10:19 PM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಡಿಬಿಎಲ್ ಕಂಪನಿಯ ಕಳಪೆ ಕಾಮಗಾರಿ: ಮಂಗಳೂರು- ಮೂಡುಬಿದಿರೆ ಮಿಜಾರಿನಲ್ಲಿ ಮಳೆಗೆ ಕೊಚ್ಚಿ ಹೋದ ರಸ್ತೆ

06/06/2026, 20:25

ಮಂಗಳೂರು(reporterkarnataka.com): ಡಿಬಿಎಲ್ ಕಂಪನಿಯ ಕಳಪೆ ಕಾಮಗಾರಿಯಿಂದ ಮಂಗಳೂರು- ಮೂಡುಬಿದಿರೆ ಮಿಜಾರಿನಲ್ಲಿ ರಸ್ತೆಯು ಮಳೆಗೆ ಕೊಚ್ಚಿ ಹೋಗಿ ಅಪಾಯದ ಸ್ಥಿತಿ ಎದುರಾಗಿದೆ.
ರಾ. ಹೆ. ನಿಮಿ೯ಸುವ ಮೊದಲು ವೈಜ್ಞಾನಿಕ ರೀತಿಯಲ್ಲಿ ಸವೀ೯ಸ್ ರಸ್ತೆಯನ್ನು ನಿಮಿ೯ಸದೆ ನೀರು ಹರಿಯುವ ದೊಡ್ಡ ಸೇತುವೆ ಜಾಗದಲ್ಲಿ ಅತೀ ಚಿಕ್ಕ ಮೋರಿ ನಿರ್ಮಿಸಿರುವುದರಿಂದಲೇ ರಸ್ತೆ ಕುಸಿಯಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಇದೀಗ ಹೊಂಡವಾಗಿರುವ ರಸ್ತೆಯ ಬದಿಗೆ ಕಲ್ಲುಗಳನ್ನು ಮಾತ್ರ ಇಡಲಾಗಿದೆ ಹೊರತು ಯಾವುದೇ ಸುರಕ್ಷತಾ ಕ್ರಮದ ಸೂಚನಾ ಫಲಕಗಳನ್ನು ಸಂಬಂಧಪಟ್ಟ ಇಲಾಖೆಯವರು ಅಳವಡಿಸಿಲ್ಲ. ಇದರಿಂದಾಗಿ ರಾತ್ರಿ ಸಂಚರಿಸುವ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಸ್ಥಳೀಯರಾದ ಗಣೇಶ್ ಅವರು ಹೈವೇ ಕಾಮಗಾರಿಯು ಕಳಪೆಯಾಗಿದೆ. ಅಗತ್ಯವಿರುವಲ್ಲಿ ಮೋರಿ ರಚನೆ ಮಾಡದೆ ನೀರು ಹರಿದು ಹೋಗಲು ಸ್ಥಳವಿಲ್ಲದೆ ರಸ್ತೆಯಲ್ಲಿಯೇ ನಿಲ್ಲುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಎರಡ್ಮೂರು ಕಡೆಗಳಲ್ಲಿ ನಿಮಿ೯ಸಿರುವ ಮೋರಿಗಳಲ್ಲಿ ಸರಿಯಾಗಿ ನೀರು ಹರಿದು ಹೋಗದಿರುವುದರಿಂದಲೇ ಅನಾಹುತಕ್ಕೆ ಕಾರಣವಾಗಿದೆ ಎಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯವರು ಮೊದಲು ಸವೀ೯ಸ್ ರಸ್ತೆಯನ್ನು ನಿಮಿ೯ಸದೆ ಇರುವುದರಿಂದ ಅನಾಹುತಗಳು ಸಂಭವಿಸುತ್ತಿದೆ. ಈ ಬಗ್ಗೆ ನಾವು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದೇವೆ ಆದರೆ ಪ್ರಯೋಜನವಾಗಿಲ್ಲ. ಮಿಜಾರಿನಲ್ಲಿ ಎಂಜಿನಿಯರ್, ಮೆಡಿಕಲ್ ಕಾಲೇಜುಗಳಿದ್ದು ಶಿಕ್ಷಣ ಕಾಶಿಯಾಗಿದೆ. ಆದರೆ ನೀರು ಹೋಗಲು ಸರಿಯಾದ ವ್ಯವಸ್ಥೆಯನ್ನು ಹೆದ್ದಾರಿ ಇಲಾಖೆಯವರು ಮಾಡದಿರುವುದರಿಂದ ಸಾವ೯ಜನಿಕರು ತೊಂದರೆಯನ್ನು ಅನುಭವಿಸುವಂತ್ತಾಗಿದೆ ಎಂದು ಸ್ಥಳೀಯರಾದ ತನ್ಸೀರ್ ತಿಳಿಸಿದ್ದಾರೆ.
DBL ಕಂಪನಿಯ ಅವೈಜ್ಞಾನಿಕ ಕಳಪೆ ಹೆದ್ದಾರಿ ಕಾಮಗಾರಿಯ ಬಗ್ಗೆ ,ನೀರು ಹರಿಯುವ ದೊಡ್ಡ ಸೇತುವೆ ಜಾಗದಲ್ಲಿ ಅತೀ ಚಿಕ್ಕ ಮೋರಿ ನಿರ್ಮಿಸಿರುವುದರ ಬಗ್ಗೆ, ಅದರ ಅಡಿಪಾಯವನ್ನು ನೀರು ಹರಿಯುವ ಜಾಗಕ್ಕಿಂತ ಮೇಲ್ಮಟ್ಟದಲ್ಲಿ ನಿರ್ಮಿಸಿದ ಬಗ್ಗೆ ಸಂಬಂಧಪಟ್ಟವರಿಗೆ ಸುಮಾರು 50ಕ್ಕೂ ಹೆಚ್ಚು ದೂರನ್ನು ನೀಡಲಾಗಿತ್ತು, ಆದರೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಕೊಂಡಿಲ್ಲ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ (PD) ಒಂದೇ ಒಂದು ಸಲ ಕೂಡ ಬೇಟಿ ನೀಡಿಲ್ಲ , ಕಾಮಗಾರಿ ಆರಂಭವಾದ ದಿನದಿಂದ ಯಾವೊಬ್ಬ ಜನಪ್ರತಿನಿಧಿಯೂ ಈ ಅವೈಜ್ಞಾನಿಕ ಕಾಮಗಾರಿಯನ್ನು ವೀಕ್ಷಿಸಲು ಬಂದಿಲ್ಲ,
ಈಗ ತೆಂಕ ಮಿಜಾರಿನ ಈ ಹೆದ್ದಾರಿ ಒಂದೇ ಮಳೆಗೆ ಕೊಚ್ಚಿ ಹೋಗಿದೆ. ಇದಕ್ಕೆ ನೇರ ಹೊಣೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೇಜಾವಾಬ್ದಾರಿ ಯೋಜನಾ ನಿರ್ದೇಶಕ,ಮತ್ತು ಅದರ ಇಂಜಿನಿಯರ್ ಗಳು. ಅವರ ಮೇಲೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು