ಇತ್ತೀಚಿನ ಸುದ್ದಿ
6 – 12 ವರುಷದೊಳಗಿನ ಮಕ್ಕಳಿಗೆ ಅರ್ಧ ಪ್ರಯಾಣ ದರ: ಕೆಎಸ್ಸಾರ್ಟಿಸಿ ಸ್ಪಷ್ಟನೆ
16/05/2022, 17:51

ಬೆಂಗಳೂರು(reporterkarnataka.com):ಮಕ್ಕಳ ಪ್ರಯಾಣ ದರವನ್ನು 6 ವರುಷ ಮೇಲ್ಪಟ್ಟವರಿಗೆ ಮಾತ್ರ ವಿಧಿಸಲಾಗುತ್ತಿದೆ.
3 ವರುಷದ ಮಕ್ಕಳಿಗೆ ಯಾವುದೇ ಪ್ರಯಾಣ ದರ ವಿಧಿಸುತ್ತಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟನೆ ನೀಡಿದೆ.
ಮಕ್ಕಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ. 3 ವರುಷದ ಮಕ್ಕಳಿಗೂ ಪ್ರಯಾಣ ದರ ಎಂಬ ಸುದ್ದಿಗೆ ಸಂಬಂದಪಟ್ಟಂತೆ ಕೆಎಸ್ಸಾರ್ಟಿಸಿ ವಿವರಣೆ ನೀಡಿದೆ.
ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರುಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ ,6 – 12 ವರುಷದೊಳಗಿನ ಮಕ್ಕಳಿಗೆ ಅರ್ಧ ಪ್ರಯಾಣ ದರ, 12 ವರುಷ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ಪ್ರಯಾಣ ದರವನ್ನು ವಿಧಿಸಲಾಗುತ್ತಿದೆ.
ಕೆಲವೊಂದು ಸಂದರ್ಭಗಳಲ್ಲಿ, ಮಕ್ಕಳು 4-5 ವರುಷ ಆಗಿದ್ದಾಗ ,6 ವರುಷವಾಗಿರುವ ಮಕ್ಕಳಂತೆ, ಅದೇ ರೀತಿ 11-12 ವರುಷದ ಮಕ್ಕಳು 13 ವರುಷದ ಮಕ್ಕಳಂತೆ ಕಾಣುವ ಸಂದರ್ಭಗಳಲ್ಲಿ ಮಕ್ಕಳ ಪಾಲಕರು/ಪೋಷಕರು ಹಾಗೂ ಬಸ್ಸಿನ ಚಾಲನಾ ಸಿಬ್ಬಂದಿಗಳ ನಡುವೆ ಟಿಕೇಟ್ ಪಡೆಯುವಂತೆ ಗಲಾಟೆಗಳು ವರದಿಯಾಗುತ್ತಿರುವ ಬಗ್ಗೆ ಮನಗಂಡು ಅಕ್ಟೋಬರ್ 2021 ರಲ್ಲಿ ಸ್ಪಷ್ಟ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ.
ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೂ ತಿಳುವಳಿಕೆ ನೀಡಲಾಗಿದೆ ಎಂಬುದನ್ನು ಮತ್ತೊಮ್ಮೆ ತಮ್ಮ ಆದ್ಯ ಮಾಹಿತಿಗಾಗಿ ತರಲಾಗಿದೆ.