3:34 AM Monday6 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಮೊರಬ ಶ್ರೀವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಹೆಜ್ಜೇನು ಗೂಡು: ಶುಭ ಅಶುಭದ ಲೆಕ್ಕಾಚಾರ; ಹೂ ಫಲ ಕೇಳಿದ ಗ್ರಾಮದ ದೈವಸ್ಥರು!!

08/09/2021, 09:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದಲ್ಲಿ, ಶ್ರೀವೀರಭದ್ರೇಶ್ವರ ದೇವಸ್ಥಾನದ ಟರಾಸಿನ್ನಲ್ಲಿ ಹೆಜ್ಜೇನು ಹುಳುಗಳು ಗೂಡು ಕಟ್ಟಿವೆ. ಬೃಹದಾಕಾರದಲ್ಲಿ ನಿರ್ಮಿಸಲಾಗಿರುವ ಹೆಜ್ಜೇನು ಗೂಡು ದೇವರ ದರ್ಶನಕ್ಕೆ ಬರುವ ಭಕ್ತರನ್ನ ಸ್ವಾಗತಿಸುತ್ತಿವೆ. ಅಸಂಖ್ಯಾತ ಹೆಜ್ಜೇನು ಹುಳುಗಳು ಬೃಹತ್ ಗೂಡು(ಹುಟ್ಟು)ಕಟ್ಟಿದ್ದು ಶುಭವೋ ಅಶುಭವೋ ಭಕ್ತರಿಗೆ ತೊಂದರೆ ಕೊಡುತ್ತವೆಯೋ..!?ಎಂಬ ಆತಂಕ ಗ್ರಾಮದ ದೈವಸ್ಥರಲ್ಲಿ ಮನೆ ಮಾಡಿತ್ತು.ಅದಕ್ಕಾಗಿ ಪ್ರಾರಂಭದಲ್ಲಿಯೇ ಈ ಬಗ್ಗೆ ಗ್ರಾಮದ ದೈವಸ್ಥರು, ಶ್ರೀ ವೀರಭದ್ರ ದೇವರಲ್ಲಿ ಶುಭ ಅಶುಭ ಕುರಿತು ಮತ್ತು ಜೇನು ಹುಟ್ಟು ತೆರವು ಗೊಳಿಸಲು ಅನುಮತಿ ಕೋರಿ ಹೂ ಫಲ ಕೇಳಿದ್ದಾರೆ. ಶ್ರೀವೀರಭದ್ರೇಶ್ವರ ಸ್ವಾಮಿ ಎಡಭಾಗದ ಹೂ ಕೊಡೋ ಮೂಲಕ, ಭಕ್ತರಿಗೆ ಅಭಯ ನೀಡಿದ್ದು ಹಾಗೂ ಜೇನು ಹುಳುಗಳಿಗೂ ಆಶ್ರಯ ಹಸ್ತ ನೀಡಿದ್ದಾರೆ.

ಈ ಹೆಜ್ಜೇನು ಕಳೆದ ಆರು ತಿಂಗಳಿಂದ ದೇವಸ್ಥಾನದ ಮಧ್ಯ ಭಾಗದಲ್ಲಿ ನಿರ್ಮಾಣವಾಗಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಸದಾ ಬೃಹತ್ ಗಾತ್ರದ ಹೆಜ್ಜೇನು ಹುಳುಗಳು ಹಾರಾಡುತ್ತಿರುತ್ತವೆ. ದೇವರ ದರ್ಶನಕ್ಕೆ ಬರುವ ಭಕ್ತರನ್ನ ನಯವಾಗಿ ಸ್ಪರ್ಶಿಸುವ ನಿರುಪದ್ರವಿಗಳಾಗಿದ್ದು, ಹೆಜ್ಜೇನು ಹುಳುಗಳು ಭಕ್ತರನ್ನು ಸ್ವಾಗತಿಸಿ ಕೊಳ್ಳುತ್ತಿವೆ ಎಂಬಂತೆ  ಸನ್ನಿವೇಶ ಸೃಷ್ಠಿಯಾಗಿದೆ. ಕಳೆದ ಆರು ತಿಂಗಳಿಂದ ನಿರ್ಮಾಣವಾಗಿರುವ ಹೆಜ್ಜೇನಿನ ಬೃಹತ್ ಗೂಡು ಬಲು ಆಕರ್ಷಕವಾಗಿದ್ದು, ಹುಳುಗಳಿಂದ ಯಾರಿಗೂ ಯಾವೂದೇ ಕಾರಣಕ್ಕೂ ತೊಂದರೆ ಆಗಿಲ್ಲ. ಹೆಜ್ಜೆನು ಗೂಡು ನಿರ್ಮಾಣದಿಂದ ಶ್ರೀವೀರಭದ್ರೇಶ್ವರ ಭಕ್ತರ ಪಾಲಿಗೂ ಶುಭ ಶಕುನವಾಗಿ ಪರಿಣಮಿಸಿದೆ ಯಂತೆ, ದೇವಸ್ಥಾನದಲ್ಲಿ ಹೆಜ್ಜೇನು ವಾಸ ಮಾಡಿರುವುದರಿಂದಾಗಿ ಸಕಲರಿಗೂ ಹಿತವಾಗಲಿದೆ ಎಂದು ಆಸ್ತಿಕರು ಆಶಾಮನೋಭಾವ ಹೊಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು