4:54 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಗ್ರಾಮೀಣ ಮಟ್ಟದ ಜನರಿಗೆ ಕಂಪ್ಯೂಟರ್ ಶಿಕ್ಷಣ: ಅಥಣಿಯಲ್ಲಿ ಪಿಎಂ ದಿಶಾ ವಿಶೇಷ ಕಾರ್ಯಕ್ರಮ

08/09/2021, 09:36

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಪಿಎಂ ದಿಶಾ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾ ವ್ಯವಸ್ಥಾಪಕರಿಂದ ಅಥಣಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಗ್ರಾಮೀಣ ಮಟ್ಟದ ಜನರಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಕುರಿತಾದ ಯೋಜನೆ ಇದಾಗಿದ್ದು ಈಗಾಗಲೇ ಬೆಳಗಾವಿ ಜಿಲ್ಲೆಯಾದ್ಯಂತ ಸಂಪೂರ್ಣ ಉಚಿತವಾಗಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ಪಿಎಂ ದಿಶಾ ದೆಹಲಿ ವಿಭಾಗದ ವ್ಯವಸ್ಥಾಪಕರು ವಿಶ್ವಂ ತ್ಯಾಗಿ ಅಥಣಿಗೆ ಭೇಟಿ ನೀಡಿ ಪಿಎಂ ದಿಶಾ ಕುರಿತಾದ ಮಾಹಿತಿಗಳನ್ನು ನೀಡಿದರು.

ಇದೇ ವೇಳೆ ಜಿಲ್ಲಾ ವ್ಯವಸ್ಥಾಪಕ ವೀರೇಶ್ ಪುರಾಣಿಕ ಮಾತನಾಡಿ, ಪಿಎಂ ದಿಶಾ ಕಾರ್ಯಕ್ರಮವು ಗ್ರಾಮೀಣ ಮಟ್ಟದ ಕಾರ್ಯಕ್ರಮವಾಗಿದ್ದು, ಇದರಿಂದ ಗ್ರಾಮೀಣ ಮಟ್ಟದಲ್ಲಿ ಬಹಳ ಜನರಿಗೆ ಅನುಕೂಲವಾಗಿದೆ. 

ಮುಂಬರುವ ದಿನಗಳಲ್ಲಿ ಸಿಎಸ್ಸಿ ಎಲ್ಲಿ ಆಧಾರ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರ ಕಾರ್ಡ್ ಆಯುಷ್ಮಾನ್ ಭಾರತ ಅಂತಹ ನೂರಾರು ಯೋಜನೆಗಳು ಪ್ರಾರಂಭವಾಗಲಿದ್ದು ಆದಷ್ಟು ಅದರ ಅನುಕೂಲಗಳನ್ನು ಪಡೆಯ ಬೇಕೆಂದರು.

ಇದೇ ಸಂದರ್ಭದಲ್ಲಿ  ಜಿಲ್ಲಾ ವ್ಯವಸ್ಥಾಪಕ ಕಿರಣ್ ಕುಮಾರ್ ಜ್ಯೋಶಿ, ಮಲ್ಲಿಕಾರ್ಜುನ್ ಗೌರೀಶ ಲೆಂಡೇ, ಸಿಕಂದರ್, ಮುಲ್ಲಾ ನಿಜಾಮ ಮುಜಾವರ್ ಹಾಗೂ ಅಥಣಿ ಕಾಗವಾಡ ರಾಯಬಾಗ ಗೋಕಾಕ್ ಮುಂತಾದ ಕಡೆಗಳಲ್ಲಿ ಸಿಎಸ್ಸಿ ವಿಎಲ್ ಈ ಭಾಗವಹಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು