5:53 PM Wednesday18 - March 2026
ಬ್ರೇಕಿಂಗ್ ನ್ಯೂಸ್
Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ ಸ್ಪೀಕರ್‌ ಸಭಾತ್ಯಾಗ ಪ್ರಕರಣ: ಖಾದರ್ ಸಿಟ್ಟಿಗೆ 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್… Mangaluru | ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ… ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ ರಾಜ್ಯ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ… ಕಾರಿನ ಮೇಲೆ ಉರುಳಿದ ಕಟ್ಟಿಗೆ ತುಂಬಿದ ಲಾರಿ: ಮಗು ಸಹಿತ ದಂಪತಿ ಪವಾಡಸದೃಶ… ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್…

ಇತ್ತೀಚಿನ ಸುದ್ದಿ

74ನೇ ಸಾರ್ವಜನಿಕ ಗಣೇಶೋತ್ಸವ: ಮಂಗಳೂರಿನ ಸಂಘನಿಕೇತನಕ್ಕೆ ಪಾರ್ವತಿತನಯ ವಿಗ್ರಹ; ನಮಿಸಿದ ಭಕ್ತ ಜನ

09/09/2021, 19:24

ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com):

ನಗರದ ಮಣ್ಣಗುಡ್ಡೆಯ ಪ್ರತಾಪ್ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ 74ನೇ ಸಾರ್ವ ಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ವಿನಾಯಕನ ವಿಗ್ರಹವನ್ನು ಗುರುವಾರ ಸಂಜೆ ಸಂಘನಿಕೇತನಕ್ಕೆ ಸರಳ ಮೆರವಣಿಗೆಯಲ್ಲಿ ವೈಭವದಿಂದ ತರಲಾಯಿತು.

 

 

ಕೋವಿಡ್ ಹಿನ್ನೆಲೆಯಲ್ಲಿ ಗಣೇಶೋತ್ಸ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಜರಗ ಲಿರುವುದು. ಶುಕ್ರವಾರ ಬೆಳೆಗ್ಗೆ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನೆಯು ದೀಪ ಬೆಳಗಿಸುವುದರ ಮುಖೇನ ಚಾಲನೆ ನೀಡಲಾಗುವುದು  ಬಳಿಕ ಶ್ರೀ ದೇವರ ವಿಗ್ರಹ ಪ್ರತಿಷ್ಠಾಪನೆ , ಗಣಹೋಮ ರಾತ್ರಿ ಮೂಡಗಣಪತಿ ಸೇವೆ , ರಂಗ ಪೂಜೆ ಬಳಿಕ ಮಂಗಳಾರತಿ ನಡೆಯಲಿದೆ . ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆಯಲಿದ್ದು , ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರದ ಆದೇಶ ಪ್ರಕಾರ ಎಲ್ಲ ರೀತಿಯಲ್ಲಿ ನಿಯಮ ಪಾಲಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದ್ರೆಯಾಗದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ . ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ರಘುವೀರ್ ಕಾಮತ್ , ವಿನೋದ್ ಶೆಣೈ , ಜೀವನರಾಜ್ ಶೆಣೈ , ಸತೀಶ್ ಪ್ರಭು , ಸುರೇಶ ಕಾಮತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು