11:59 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಕ್ಲಾಕ್ ಟವರ್ ಕೊನೆಗೂ ಉಪಯೋಗಕ್ಕೆ ಬಂತು !!: ಹುಟ್ಟುಡುಗೆಯಲ್ಲಿ ಸ್ನಾನಕ್ಕಿಳಿದ ಮಾನಸಿಕ ಅಸ್ವಸ್ಥ ವ್ಯಕ್ತಿ !

22/09/2021, 20:38

ಅನುಷ್ ಪಂಡಿತ್ ಮಂಗಳೂರು
Info.reporterkarnataka@gmail.com

ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು ಎಂದು ಪರಿಗಣಿಸಲಾದ ಹೆಚ್ಚು ಕಡಿಮೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕ್ಲಾಕ್ ಟವರ್ ಕೊನೆಗೂ ಉಪಯೋಗಕ್ಕೆ ಬಂತು ಎಂದು ಕಡಲನಗರಿಯ ನಾಗರಿಕರು ಆಡಿಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಕಾರಣ ಕೂಡ ಉಂಟು. ಹಾಗಾದರೆ ಇದೇನು 

ಅಂತಹ ಮಹಾ ಕಾರಣ ಎಂಬ ಕುತೂಹಲ ನಿಮಗಿದೆಯೇ? ಮುಂದಕ್ಕೆ ಓದಿ…

ಹಳೆಯ ಕ್ಲಾಕ್ ಟವರ್ ತೆರವುಗೊಳಿಸಿ ದಶಕಗಳೇ ಉರುಳಿದ ಬಳಿಕ ಅದೇ ಜಾಗದಲ್ಲಿ ಮತ್ತೆ ಕ್ಲಾಕ್ ಟವರ್ ನಿರ್ಮಿಸುವ ಬಗ್ಗೆ ಮಂಗಳೂರಿನ ನಾಗರಿಕರ ತಂಡವೊಂದು ವಿರೋಧ ವ್ಯಕ್ತಪಡಿಸಿತ್ತು. ಪಾಲಿಕೆಯಲ್ಲಿ ಅಂದು ಪ್ರತಿಪಕ್ಷದ ಸಾಲಿನಲ್ಲಿದ್ದ ಬಿಜೆಪಿ ಕೂಡ ವಿರೋಧ ವ್ಯಕ್ತಪಡಿಸಿತ್ತು. ಆದರೆ ಹಠಕ್ಕೆ ಬಿದ್ದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಥಮ ಕಾಮಗಾರಿಯಾಗಿ ಕ್ಲಾಕ್ ಟವರ್ ಕೈಗೆತ್ತಿಕೊಳ್ಳಲಾಯಿತು. ಇದೀಗ ಕ್ಲಾಕ್ ಟವರ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಜನರಿಗೆ ಟೈಮ್ ನೋಡಲು ಈ ಗಡಿಯಾರ ಗೋಪುರ ಬೇಕಿಲ್ಲದಿದ್ದರೂ ಬೇರೆ ರೀತಿಯಲ್ಲಿ ಅದು ಇಂದು ಉಪಯೋಗಕ್ಕೆ ಬಂದಿದೆ. ಅದೇನೆಂದರೆ, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕ್ಲಾಕ್ ಟವರ್ ನ ಕಾರಂಜಿ ನೀರಿನಲ್ಲಿ ಹುಟ್ಟುಡುಗೆಯಲ್ಲಿ ಸ್ನಾನಕ್ಕಿಳಿದಿದ್ದಾರೆ. ಪಬ್ಲಿಕ್ ನಳ್ಳಿಗಳು ಇಲ್ಲದ ಈ ಕಾಲದಲ್ಲಿ ಸಿಕ್ಕಿದ್ದು ಅವಕಾಶ ಎಂಬಂತೆ ಮಾನಸಿಕ ಅಸ್ವಸ್ಥ ವ್ಯಕ್ತಿ ಇಲ್ಲಿ ಜಳಕ ಮಾಡಿದ್ದಾರೆ. ನಗರದಲ್ಲಿ ಸುತ್ತುವ ಜನರು ಈ ದೃಶ್ಯವನ್ನು ಕಂಡು ತೆಪ್ಪಗೆ ಮುಂದು ಸರಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು