3:59 AM Sunday30 - August 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

*3 ಕೊಲೆ, 37 ವರ್ಷ ಶಿಕ್ಷೆ: ದೇಶದಲ್ಲೇ ದೀರ್ಘಾವಧಿ ಜೈಲುವಾಸ ಅನುಭವಿಸಿ ಹೊರಬಂದ ಕಲಬುರಗಿಯ ಸಾಯ್ಬಣ್ಣ..!*

06/07/2026, 12:37

ಕಲಬುರಗಿ(reporterkarnataka.com): ದೇಶದಲ್ಲೇ ಅತ್ಯಂತ ದೀರ್ಘಾವಧಿಯ ಜೈಲು ಶಿಕ್ಷೆ ಅನುಭವಿಸಿದ ಇತಿಹಾಸ ಹೊಂದಿರುವ ಕಲಬುರಗಿ ಜಿಲ್ಲೆಯ ಜೇವರ್ಗಿಯ ಸಾಯಿಬಣ್ಣ ಲಿಂಗಪ್ಪ ನಟೇಕರ್ (72) ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಸನ್ನಡತೆಯ ಆಧಾರದ ಮೇಲೆ ಮುಕ್ತಿ ಹೊಂದಿದ 24 ಜೀವಾವಧಿ ಕೈದಿಗಳಲ್ಲಿ ಈತ ಕೂಡ ಒಬ್ಬನಾಗಿದ್ದು, ಬರೋಬ್ಬರಿ 37 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿದ್ದಾನೆ.
ಸಾಯಿಬಣ್ಣನ ಇತಿಹಾಸ 1988ರಲ್ಲಿ ಆರಂಭವಾಗಿತ್ತು. ತನ್ನ ಮೊದಲ ಪತ್ನಿ ಮಲ್ಕವ್ವ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದ ಮೇಲೆ ಆಕೆಯನ್ನು ಕೊಲೆ ಮಾಡಿದ್ದ ಈತನಿಗೆ 1993ರಲ್ಲಿ ಶಿಕ್ಷೆಯಾಗಿತ್ತು. ಆದರೆ, ಜೈಲಿನಲ್ಲಿದ್ದಾಗ ಪೆರೋಲ್ (ತಾತ್ಕಾಲಿಕ ಬಿಡುಗಡೆ) ಮೇಲೆ ಹೊರಬಂದ ಈತ ನಾಗಮ್ಮ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದನು. 1994ರಲ್ಲಿ ಎರಡನೇ ಪತ್ನಿಯೂ ಮತ್ತೊಬ್ಬನ ಜೊತೆ ಇರುವುದನ್ನು ಕಂಡು ಆಕ್ರೋಶಗೊಂಡು ಆಕೆಯನ್ನೂ ಹಾಗೂ ತಡೆಯಲು ಬಂದ ತನ್ನದೇ ಮಗು ವಿಜಯಲಕ್ಷ್ಮಿಯನ್ನೂ ಕೊಂದಿದ್ದನು. ಮಗಳು ಮತ್ತು ಹೆಂಡತಿಯ ಕ್ರೂರ ಕೊಲೆ ಪ್ರಕರಣಕ್ಕೆ ನ್ಯಾಯಾಲಯ ಈತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ಬಳಿ 7 ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಇತ್ತು. ಸುದೀರ್ಘ ವಿಳಂಬ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಕಾನೂನುಬಾಹಿರವಾಗಿ ಏಕಾಂತ ಕಾರಾಗೃಹ ವಾಸದಲ್ಲಿದ್ದ ಅಂಶವನ್ನು ಪರಿಗಣಿಸಿ, ಕರ್ನಾಟಕ ಹೈಕೋರ್ಟ್ ಈತನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿತ್ತು.
ಪ್ರಸ್ತುತ 37 ವರ್ಷಗಳ ಸುದೀರ್ಘ ಸೆರೆವಾಸ ಮುಗಿಸಿ ವೃದ್ಧಾಪ್ಯದಲ್ಲಿ ಹೊರಬಂದಿರುವ ಸಾಯಿಬಣ್ಣನಿಗೆ ತಾನು ಮಾಡಿದ ಮೂರು ಕೊಲೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲದಿರುವುದು ಸಾರ್ವಜನಿಕರಲ್ಲಿ ತೀವ್ರ ಆಶ್ಚರ್ಯ ಮೂಡಿಸಿದೆ. ಜೈಲಿನ ನಿಯಮಗಳ ಪ್ರಕಾರ ಸನ್ನಡತೆ ತೋರಿದರೂ, ಮಾನಸಿಕವಾಗಿ ಈತನ ಕ್ರೂರ ಮತ್ತು ಪಶ್ಚಾತ್ತಾಪವಿಲ್ಲದ ವಿಚಿತ್ರ ಮನಸ್ಥಿತಿ ಹಾಗೇ ಉಳಿದಿರುವುದು ಈ ಇಡೀ ಕಥೆಯ ಕರಾಳ ಮುಖವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು