1:36 PM Wednesday26 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಸಕಲೇಶಪುರ ಹೆಬ್ಬನಹಳ್ಳಿ ತೋಟದಲ್ಲಿ ಬೆಳೆದಿದೆ ಗಜ ಗಾತ್ರದ ಹಲಸು; ತೂಕ 72 ಬರೋಬ್ಬರಿ ಕೆಜಿ!!

08/07/2026, 12:28

ಹಾಸನ(reporterkarnataka.com): ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ತೋಟವೊಂದರ ಹಲಸಿನ ಮರದಲ್ಲಿ 72 ಕೆ.ಜಿ. ತೂಕದ ಹತ್ತು ಹಲಸಿನ ಹಣ್ಣುಗಳು ಬಿಟ್ಟಿವೆ! ಹೆಬ್ಬನಹಳ್ಳಿಯ ಎಚ್‌.ಬಿ. ಪ್ರತಾಪ್‌ಕುಮಾರ್ ಎಂಬುವರು ತಮ್ಮ ತೋಟದ ಮರದಲ್ಲಿದ್ದ ಮೂರು ಹಲಸಿನ ಹಣ್ಣುಗಳನ್ನು ಇಲ್ಲಿಯ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಮೂರು ದಿನಗಳಿಂದ ನಡೆದ ಹಲಸು ಹಾಗೂ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.ಬೃಹತ್‌ ಗಾತ್ರದ ಹಲಸಿನ ಹಣ್ಣುಗಳು ಎಲ್ಲರ ಗಮನ ಸೆಳೆದವು.ಮೇಳಕ್ಕೆ ಬಂದವರು ಈ ದೈತ್ಯ ಹಲಸಿನ ಹಣ್ಣುಗಳನ್ನು ನೋಡಿ ಬೆರಗಾದರು. ಒಂದು ಹಣ್ಣನ್ನು ಒಬ್ಬರ ಕೈಯಿಂದ ಎತ್ತಲು ಸಾಧ್ಯವಿಲ್ಲ. ಕನಿಷ್ಠ ಇಬ್ಬರು ಬೇಕು.
‘ಇಷ್ಟು ಗಜಗಾತ್ರದ ಹಲಸಿನ ಹಣ್ಣುಗಳನ್ನು ನಾನು ನೋಡಿಯೇ ಇಲ್ಲ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಬಿ.ಇ. ಭಾನುಪ್ರಕಾಶ್‌ ಅಚ್ಚರಿ ವ್ಯಕ್ತಪಡಿಸಿದರು. ಪ್ರತಾಪ್ ಅವರ ತೋಟಕ್ಕೂ ಹೋಗಿ ಮರದಲ್ಲಿದ್ದ ಇಷ್ಟೇ ಗಾತ್ರದ ಏಳು ಹಣ್ಣುಗಳ ವಿಡಿಯೊ ಮಾಡಿಕೊಂಡು ಬಂದಿದ್ದಾರೆ.

‘54.43 ಕೆ.ಜಿ. ತೂಕದ ಹಲಸಿನ ಹಣ್ಣು ಇದುವರೆಗಿನ ಜಗತ್ತಿನ ಅತಿ ದೊಡ್ಡ ಹಣ್ಣು ಎಂದು ಗೂಗಲ್ ಮಾಹಿತಿ ಹೇಳುತ್ತದೆ. ಹೆಬ್ಬನಹಳ್ಳಿ ಪ್ರತಾಪ್ ಪ್ರದರ್ಶನಕ್ಕೆ ಇಟ್ಟಿದ್ದ ಹಲಸಿನ ಹಣ್ಣುಗಳು 72 ಕೆ.ಜಿ. ತೂಗುತ್ತವೆ. ತೋಟಗಾರಿಕಾ ಇಲಾಖೆಯಲ್ಲಿ ಇಷ್ಟು ತೂಕದ ಹಲಸಿನ ಹಣ್ಣಿನ ತಳಿ ಇಲ್ಲ. ಜಗತ್ತಿನ ಅತಿ ದೊಡ್ಡ ಹಾಗೂ ಹೆಚ್ಚು ತೂಕದ ಹಲಸಿನ ಹಣ್ಣುಗಳು ಇವೇ ಇರಬಹುದೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಒಂದು ವೇಳೆ, ಈ ಹಣ್ಣುಗಳ ತೂಕ, ಗಾತ್ರವೇ ದೊಡ್ಡದು ಎಂದು ಸಾಬೀತಾದರೆ ಹೆಬ್ಬನಹಳ್ಳಿಯ ದೈತ್ಯ ಹಲಸಿನ ಹಣ್ಣುಗಳು ದಾಖಲೆ ಪುಸ್ತಕ ಸೇರಲಿವೆ’ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು