ಇತ್ತೀಚಿನ ಸುದ್ದಿ
ಮಂಡ್ಯ: ರೈಲು ಡಿಕ್ಕಿ ಹೊಡೆದು ಪಾಂಡವಪುರ ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು
15/11/2026, 14:14
ಮoಡ್ಯ(reporterkarnataka.com): ಚಂದಗಿರಿ ಕೊಪ್ಪಲು ಗ್ರಾಮದ ಬಳಿ ರೈಲ್ವೆ ಗೇಟ್ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಲಿಖಿತಾ(19) ಮೃತಪಟ್ಡ ವಿದ್ಯಾರ್ಥಿನಿ. ಈಕೆ ಪಾಂಡವಪುರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು.
ರೈಲ್ವೆ ಗೇಟ್ ಹಾಕಿದ್ದರೂ ಹಳಿ ದಾಟಲು ಮುಂದಾದ ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾಳೆ.
ರೈಲ್ವೆ ಗೇಟ್ ಹಾಕಿದ್ದರೂ ಅದನ್ನು ಲೆಕ್ಕಿಸದೆ ಲಿಖಿತಾ ಹಳಿ ದಾಟಲು ಮುಂದಾಗಿದ್ದಾಳೆ. ಅಷ್ಟರಲ್ಲೇ ಸಮೀಪಿಸುತ್ತಿದ್ದ ರೈಲು ಕ್ಷಣಾರ್ಧದಲ್ಲಿ ಆಕೆಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.












