10:02 PM Thursday2 - October 2025
ಬ್ರೇಕಿಂಗ್ ನ್ಯೂಸ್
ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ… ಸಾಲ ಮರು ಪಾವತಿಸಲು ಬ್ಯಾಂಕ್ ಅಧಿಕಾರಿಗಳ ಕಿರುಕುಳ: ರೈತ ಮನನೊಂದು ಆತ್ಮಹತ್ಯೆ ಕಲ್ಯಾಣದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರಕಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ… ಹಾರಂಗಿ ಜಲಾಶಯ ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಪ್ರವಾಸಿ ಬಸ್ ಅಪಘಾತ: ಹಲವು ವಿದ್ಯಾರ್ಥಿಗಳಿಗೆ…

ಇತ್ತೀಚಿನ ಸುದ್ದಿ

ದೆಹಲಿ NCRನಲ್ಲಿ ರೆಫೆಕ್ಸ್‌ ಮೊಬಿಲಿಟಿಯಿಂದ 400 EV ಸಾರಿಗೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

01/10/2025, 13:07

ನವದೆಹಲಿ(reporterkarnataka.com): ರೆಫೆಕ್ಸ್ ಮೊಬಿಲಿಟಿ ಸಂಸ್ಥೆ ದೆಹಲಿಯ NCRನಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಸ್ವಚ್ಛ ಕಾರ್ಪೊರೇಟ್ ಸಾರಿಗೆಗೆ ಅನುಗುಣವಾಗಿ ಮೂರು ತಿಂಗಳೊಳಗೆ 400ಕ್ಕೂ ಹೆಚ್ಚು ಹೊಸ ಶುದ್ಧ ಇಂಧನ ಚಾಲಿತ ವಾಹನಗಳನ್ನು ನಿಯೋಜಿಸಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿಸಿದರು.
ದೆಹಲಿಯಲ್ಲಿ ಇಂದು ರೆಫೆಕ್ಸ್ ಗ್ರೂಪ್‌ ಮೊಬಿಲಿಟಿ ಸಂಸ್ಥೆ ಆರಂಭಿಸಿದ ಶುದ್ಧ ಇಂಧನ ಸಾರಿಗೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ರೆಫೆಕ್ಸ್ ಮೊಬಿಲಿಟಿ ಹೊಸ ನಾಲ್ಕು ಚಕ್ರಗಳ ಶುದ್ಧ ಇಂಧನ ಚಾಲಿತ ವಾಹನಗಳನ್ನು ಓಡಿಸಲಿದ್ದು, ಇದು ಪ್ಯಾನ್-ಇಂಡಿಯಾವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ನುಡಿದರು.
ರೆಫೆಕ್ಸ್ ಮೊಬಿಲಿಟಿ ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈನೆಲ್ಲೆಡೆ 1,400ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳ ಸಾರಿಗೆ ಅಸ್ತಿತ್ವದಲ್ಲಿದೆ. 200ಕ್ಕೂ ಉದ್ಯೋಗಿಗಳು ಮತ್ತು ಉತ್ತಮ ತಂತ್ರಜ್ಞಾನವುಳ್ಳ ಸಾರಿಗೆ ನಿರ್ವಹಣಾ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ದೆಹಲಿ NCRಗೆ ದೇಶಾದ್ಯಂತ ಶ್ರೇಣಿ-1 ಮತ್ತು ಶ್ರೇಣಿ-2 ನಗರಗಳಿಗೆ ಶುದ್ಧ ವಾಹನ ಸಾರಿಗೆ ವ್ಯವಸ್ಥೆ ವಿಸ್ತರಿಸಲು ರೆಫೆಕ್ಸ್ ಮೊಬಿಲಿಟಿ ಒಂದು ಸ್ಪ್ರಿಂಗ್‌ಬೋರ್ಡ್ ಆಗಿದೆ ಎಂದು ಜೋಶಿ ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಶುದ್ಧ ಇಂಧನ ಮತ್ತು ಸುಸ್ಥಿರ ಚಲನಶೀಲತೆಯತ್ತ ವೇಗದಲ್ಲಿ ಮುನ್ನಡೆಯುತ್ತಿದೆ. ವಿದ್ಯುತ್ ವಾಹನಗಳು ಮತ್ತು ಸ್ಮಾರ್ಟ್ ಇಂಧನ-ಸಮರ್ಥ ಸಾರಿಗೆಯ ಭರವಸೆ ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಪೊರೇಟ್‌ಗಳು ಇವಿ ವಾಹನಗಳಿಗೆ ಸೌರಶಕ್ತಿ ಆಧಾರಿತ ಚಾರ್ಜಿಂಗ್ ಅನ್ನು ಅಳವಡಿಸಿಕೊಳ್ಳಬೇಕು. ಇದರಿಂದಾಗಿ ತೈಲ ಆಮದು ಕಡಿಮೆಯಾಗುವುದಲ್ಲದೆ, ಇಎಸ್‌ಜಿ ಬದ್ಧತೆಗೆ ಅನುಗುಣವಾಗಿ ಹಸಿರು ಇಂಧನ ಮತ್ತು ಆರೋಗ್ಯಕರ ನಗರಗಳ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಒತ್ತಾಯಿಸಿದರು.
ರೆಫೆಕ್ಸ್ ಗ್ರೂಪ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಜೈನ್ ಮಾತನಾಡಿ, ಒಂದೆರಡು ತ್ರೈಮಾಸಿಕಗಳಲ್ಲಿ ಈ ಪ್ರದೇಶದಲ್ಲಿ ಅತಿ ದೊಡ್ಡ ಕಾರ್ಪೊರೇಟ್ ಕ್ಲೀನ್-ಮೊಬಿಲಿಟಿ ರಚಿಸುತ್ತೇವೆ. ಗ್ರೀನ್ ಮೊಬಿಲಿಟಿ ನಮ್ಮ ಸುಸ್ಥಿರತೆಯ ಪ್ರಯಾಣದ ಅತ್ಯಂತ ನಿರ್ಣಾಯಕ ಸ್ತಂಭಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ರೆಫೆಕ್ಸ್ ಮೊಬಿಲಿಟಿಯ ಸಿಇಒ ಅನಿರುದ್ಧ್ ಅರುಣ್ ಮಾತನಾಡಿ, ರೆಫೆಕ್ಸ್ ಗ್ರೂಪ್ ನವೀಕರಿಸಬಹುದಾದ ಇಂಧನ, ಕಲ್ಲಿದ್ದಲು ನಿರ್ವಹಣೆ, ವೈದ್ಯಕೀಯ ತಂತ್ರಜ್ಞಾನ, ಔಷಧಗಳು, ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ಹಸಿರು ಕಾರ್ಯಾಚರಣೆ ಹೊಂದಿರುವ ವೈವಿಧ್ಯಮಯ ಭಾರತೀಯ ವ್ಯಾಪಾರ ಸಮೂಹವಾಗಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು