1:05 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

4 ವರ್ಷದಿಂದ ರಾಜ್ಯದಲ್ಲಿ ಒಂದೇ ಒಂದು ಬಡವರಿಗೆ ಸರಕಾರ ಮನೆ ನಿರ್ಮಿಸಿ ಕೊಟ್ಟಿಲ್ಲ: ವೆರೋನಿಕಾ ಕರ್ನೆಲಿಯೊ

21/09/2021, 21:54

ಉಡುಪಿ(reporterkarnataka.com): ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನು ಮಂಜೂರಾತಿ ಮಾಡದೇ ಬಿಜೆಪಿ ಸರಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 25-30 ವರ್ಷಗಳ ನನ್ನ ಅನುಭವದಲ್ಲಿ ಹೇಳುವುದಿದ್ದರೆ ಬಡಜನರಿಗೆ ಮೂಲಭೂತ ಸೌಕರ್ಯವಾದ ಸೂರು ಮನೆ ನಿರ್ಮಾಣಕ್ಕೆ ಪ್ರತಿವರ್ಷ ಕನಿಷ್ಠ 50-100 ಮನೆಗಳು ಒಂದು ಪಂಚಾಯತ್‌ ವ್ಯಾಪ್ತಿಗೆ ಮಂಜೂರಾತಿಗೊಂಡು ನಿರ್ಮಾಣವಾಗುತ್ತಿದ್ದವು. ಬಡಜನರಿಗೆ ಇದರಿಂದ ಸಿಗುವ ಸಹಾಯಧನ 1.50 ಲಕ್ಷ ರೂ. ತುಂಬಾ ಅನುಕೂಲವಾಗುತ್ತಿತ್ತು. ಇದನ್ನೇ ನಂಬಿ ಅನೇಕ ಬಡಜನರು ಮನೆ ನಿರ್ಮಾಣಕ್ಕೆ ಪ್ರತಿವರ್ಷ ತಯಾರಿ ನಡೆಸುತ್ತಿದ್ದರು. ಆದರೆ ಕಳೆದ 4 ವರ್ಷಗಳಿಂದ ಪಂಚಾಯತ್‌ ರಾಜ್‌ ಇಲಾಖೆ ಮೂಲಕ ಒಂದೇ ಒಂದು ಮನೆ ಇಡೀ ರಾಜ್ಯದಲ್ಲಿಯೇ ಮಂಜೂರಾತಿ ಆಗಿಲ್ಲ.

ಕೊರೊನಾದಂತ ಕಷ್ಟದ ಕಾಲದಲ್ಲಿದ್ದು, ಬಡವರು ತುಂಬಾ ಕಷ್ಟಪಡುತ್ತಿದ್ದಾರೆ. ಗ್ರಾಮಸಭೆ, ಪಂಚಾಯತ್‌ ಗೆ ಆಗಾಗ್ಗೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಬಿಜೆಪಿಯಿಂದ ಬಡವರ ಬಗ್ಗೆ ಇಂತಹ ಕಡೆಗಣನೆ ಉತ್ತಮ ಸೂಚನೆ ಅಲ್ಲ. ಬಡಜನರಿಗೆ ಬದುಕಲು ಸಹಾಯ ಮಾಡುವುದು ಸರಕಾರದ ಕರ್ತವ್ಯ ಹಾಗೂ ಜವಾಬ್ದಾರಿ. ಯಾವುದೇ ಶಾಸಕರಾಗಲಿ, ಸಚಿವರಾಗಲೀ, ಪಂಚಾಯತ್‌ ರಾಜ್‌ ಮಂತ್ರಿಗಳಿಗೆ ಇದರ ಬಗ್ಗೆ ಕಾಳಜಿ ಇದ್ದಂತೆ ತೋರುತ್ತಿಲ್ಲ. ಈ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಬಡವರಿಗೆ ಮನೆಗಳನ್ನು ಒದಗಿಸಿಕೊಂಡಬೇಕು ಎಂದು ಮನವಿ ಮಾಡಿದ್ದಾರೆ.

ಅದೇ ಅಲ್ಲದೆ ಅಂತ್ಯ ಸಂಸ್ಕಾರ ಯೋಜನೆ ಮೂಲಕ ಅದೇಷ್ಟೋ ಬಡಕುಟುಂಬಗಳಲ್ಲಿರುವ ವ್ಯಕ್ತಿಗಳು ಮರಣ- ಹೊಂದಿದಾಗ ಅಂತ್ಯಸಂಸ್ಕಾರ ನಡೆಸುವ ಬಗ್ಗೆ ಸಹಾಯಾರ್ಥವಾಗಿ ರೂ 5000 ಸರಕಾರ ಕಂದಾಯ ಇಲಾಖೆ ಮೂಲಕ ಕಳೆದ ಕೆಲವು ವರ್ಷಗಳಿಂದ ನೀಡಲಾಗುತ್ತಿದ್ದು, ಆದರೆ ಈ ಯೋಜನೆಯಲ್ಲಿ ಅನೇಕರಿಗೆ ಹಣವೇ ಸಿಕ್ಕಿಲ್ಲ. ಈಗ ಅರ್ಜಿಗಳಣ್ನು ಸ್ವೀಕರಿಸುವುದು ಕೂಡ ನಿಲ್ಲಿಸಲಾಗಿದೆ.

ಬಡವರಿಗಾಗಿ ಇರುವ ಇಂತಹ ಯೋಜನೆಗಳನ್ನು ಕಡಿತಗೊಳಿಸಿ ಬಡವರಿಗೆ ಬಿಜೆಪಿ ಸರಕಾರ ಮೋಸ ಮಾಡುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರೂ ಕೂಡ ಕೂಗು ಎಬ್ಬಿಸುವ ಅವಶ್ಯಕತೆ ಇದೆ. ಸರಕಾರ ಕೂಡಲೇ ಎರಡೂ ಯೋಜನೆಗಳನ್ನು ಪುನಃ ಆರಂಭಿಸಿ ಬಡವರಿಗೆ ಬದುಕಲು ಅವಕಾಶ ಮಾಡಿಕೊಡುವಂತೆ ಅವರು ಆಗ್ರಹಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು