ಇತ್ತೀಚಿನ ಸುದ್ದಿ
ಚಿಕ್ಕಮಗಳೂರು | ಚುಕ್ಕಿ ಜಿಂಕೆ ಶಿಕಾರಿ: ಓರ್ವನ ಬಂಧನ, ಮೂವರು ಪರಾರಿ; ಉರುಳು ಹಾಕಿ ಹತ್ಯೆ ಮಾಡಿದ್ದ ನಾಲ್ವರು
14/11/2026, 15:13
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚುಕ್ಕಿ ಜಿಂಕೆ ಶಿಕಾರಿ ಮಾಡಿದ ಪ್ರಕರಣ ಸಂಬಂಧಿಸಿದಂತೆ ಓರ್ವನ ಬಂಧಿಸಲಾಗಿದ್ದು, ಇತರ ಮೂವರು ಪರಾರಿಯಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ದೇವದಾನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ಇಲಾಖೆಗೆ ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದರು.
ಜಿಂಕೆ ಹತ್ಯೆ ಮಾಡಿ ಅಡಿಗೆ ಮಾಡುತ್ತಿರುವ ಮಾಹಿತಿಯನ್ನು ಸ್ಥಳೀಯರು ನೀಡಿದ್ದರು. ಶ್ವಾನದ ನೆರವು ಪಡೆದು ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಕರಣ ಪತ್ತೆ ಹಚ್ಚಿದ್ದಾರೆ. ಅರಣ್ಯ ಇಲಾಖೆಯ ಶ್ವಾನ ರೋಜ್ಹಿ ನೆರವಿನಿಂದ ಚುಕ್ಕಿ ಜಿಂಕೆಯ ಅವಶೇಷಗಳನ್ನು ಪತ್ತೆ ಮಾಡಿದೆ.
ಕಾಫಿತೋಟದಲ್ಲಿ 10 ಅಡಿಗಳ ಆಳದಲ್ಲಿದ್ದ ಅವಶೇಷಗಳನ್ನ ಶ್ವಾನ ರೋಜ್ಹಿ ಪತ್ತೆ ಮಾಡಿದೆ.
ಎರಡು ಮನೆಗಳಲ್ಲಿ ಚುಕ್ಕಿ ಜಿಂಕೆ ಮಾಂಸ ಹಂಚಿಕೆ ಮಾಡಿ ಅಡುಗೆ ಮಾಡಿರುವುದನ್ನ ಶ್ವಾನ ಪತ್ತೆ ಮಾಡಿದೆ.
ಬಾಳೆಹೊನ್ನೂರು ವಲಯ ಅರಣ್ಯ ಕಚೇರಿಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚುಕ್ಕಿ ಜಿಂಕೆ ಹತ್ಯೆ ಸಂಬಂಧ ಪರಮೇಶ್ವ್ ಗೌಡ ಬಂಧನವಾಗಿದ್ದು,
ಕವೀಶ್, ಪೃಥ್ವಿ ರಾಜ್, ವಿನಯ್ ಎಂಬವರು ನಾಪತ್ತೆಯಾಗಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.












