರ್ಥಿಕ ನಷ್ಟ ಎಷ್ಟು ಗೊತ್ತೇ ? 

05/10/2021, 10:24

ವಾಷಿಂಗ್ಟನ್(reporterkarnataka.com) : ಫೇಸ್ಬುಕ್, ಇನ್ಸ್ತಗ್ರಮ್, ವಾಟ್ಸಾಪ್ ಗಳಿಗೆ ಸಂಬಂಧಿಸಿದಂತೆ ಸರ್ವರ್ ಕೆಲವು ತಾಸು ಡೌನ್  ಆಗಿದ್ದು, ಪರ್ಸನಲ್  ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್  ಎರಡೂ ಸಾಧ್ಯವಾಗುತ್ತಿರಲಿಲ್ಲ. ಸದ್ಯ ಇವುಗಳಿಗೆ ಪರ್ಯಾಯವಾಗಿ ಡಿಜಿಟಲ್  ಬಳಕೆದಾರರು ಟ್ವಿಟರ್ , ಟೆಲಿಗ್ರಾಂ ಹಾಗೂ ಸಿಗ್ನಲ್ ಗೆ ಮೊರೆ ಹೋಗಿದ್ದಾರೆ. ಸದ್ಯ ಎಲ್ಲ ಮತ್ತೆ ಸುಸ್ಥಿತೆ ಬಂದಿದೆ. ಇದರಿಂದ ಉಂಟಾದ ಆರ್ಥಿಕ ನಷ್ಟ ಎಷ್ಟು ಗೊತ್ತೇ?

ಈ ಸರ್ವರ್ ಸಮಸ್ಯೆಯಿಂದ ಜಾಗತಿಕ ಆರ್ಥಿಕತೆಯಲ್ಲೂ ಭಾರಿ ನಷ್ಟ ಉಂಟಾಗಿದ್ದು, ಸುಮಾರು 160 ಮಿಲಿಯನ್  ಡಾಲರ್ ನಷ್ಟಉಂಟಾಗಿದೆ ಎನ್ನಲಾಗಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್  ಬುಕ್ ನ ಷೇರು ಕೂಡ ಶೇ. 6ರಷ್ಟು ಕುಸಿದಿದೆ. ಈ ಕುಸಿತ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸರ್ವರ್  ಡೌನ್  ಆಗಿರುವುದನ್ನು ಟ್ವಿಟರ್  ಮೂಲಕ ಹೇಳಿಕೊಂಡಿರುವ ಫೇಸ್ ಬುಕ್ , ಅದಕ್ಕಾಗಿ ಬಳಕೆದಾರರ ಕ್ಷಮೆಯನ್ನೂ ಕೋರಿದೆ.

ಇತ್ತೀಚಿನ ಸುದ್ದಿ

ಜಾಹೀರಾತು