ಇತ್ತೀಚಿನ ಸುದ್ದಿ
ಗ್ರಾಹಕರಿಗೆ ಬಿಗ್ ಶಾಕ್: ವಾಣಿಜ್ಯ ಗ್ಯಾಸ್ ಬೆಲೆ ಮತ್ತೆ ಹೆಚ್ಚಳ; 43.5 ರೂ. ಏರಿಕೆ
01/10/2021, 21:56
ಹೊಸದಿಲ್ಲಿ(reporterkarnataka.com) : ಅಕ್ಟೋಬರ್ ಮೊದಲ ದಿನ ಹಣದುಬ್ಬರದಲ್ಲಿ ದೊಡ್ಡ ಹಿನ್ನಡೆ ಕಂಡಿದೆ. ಸರಕಾರಿ ತೈಲ ಮಾರುಕಟ್ಟೆ ಕಂಪನಿಗಳು 1ರಿಂದ ಎಲ್ ಪಿಜಿ ಅನಿಲ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ.
ಸರಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ರೂ.43.5ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಗ್ಯಾಸ್ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ.