ಇತ್ತೀಚಿನ ಸುದ್ದಿ
5ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಜನವಾದಿ ಮಹಿಳಾ ಸಂಘಟನೆ ಆಗ್ರಹ
20/01/2025, 19:49
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಇತ್ರೀಚೆಗೆ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ 5 ವರ್ಷದ ಅಪ್ರಾಪ್ತ ಬಾಲಕೆ ಮೆಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯ ಕುರಿತು ಸೂಕ್ತ ವಾದ ಕ್ರಮವಹಿಸಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅರೋಪಿಗೆ ಕಠಿಣವಾದ ಶಿಕ್ಷೆಯಾಗುವಂತ ರೀತಿಯಲ್ಲಿ ಸಾಕ್ಷಿಗಳು ನಾಶಯಾಗದಂತೆ ಕ್ರಮ ಕೈಗೊಳ್ಳಬೇಕು,ಮಗುವಿನ ಫೋಷಕರು ಯಾವುದೆ ಒತ್ತಡಕ್ಕೆ ಮಣಿದು ದೂರು ಹಿಂಪಡೆಯದಂತೆ ಅವರಗೆ ಸೂಕ್ತ ವಾದ ರಕ್ಷಣೆಯನ್ನು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಿಕ್ಟಮ್ ಕಾಂಪನ್ಸೆಷನ್ ಸ್ಕೀಮ್ ಮೂಲಕ ಸಿಗಬೇಕಾದ ಅರ್ಥಿಕ ನೆರವು ಪೋಷಕರಿಗೆ ತಕ್ಷಣವೇ ಸಿಗುವಂತೆ ಕ್ರಮ ವಹಿಸಬೇಕು, ತೋರಣಗಲ್ ಗ್ರಾಮದಲ್ಲಿರುವ ಮತ್ತು ಸ್ಟೇಷನ್ ಭಾಗದಲ್ಲಿರುವರು ಜಿಂದಾಲ್ ಕಾರ್ಖಾನೆ ಯಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ವಾಸ ಮಾಡುತ್ತಿದ್ದು, ಬೇರೆ ಬೇರೆ ರಾಜ್ಯಗಳಿಂದ ಬಂದು ದುಡಿಯುತ್ತಿರುವ ಕಾರ್ಮಿಕರಿದ್ದಾರೆ. ಆ ಕುಟುಂಬಗಳಿಗೆ ವಾಸ ಮಾಡುವ ಪ್ರದೇಶಗಳಲ್ಲಿ ಸೂಕ್ತವಾದ ರಕ್ಷಣೆ ನೀಡುವ ಕ್ರಮಗಳನ್ನು ಜಾರಿ ಮಾಡಲು ಕ್ರಮ ವಹಿಸಬೇಕು.
ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು, ದೌರ್ಜನ್ಯ ತಡಿಯಲು ಉಗ್ರಪ್ಪ ಸಮಿತಿ ನೀಡಿದ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ಕ್ರಮ ವಹಿಸಬೇಕು ಎಂದು
ಅಖಿಲ ಬಾರತ ಜನವಾದಿ ಮಹಿಳಾ ಸಂಘಟನೆ
ರಾಜ್ಯ ಜಂಟಿ ಕಾರ್ಯದರ್ಶಿ, ಹಾಗೂ ಅಧ್ಯಕ್ಷರು ಒತ್ತಾಯಿಸಿದ್ದಾರೆ.