6:39 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಯು.ಬಿ.ಶೆಟ್ಟಿ ಪ್ರವರ್ತಿತ ಟ್ರಸ್ಟ್  ವತಿಯಿಂದ ಉಪ್ಪುಂದದಲ್ಲಿ ಶಿಕ್ಷಕರ ದಿನಾಚರಣೆ

07/09/2021, 15:57

ಬೈಂದೂರು (reporterkarnataka.com): ನಗರದ ಯು.ಬಿ.ಶೆಟ್ಟಿ ಪ್ರವರ್ತಿತ ಟ್ರಸ್ಟ್ ನ ವತಿಯಿಂದ ಯು.ಬಿ.ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ ಬೈಂದೂರು ಹಾಗೂ ಉಪ್ಪುಂದದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಯು.ಬಿ‌.ಶೆಟ್ಟಿ, ಶಿಕ್ಷಕರ ಪಾತ್ರ ಮಹತ್ವವಾದದ್ದು, ಭರತ ಭೂಮಿಯಲ್ಲಿ ಗುರುವಿಗೆ ವಿಶೇಷವಾದ ಗೌರವವಿದೆ. ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಸುಸಂಸ್ಕೃತ ವ್ಯಕ್ತಿಯ ಜೀವನ ಹಿರಿಮೆ ಮತ್ತು ಗುರುಕುಲ ಪದ್ಧತಿ ಮೂಲಕ ಗುರು ಪರಂಪರೆ ಬೆಳೆದು ಬಂದ ಹಿನ್ನೆಲೆ ಈ ನೆಲದಲ್ಲಿದೆ ಗುರುಗಳ ಶ್ರಮ ವರ್ಣಿಸಲು ಸಾಧ್ಯವಾಗದ್ದು  ಎಂದು ಹೇಳಿದರು. 

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಶಶ್ರೀ ಶೆಟ್ಟಿ ಮಾತನಾಡಿ, ರಾಧಾಕೃಷ್ಣನ್ ಅವರ ಆದರ್ಶ ವಿಶ್ವಕ್ಕೆ ಶ್ರೇಯಸ್ಸು ನೀಡಿದೆ. ಸಂಸ್ಕಾರಯುತ ಜೀವನ ರೂಪಿಸಬೇಕಾದರೆ ಒಬ್ಬ ಯೋಗ್ಯ ಹಾಗೂ ಯಶಸ್ವಿ ಗುರು ಮುಖ್ಯ. ಸುಸಂಸ್ಕೃತ ಸಮಾಜದ ನಿರ್ಮಾಣ ದಲ್ಲಿ ಗುರುಗಳು ಪಾತ್ರ ಬಹುಮುಖ್ಯವಾಗಿದೆ ಎಂದರು. ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಈ ಸಂದರ್ಭದಲ್ಲಿ  ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಗಿ, ಮುಖ್ಯ ಶಿಕ್ಷಕಿ ಅಮಿತಾ, ಸಂದೇಶ್ ಕುಮಾರ್ ಶೆಟ್ಟಿ, ರಂಜಿತಾ, ವೀಣಾ, ಆಶಾ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು