3:19 PM Saturday14 - November 2026
ಬ್ರೇಕಿಂಗ್ ನ್ಯೂಸ್
ಪಂಡಿತ್ ಜವಾಹರಲಾಲ್ ನೆಹರು 137ನೇ ಜನ್ಮದಿನ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್… ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: ಈಗ ಸೆಂಚುರಿ ಬಾರಿಸಿದೆ… ಚಿಕ್ಕಮಗಳೂರು | ತರೀಕೆರೆ‌ ಬಳಿ ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ: ಪುತ್ರಿ ಸಾವು; ತಂದೆ… ಎಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು: ಪಿಎ ವಾಟ್ಸಪ್​ ಚಾಟ್​ ಬಗ್ಗೆ ಡಿಸಿ… ಮುಖ್ಯಮಂತ್ರಿ ಡಿಕೆಶಿ ಹಾಸನಾಂಬೆ ದರ್ಶನ ಪಡೆಯುತ್ತಿರುವ ವೀಡಿಯೋಗೆ ಭಕ್ತರಿಂದ ಚಪ್ಪಲಿ ಎಸೆತ: ಸರತಿ… ಕೊಡಗಿನ ಜನತೆಗೆ ಬೆಲೆ ಏರಿಕೆ ನಡುವೆಯೇ ಮತ್ತೊಂದು ಶಾಕ್: ಖಾಸಗಿ ಬಸ್ ದರ… Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000…

ಇತ್ತೀಚಿನ ಸುದ್ದಿ

ಪಂಡಿತ್ ಜವಾಹರಲಾಲ್ ನೆಹರು 137ನೇ ಜನ್ಮದಿನ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌರವ ನಮನ

14/11/2026, 15:17

ನವದೆಹಲಿ(reporterkarnataka.com): ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 137ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಸಹ ದೇಶದ ಮೊದಲ ಪ್ರಧಾನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರ ಕೊಡುಗೆ ಮತ್ತು ಸ್ವತಂತ್ರ ಭಾರತದ ಆರಂಭಿಕ ವರ್ಷಗಳಲ್ಲಿ ಅವರ ನಾಯಕತ್ವವು ದೇಶದ ಮೇಲೆ ಶಾಶ್ವತ ಛಾಪು ಮೂಡಿಸಿದೆ ಎಂದು ಸ್ಮರಿಸಿದ್ದಾರೆ.
ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದಾಗಿ ‘ಚಾಚಾ ನೆಹರು’ ಎಂದೇ ಜನಪ್ರಿಯರಾಗಿದ್ದ ನೆಹರು ಅವರ ಜನ್ಮದಿನವಾದ ನವೆಂಬರ್ 14 ಅನ್ನು ದೇಶಾದ್ಯಂತ ‘ಮಕ್ಕಳ ದಿನಾಚರಣೆ’ಯಾಗಿ ಆಚರಿಸಲಾಗುತ್ತದೆ. 1889ರ ನವೆಂಬರ್ 14ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದ ನೆಹರು, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು 1947ರ ಆಗಸ್ಟ್ 15ರಂದು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 1964ರ ಮೇ 27ರಂದು ಅವರು ನಿಧನರಾದರು.

ಇತ್ತೀಚಿನ ಸುದ್ದಿ

ಜಾಹೀರಾತು