ಇತ್ತೀಚಿನ ಸುದ್ದಿ
ಇಂಧನ ದರ ಹೆಚ್ಚಳ: ಮೇ ತಿಂಗಳಲ್ಲಿ 12 ಬಾರಿ ಏರಿಕೆ; ಪೆಟ್ರೋಲ್ 2.81 ರೂ., ಡೀಸೆಲ್ 3.34 ರೂ.ಹೆಚ್ಚಳ!
24/05/2021, 11:17
ನವದೆಹಲಿ(reporterkarnataka news) : ದೇಶದಲ್ಲಿ ಇಂಧನ ದರ ಮತ್ತೆ ಏರಿಕೆಯಾಗುತ್ತಿದ್ದು, ಮೇ ತಿಂಗಳಲ್ಲಿ ಒಟ್ಟು 12 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.
ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.81 ರೂ. ಡೀಸೆಲ್ ಮೇಲೆ 3.34 ರೂ. ಹೆಚ್ಚಳ ಮಾಡಲಾಗಿದೆ.
ಭಾನುವಾರ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 13 ಪೈಸೆ, ಡೀಸೆಲ್ ಬೆಲೆ 29 ಪೈಸೆ ಏರಿಕೆ ಮಾಡಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪೆಟ್ರೋಲ್ 93.21 ರೂ., ಡೀಸೆಲ್ 84.07 ರೂಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ 99.49 ರೂ., ಡೀಸೆಲ್ 92.78 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 94.40 ರೂ. ಡೀಸೆಲ್ ಬೆಲೆ 88.87 ರೂ. ಇದೆ.