2:27 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

7 ತಾಸಿನಲ್ಲಿ 2 ಟ್ರಾಲಿಯಲ್ಲಿ 28 ಟನ್ ಕಬ್ಬು ಹೇರಿದ ಯುವಕ!: ಅನೀಲ್ ಕಾಬು ಜಾಧವ ಹೊಸ ದಾಖಲೆ

26/02/2022, 12:54

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ‌ ಬರಮಖೋಡಿ ಗ್ರಾಮದ ಅನೀಲ್ ಕಾಬು ಜಾಧವ ಎಂಬ ಯುವಕ, ತಾನೊಬ್ಬನೇ ಕೇವಲ 7 ತಾಸಿನಲ್ಲಿ 2 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.

ಹೌದು, ಈ ಹಿಂದೆ ಇದೇ ಬರಮಖೋಡಿ ಗ್ರಾಮದ ಮತ್ತೊಂದು ಕಬ್ಬಿನ ಗ್ಯಾಂಗಿನ ಯುವಕನೋರ್ವ ಇಷ್ಟೆ ಕಬ್ಬನ್ನು ಎರಡು ಟ್ರಾಲಿಗೆ ತುಂಬಿಸಲು ಸುಮಾರು 9  ತಾಸು 30 ನಿಮಿಷ ಸಮಯ ತಗೊಂಡಿದ್ದ ಇದೀಗ ಜಾಧವ ಗ್ಯಾಂಗಿನ ಅನೀಲ್ ಕಾಬು ಜಾಧವ ಎಂಬ ಯುವಕ ಎರಡು ಡಬ್ಬಿಯಲ್ಲಿ ಸುಮಾರು 28 ಟನ್ ಕಬ್ಬನ್ನು 7 ತಾಸಿನಲ್ಲಿ ಹೇರಿ ದಾಖಲೆ ನಿರ್ಮಿಸಿ ಹಳೆಯ ದಾಖಲೆಯನ್ನು‌ ಮುರಿದಿದ್ದಾನೆ ಎಂದು ಜಾಧವ ಗ್ಯಾಂಗಿನ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಈ ದಾಖಲೆಯನ್ನು ನೋಡಿ ಪರಿಶೀಲಿಸಿ ದೃಢಿಕರಿಸಿ ಮಾತನಾಡಿದ ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾ.ಪಂ ಸದಸ್ಯ ಪರಶುರಾಮ‌ ಸೋನಕರ ಅವರು ಅನೀಲ ಜಾಧವ ಎರಡು ಟ್ರಾಲಿ‌ ಕಬ್ಬನ್ನು ಸುಮಾರು 7 ಗಂಟೆಯಲ್ಲಿ ಹೇರಿದ್ದು‌‌‌ ನಿಜ, ಇದು ಉಳಿದ ಕಬ್ಬು ಹೇರುವ ಗ್ಯಾಂಗಿನವರಿಗೆ ಸ್ಪೂರ್ತಿ, ಇಂತಹ ದಾಖಲೆ ನಮ್ಮ ವಾರ್ಡಿನಲ್ಲಿ ಜರುಗಿರುವುದು ನಮಗೂ ಕೂಡ ಹೆಮ್ಮೆ ಎಂದರು.


ಈ ಕಬ್ಬು ಹೇರುವ ವೇಳೆ ಜಾಧವ ಗ್ಯಾಂಗಿನ ಕಾಬು ಜಾಧವ, ಮುತ್ತಪ್ಪ ಜಾಧವ, ಸಕಾರಾಮ ಚವ್ಹಾಣ, ಅನೀಲ ಜಾಧವ, ರಾಜು ಮಾಳಿ, ರಾಮು ಮಾಳಿ, ಲಾಲಸಾಬ ನದಾಫ, ಮುನ್ನಾಸಾಬ ನದಾಫ, ಪಿಂಟು ಗಡದೆ, ಬಾಳು ಮಾನೆ, ದೀಪಕ ಮಾನೆ, ಮಂಜು ಚಮಕೇರಿ, ಜಾಫರ್ ನದಾಫ್, ಸುನೀಲ ಜಾಧವ, ಓಂಕಾರ ಜಾಧವ, ಸಂಜೀವ ಜಾಧವ, ರಾಜು ಜಾಧವ, ಬಸವರಾಜ ಕಡಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು