12:03 PM Tuesday30 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

ದೇವರನಾಡಿನಲ್ಲಿ ಬಡತನದ ಆಘಾತಕಾರಿ ಘಟನೆ | ಹೋಟೆಲ್‌ನಲ್ಲಿ ಕೊನೆಯ ಊಟ ಮಾಡಿ ನದಿಗೆ ಹಾರಿ ಒಂದೇ ಕುಟುಂಬದ 4 ಮಂದಿ ಸಾಮೂಹಿಕ ಆತ್ಮಹತ್ಯೆ

30/06/2026, 12:02

ತಿರುವನಂತಪುರಂ(reporterkarnataka.com): ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳದಿಂದ ಒಂದು ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ. ಬಡತನ, ವಸತಿಹೀನತೆಯಿಂದ ಕಂಗೆಟ್ಟ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದೆ.
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದ್ದ ದಂಪತಿ, ಕೊನೆಯ ಬಾರಿ ತಮ್ಮ ಇಬ್ಬರು ಮಕ್ಕಳ ಜೊತೆ ಊಟ ಸವಿದು, ನದಿಗೆ ಹಾರಿ, ಸಾಮೂಹಿಕವಾಗಿ ಪ್ರಾಣ ಕಳೆದುಕೊಂಡಿರುವ ಕರುಣಾಜನಕ ಘಟನೆಗೆ ರಾಜ್ಯ ಶಾಕ್ ಆಗಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹೆಸರು ನಾರಾಯಣನ್, ಇವರು ಮೂಲ ಪಾಲಕ್ಕಾಡ್’ನ ಇಲವಂಚೇರಿ. ಇವರು ದಿನಗೂಲಿ ಕಾರ್ಮಿಕ. ಈತನ ಪತ್ನಿ ಬಿಜಿಮೋಲ್ ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದವರು. ದಂಪತಿಗಳಿಗೆ ಆರು ವರ್ಷದ ಮತ್ತು ಎರಡು ವರ್ಷದ ಇಬ್ಬರು ಮಕ್ಕಳು. ಗುರುವಾಯೂರಿನ ದತ್ತಿ ಸಂಸ್ಥೆಯೊಂದು, ಇವರ ವಿವಾಹವನ್ನು ನಡೆಸಿತ್ತು. ಸಂಬಂಧಿಕರಿಂದ ದೂರವಿದ್ದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ವಾಸವಿದ್ದ ಮನೆಯಲ್ಲಿ ಬಾಡಿಗೆ ಕಟ್ಟದ ಹಿನ್ನಲೆಯಲ್ಲಿ, ಮನೆ ಮಾಲೀಕ, ಮನೆ ಖಾಲಿ ಮಾಡಿಸಿದ್ದ. ಹಾಗಾಗಿ, ನಾಲ್ವರ ಈ ಕುಟುಂಬ ಅಕ್ಷರಸಃ ಬೀದಿಗೆ ಬಂದಿತ್ತು.
ಇಬ್ಬರು ಪುಟ್ಟ ಮಕ್ಕಳು, ಅಂಧ ಪತ್ನಿ, ಮುಂದೇನು ಎನ್ನುವುದೇ ಸಮಸ್ಯೆ
ಕೊಠಮಂಗಲಂ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಈ ಕುಟುಂಬ ವಾಸವಾಗಿತ್ತು. ಇಬ್ಬರು ಪುಟ್ಟ ಮಕ್ಕಳು, ಅಂಧ ಪತ್ನಿ, ಮುಂದೇನು ಎನ್ನುವುದು ತೋಚದೇ, ನಾರಾಯಣನ್, ಠಾಣೆಯಲ್ಲಿ ಕಣ್ಣೀರು ಇಡುತ್ತಾ ತನ್ನ ಕುಟುಂಬದ ಸಮಸ್ಯೆಯನ್ನು ಪೊಲೀಸರ ಮುಂದೆ ವಿವರಿಸುತ್ತಾರೆ. ಇದಕ್ಕೆ ಮಾನವೀಯತೆ ದೃಷ್ಟಿಯಲ್ಲಿ ಸ್ಪಂದಿಸಿದ ಪೊಲೀಸರು, ತಾವೇ ದುಡ್ಡನ್ನು ಹಾಕಿ, ದಿನಬಾಡಿಗೆ ಲೆಕ್ಕದಲ್ಲಿ ಅವರಿಗೊಂದು ಊಟ ವಸತಿಯನ್ನು ಕಲ್ಪಿಸಿದ್ದರು. ಈ ಕುಟುಂಬಕ್ಕಾಗಿ ಬಾಡಿಗೆ ಮನೆಯನ್ನು ಹುಡುಕಿ, ಇನ್ನೇನು ಆ ಮನೆಗೆ ಕುಟುಂಬವನ್ನು ಸ್ಥಳಾಂತರಿಸಬೇಕು ಎನ್ನುವಷ್ಟರಲ್ಲಿ, ಕುಟುಂಬ ಇಹಲೋಕದಿಂದಲೇ ತ್ಯಜಿಸುವ ದಾರುಣ ನಿರ್ಧಾರಕ್ಕೆ ಬಂದಿತ್ತು.
ಕೇರಳ ಪೊಲೀಸರ ಮಾನವೀಯತೆಯ ಕೆಲಸ
ಯಾವ ದಿನದಂದು ಕುಟುಂಬವನ್ನು ಬಾಡಿಗೆ ಮನೆಗೆ ಶಿಫ್ಟ್ ಮಾಡಬೇಕೆಂದು ಪೊಲೀಸರು ನಿರ್ಧರಿಸಿದ್ದರೋ, ಅದೇ ದಿನ ಕುಟುಂಬ ನಾಪತ್ತೆಯಾಗಿತ್ತು. ಇವರಿಗಾಗಿ ವಿಶೇಷ ತಂಡದೊಂದಿಗೆ ಪೊಲೀಸರು ಹುಡುಕಾಟ ನಡೆಸಿದಾಗ, ಸಿಸಿಟಿವಿಯಲ್ಲಿ ಇವರ ಚಲನವಲನದ ದೃಶ್ಯಗಳು ಪತ್ತೆಯಾಗಿದೆ. ಅದರಲ್ಲಿ, ನಾರಾಯಣನ್ ತನ್ನ ಇಬ್ಬರು ಮಕ್ಕಳ ಕೈಯನ್ನು ಹಿಡಿದುಕೊಂಡು, ಹೋಟೆಲ್ ಬಳಿ ನಂತರ ಚರ್ಚ್ ಬಳಿ ಇರುವುದು ಪತ್ತೆಯಾಗಿತ್ತು. ಅಲ್ಲಿಂದ, ಪಿರಾವೂಮ್ ಸೇತುವೆಯ ಕಡೆ ನಡೆದುಕೊಂಡು ಹೋಗಿರುವುದು ರೆಕಾರ್ಡ್ ಆಗಿತ್ತು.
ಮೊದಲು ನದಿಯಲ್ಲಿ ತೇಲಿ ಬಂದಿದ್ದು ಎರಡು ವರ್ಷದ ಮಗುವಿನ ಶವ ಶೋಧಕಾರ್ಯವನ್ನು ಸ್ಥಳೀಯ ಪೊಲೀಸರು ತೀವ್ರಗೊಳಿಸುತ್ತಿರುವ ಹೊತ್ತಿನಲ್ಲೇ, ಎರಡು ವರ್ಷದ ಮಗುವಿನ ಶವ ತೇಲಿ ಬರುತ್ತಿರುವುದನ್ನು ಮೀನುಗಾರರೊಬ್ಬರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಇಡೀ ಕುಟುಂಬವೇ ನದಿಗೆ ಹಾರಿರಬೇಕು ಎಂದು ಅಗ್ನಿಶಾಮಕಾ ದಳ ಶೋಧ ಕಾರ್ಯಾಚರಣೆಗೆ, ಸ್ಥಳೀಯ ಪೊಲೀಸರ ಜೊತೆ ಕೈಜೋಡಿಸಿತು. ಮೊದಲು, ನಾರಾಯಣನ್ ಪತ್ನಿ ಬಿಜಿಮೋಲ್, ನಂತರ ನಾರಾಯಣನ್ ಮತ್ತು ಕೊನೆಯದಾಗಿ ಆರು ವರ್ಷದ ಮಗುವಿನ ಶವವನ್ನು ಹೊರತೆಗೆಯಲಾಗಿದೆ. ಅಲ್ಲಿಗೆ, ಬಡತನ, ಹಸಿವು, ವಸತಿಹೀನತೆ, ಇಡೀ ಕುಟುಂಬವನ್ನೇ ಬಲಿತೆಗೆದುಕೊಂಡಿದೆ.
