ಇತ್ತೀಚಿನ ಸುದ್ದಿ
ಮಂಡ್ಯ | ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು ಪ್ರಚಾರ ಮಾಡಿದ ಆರೋಪಿ ಬಂಧನ
15/11/2026, 14:19
ಮಂಡ್ಯ(reporterkarnataka.com):ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದ ಮದ್ದೂರಿನ ಹಿಂದೂ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಸಂದ್ರ ಗ್ರಾಮದ ಶಿವಲಿಂಗಯ್ಯ ಅವರ ಪುತ್ರ ಅರುಣ್ ಕುಮಾರ್ (35) ಬಂಧಿತ ಆರೋಪಿ.
ವಿಚಾರಣೆಯ ವೇಳೆ ಆ ಸಿಮ್ ಆತನ ಪತ್ನಿಯದ್ದೇ ಎಂದು ತಿಳಿದುಬಂದಿದ್ದು, ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಮದ್ದೂರು ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಜಿಯೋ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ‘ಮನ್ಮುಲ್’ (ಮಂಡ್ಯ ಹಾಲು ಒಕ್ಕೂಟ) ಮಾರುಕಟ್ಟೆಯ ಪ್ರತಿಷ್ಠೆಗೆ ಧಕ್ಕೆ ತಂದಿದ್ದ ಆರೋಪ ಮೇಲೆ ಮದ್ದೂರು ಪೊಲೀಸರು ಶುಕ್ರವಾರ ಆತನನ್ನು ಬಂಧಿಸಿದ್ದರು.
ನಂದಿನಿ ಮೊಸರಿನ ಬ್ರ್ಯಾಂಡ್ಗೆ ಕಳಂಕ ತರಲು ಖಾಸಗಿ ಡೈರಿಗಳೊಂದಿಗೆ ಶಾಮೀಲಾಗಿ ಅರುಣ್ ಕುಮಾರ್ ಇಂತಹ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ಮನ್ಮುಲ್ ಅಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.












