ಇತ್ತೀಚಿನ ಸುದ್ದಿ
5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3 ಮಂದಿ ಬಂಧನ
02/06/2023, 20:30
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
2000 ಮುಖಬೆಲೆಯ ನೋಟು ಬದಲಾಯಿಸಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೂಡ್ಡಿ 5 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಗವಾಡ ಠಾಣೆ ಪೊಲೀಸರು ಪೊಲೀಸ್ ಕಾನ್ ಸ್ಟೇಬಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಸಾಗರ್ ಜಾಧವ್,
ಅರಿಫ್ ಸಾಗರ್ ಹಾಗೂ ಲಕ್ಷ್ಮಣ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ.
ಈಗಾಗಲೇ ಇವರನ್ನು ಜಿಲ್ಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
500 ಮುಖಬೆಲೆಯ 5 ಲಕ್ಷ ರೂ. ನೀಡಿದ್ದಾರೆ. 2000 ಮುಖಬೆಲೆಯ 6 ಲಕ್ಷ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಲಕ್ಷಾಂತರ ಕೋಟ ನೋಟುವ ವಶಕ್ಕೆ ಪಡೆದುಕೊಂಡಿದ್ದಾರೆ.