ಪೊಲೀಸ್ ನಿರೀಕ್ಷಕರಾದ ಕೆಆರ್ ಪ್ರಶಾಂತ್ ಕುಮಾರ್ ಹೇಳಿಕೆ
“ಬಾಡಿಗೆ ಮನೆಯಿಂದ ಮಾಲೀಕ ಹೊರಹಾಕಿದ ಒಂದು ವಾರದ ನಂತರ ಕುಟುಂಬ ಈ ತೀವ್ರ ನಿರ್ಧಾರವನ್ನು ತೆಗೆದುಕೊಂಡಿದೆ. ಆರು ವಾರಗಳಿಂದ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಾಯವನ್ನು ಮಾಡುತ್ತಿದ್ದಾರೆ, ನಮಗೆ ಪರ್ಯಾಯ ವ್ಯವಸ್ಥೆಯೊಂದನ್ನು ಮಾಡಿಕೊಡಿ ಎಂದು ಒಂದು ವಾರದ ಹಿಂದೆ ನಮ್ಮಲ್ಲಿ ವಿನಂತಿಸಿಕೊಂಡಿದ್ದರು. ಅವರಿಗೆ ಪುನರ್-ವಸತಿ, ಕಲ್ಪಿಸಲು ನಾವು ಪ್ರಯತ್ನವನ್ನೂ ಮಾಡಿದ್ದೆವು. NJO ಒಂದರಲ್ಲಿ ಮಾತುಕತೆ ನಡೆದಿತ್ತು, ಆದರೆ, ಅದು ಮಹಿಳೆಯರಿಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ, ನಾವೇ ಅವರ ಕಷ್ಟಕ್ಕೆ ಸಹಾಯವಾಗಿ ನಿಂತಿದ್ದೆವು. ನಾವೇ ಮನೆಯನ್ನು ಹುಡುಕಿ, ಗುರುವಾರ, ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆವು. ಅಷ್ಟರೊಳಗೆ ಕುಟುಂಬ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದೆ” ಎಂದು ಪೊಲೀಸ್ ನಿರೀಕ್ಷಕರಾದ ಕೆಆರ್ ಪ್ರಶಾಂತ್ ಕುಮಾರ್, ಬೇಸರ ವ್ಯಕ್ತ ಪಡಿಸಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯ ಕೆಯು ಶಮೀರ್ ನೋವು
ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಈ ದುರಂತ ಸಾವಿನ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ಕಳೆದ ಒಂದು ವರ್ಷದಿಂದ ಈ ಕುಟುಂಬ ಗ್ರಾಮದಲ್ಲಿ ವಾಸಿಸುತ್ತಿತ್ತು. ಸರ್ಕಾರದ ಯಾವುದೇ ಸಾಮಾಜಿಕ ಭದ್ರತೆಯಡಿಯಲ್ಲಿ ಈ ಕುಟುಂಬ ಇರಲಿಲ್ಲ. ಪ್ರತಿದಿನ ಬೆಳಗ್ಗೆ ಮಕ್ಕಳನ್ನು ದಂಪತಿಗಳು ಸ್ಕೂಲಿಗೆ ಬಿಡುತ್ತಿದ್ದರು, ಶಾಲೆಯ ಸಮಯ ಮುಗಿಯುತ್ತಿದ್ದಂತೇ, ವಾಪಸ್ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಇವರು ಏನು ಕೆಲಸ ಮಾಡಿಕೊಂಡಿದ್ದರು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಸರ್ಕಾರ ಬಡತನ ನಿರ್ಮೂಲನೆಯಾಗಿದೆ ಎಂದೇನೋ ಹೇಳುತ್ತಿದೆ. ಆದರೆ, ಈ ಕಟುವಾಸ್ತವ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ” ಎಂದು ಗ್ರಾಮ ಪಂಚಾಯತಿ ಸದಸ್ಯ ಕೆಯು ಶಮೀರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು