5:59 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಾಳ: ಮಂಜುಶ್ರೀ ಭಜನಾ ಮಂಡಳಿಯಿಂದ ಯೋಗ ತರಗತಿಗೆ ಚಾಲನೆ

07/09/2021, 20:54

ಕಾರ್ಕಳ(reporterkarnataka.com): ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕೆಂಬ ಉದ್ದೇಶದಿಂದ ಯೋಗವನ್ನು ಕರಗತಮಾಡಿಕೊಂಡು ಹಲವಾರು ಜನರಿಗೆ ಮಾರ್ಗದರ್ಶನ ಆಗಬೇಕೆಂಬ ಉದ್ದೇಶದಿಂದ ಹಸಿರು ತಪ್ಪಲಿನ ಮಾಳದಲ್ಲಿ ಯೋಗ ತರಗತಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಮೀಳಾ ಡಿ. ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ರಮಿತಾ ಶೈಲೇಂದ್ರ ದೀಪ ಬೆಳಗಿಸಿ ನೆರವೇರಿಸಿದರು.

ಮಹಿಳೆ ನಾಲ್ಕು ಗೋಡೆಯೊಳಗೆ ಬಂಧಿಯಾಗದೆ ತನಗೆ ತಿಳಿದಿರುವ ವಿದ್ಯೆ ನಾಲ್ಕು ಜನರಿಗೆ ತಿಳಿಸುವ ಮಾತೆ ಯಾಗಬೇಕು. ನಿರಂತರ ಯೋಗದಿಂದ ಆರೋಗ್ಯವಂತರಾಗಿ ಇರಬಹುದು ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. 

ಇನ್ಫೋಸಿಸ್ ನಲ್ಲಿ ಕಾರ್ಯವನ್ನು ನಿರ್ವಹಿಸಿಕೊಂಡು ಹಲವಾರು ಯೋಗ ಅರ್ಜಿಗಳಿಗೆ ಯೋಗವನ್ನು ಕಲಿಸುವ  ಕೃಷ್ಣದಾಸ್ ಅವರು ಯೋಗದಿಂದ ಶತಾಯುಷಿ ಆಗಬಹುದು ಎಂದು ಯೋಗವನ್ನು ಹೇಳಿ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ವೇದಿಕೆಯಲ್ಲಿ ನಲ್ಲೂರು ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಯೋಗ ಶಿಕ್ಷಕಿ ಜಯಂತಿ ಉಪಸ್ಥಿತರಿದ್ದರು. 

ಶೇಖರ್ ಶೆಟ್ಟಿ ಸ್ವಾಗತಿಸಿದರು. ಅವಿನಾಶ್ ಕುಲಾಲ್ ಕಾರ್ಯಕ್ರಮ ನೆರವೇರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು