7:51 AM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಡಿಜಿಟಲ್‌ ವಹಿವಾಟಿನಲ್ಲಿ ವಂಚನೆ ತಡೆಗೆ 3 ವಿಧದ ಜಾಗ್ರತಿ ಅಪ್ಲಿಕೇಷನ್‌ ಸಿದ್ಧ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

29/05/2025, 14:21

* ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸೂಚನೆ
* ಡಿಜಿಟಲ್‌ ವಹಿವಾಟು ವೇದಿಕೆಗಳಲ್ಲಿ 13 ಮಾದರಿ ಡಾರ್ಕ್‌ ಪ್ಯಾಟ್ರನ್‌
* ನಿಯಂತ್ರಣಕ್ಕೆ IIT BHU ಸಹಯೋಗದಲ್ಲಿ 3 ಜಾಗ್ರತಿ ಅಪ್ಲಿಕೇಷನ್‌ಗಳು

ನವದೆಹಲಿ(reporterkarnataka.com): ಇ ಕಾಮರ್ಸ್‌ ವೇದಿಕೆಗಳಲ್ಲಿ 13 ಮಾದರಿ ಡಾರ್ಕ್‌ ಪ್ಯಾಟ್ರನ್‌ಗಳನ್ನು ಗುರುತಿಸಿದ್ದು, ವಂಚನೆ ನಿಯಂತ್ರಣಕ್ಕಾಗಿ ಮೂರು ವಿಧದ ಜಾಗ್ರತಿ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನವದೆಹಲಿಯಲ್ಲಿ ಮಂಗಳವಾರ ಸಂಜೆ ಮಾದ್ಯಮದವರೊಂದಿಗೆ ಮಾತನಾಡಿ, ಇ ಕಾಮರ್ಸ್‌ ವೇದಿಕೆ, ಡಿಜಿಟಲ್‌ ವಹಿವಾಟಿನಲ್ಲಿ ವಂಚನೆ ತಡೆಯಲು, ಡಾರ್ಕ್‌ ಪ್ಯಾಟ್ರನ್‌ ಪರಿಹಾರ ಕ್ರಮವಾಗಿ ಆಂತರಿಕ ಲೆಕ್ಕಪರಿಶೋಧನೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ನುಡಿದರು.
ಗ್ರಾಹಕರ ರಕ್ಷಣೆಗಾಗಿ ಡಾರ್ಕ್‌ ಪ್ಯಾಟ್ರನ್‌ಗಳನ್ನು ವಿಶ್ಲೇಷಿಸಲು, ತೆಗೆದುಹಾಕಲು ಸ್ವಯಂ ಲೆಕ್ಕಪರಿಶೋಧನೆಯನ್ನು ಅವಶ್ಯವಾಗಿ ನಡೆಸುವಂತೆ ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಇದಲ್ಲದೆ, ಹಲವು ನಿಯಂತ್ರಣ ಕ್ರಮಗಳನ್ನು ಗ್ರಾಹಕ ರಕ್ಷಣಾ ಪ್ರಾಧಿಕಾರ ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಎಲ್ಲಾ ಕಂಪನಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಆಂತರಿಕ ಆಡಳಿತ, ಗ್ರಾಹಕ ರಕ್ಷಣಾ ಕಾರ್ಯವಿಧಾನಗಳಲ್ಲಿ ಸಂಯೋಜಿಸಬೇಕು ಎಂದು ಸೂಚನೆ ನೀಡಿದರು.

*ಮೂರು ಅಪ್ಲಿಕೇಷನ್‌ಗಳು:* ಡಾರ್ಕ್ ಪ್ಯಾಟರ್ನ್‌ ಕುರಿತಂತೆ ಗ್ರಾಹಕರ ರಕ್ಷಣೆಗಾಗಿ IIT BHU ಸಹಯೋಗದೊಂದಿಗೆ ಈಗಾಗಲೇ ಮೂರು ಪ್ರಬಲ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ. ʼಜಾಗೃತಿ ಅಪ್ಲಿಕೇಶನ್ʼ, ʼಜಾಗೋ ಗ್ರಹಕ್ ಜಾಗೋʼ ಮತ್ತು ʼಜಾಗೃತಿ ಡ್ಯಾಶ್‌ಬೋರ್ಡ್ʼ ಅನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ʼಜಾಗೃತಿ ಅಪ್ಲಿಕೇಶನ್ʼ ಗ್ರಾಹಕರು ಇ-ಕಾಮರ್ಸ್ ವೇದಿಕೆಗಳಲ್ಲಿನ ಡಾರ್ಕ್ ಪ್ಯಾಟರ್ನ್‌ಗಳ ಬಗ್ಗೆ ನೇರವಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA)ಕ್ಕೆ ವರದಿ ಮಾಡಲು ಮತ್ತು ಅನುಮಾನಾಸ್ಪದ ವೆಬ್‌ಸೈಟ್‌ಗಳನ್ನು ಫ್ಲ್ಯಾಗ್ ಮಾಡಲು ನೆರವಾಗುತ್ತದೆ. ʼಜಾಗೋ ಗ್ರಹಕ್ ಜಾಗೋʼ ಅಪ್ಲಿಕೇಶನ್ ದುರುದ್ದೇಶಪೂರಿತ ಇ ಕಾಮರ್ಸ್‌ ವೇದಿಕೆಗಳಿಂದ ಬಳಕೆದಾರರನ್ನು ರಕ್ಷಿಸುತ್ತದೆ ಮತ್ತು ಗ್ರಾಹಕರು ಭೇಟಿ ನೀಡುವ ಇ-ಕಾಮರ್ಸ್ ಲಿಂಕ್‌ಗಾಗಿ ನೈಜ ಸುರಕ್ಷತಾ ಸ್ಕೋರ್‌ ನೀಡುತ್ತದೆ. ಇನ್ನು, ʼಜಾಗೃತಿ ಡ್ಯಾಶ್‌ಬೋರ್ಡ್ʼ ದೃಢವಾದ ವಿಶ್ಲೇಷಣಾತ್ಮಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಸಚಿವರು ವಿವರಿಸಿದರು.


ಈ ಅಪ್ಲಿಕೇಷನ್‌ಗಳನ್ನು ಪರಿಶೀಲಿಸುವ ಮೂಲಕ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಡಾರ್ಕ್ ಪ್ಯಾಟರ್ನ್‌ಗಳ ಕುರಿತು ವಿವರವಾದ ವರದಿ ಸಿದ್ಧಪಡಿಸಿ ನೀಡುತ್ತದೆ. ಇದರಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚುತ್ತದೆ. ನಮ್ಮ ಈ ಕ್ರಮ ಆನ್‌ಲೈನ್‌ನಲ್ಲಿ ದಾರಿ ತಪ್ಪಿಸುವ, ಮೋಸಗೊಳಿಸುವ ವಿನ್ಯಾಸ ಪದ್ಧತಿಗಳನ್ನು ಎದುರಿಸುವ ದೃಢ ಸಂಕಲ್ಪವಾಗಿದೆ ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ನವದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ, ಪ್ರಮುಖ ಇ-ಕಾಮರ್ಸ್ ಕಂಪನಿಗಳು, ಉದ್ಯಮ ಸಂಘಗಳು, ಸ್ವಯಂ ಸೇವಾ ಗ್ರಾಹಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರಮುಖ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆ ಏರ್ಪಡಿಸಿ, ಆನ್‌ಲೈನ್‌ ವಂಚನೆ ನಿರ್ಮೂಲನೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ಖುದ್ದು ಸಂವಾದ ನಡೆಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಗ್ರಾಹಕರು ಜಾಗರೂಕರಾಗಿದ್ದಾರೆ ಮತ್ತು ಮಾಹಿತಿ ಉಳ್ಳವರಾಗಿದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಅವರು ಯಾವುದೇ ರೀತಿಯ ಮೋಸ-ವಂಚನೆಯನ್ನು ಸಹಿಸುವುದಿಲ್ಲ. ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸಹ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಹೇಳಿದರು.
*NCHನಲ್ಲಿ ದೂರು ಹೆಚ್ಚಳ:* ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ (NCH) ಡಾರ್ಕ್ ಪ್ಯಾಟರ್ನ್‌ ಕುರಿತಂತೆ ವ್ಯಾಪಕ ದೂರುಗಳು ದಾಖಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಇದರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಹಕ ರಕ್ಷಣಾ ಪ್ರಾಧಿಕಾರ ಹಿಂಜರಿಯುವುದಿಲ್ಲ. ಪ್ರತಿ ಸಂಸ್ತೆಗಳೂ ಮಾರ್ಗಸೂಚಿ ಪಾಲಿಸಬೇಕು ಎಂದು ಇ ಕಾಮರ್ಸ್‌ ಪ್ರಮುಖರಿಗೆ ನಿರ್ದೇಶನ ನೀಡಿದರು.
ಇ ಕಾಮರ್ಸ್‌ ವೇದಿಕೆಗಳಲ್ಲಿ ಡಾರ್ಕ್ ಪ್ಯಾಟರ್ನ್‌ಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ನಿಯಮಿತ ಆಂತರಿಕ ಲೆಕ್ಕಪರಿಶೋಧನೆ ನಡೆಸಲೇಬೇಕು. ಕಂಪನಿಗಳು CCPA ಮಧ್ಯಪ್ರವೇಶಿಸುವವರೆಗೆ ಕಾಯಬಾರದು. ನೋಟಿಸ್‌ ನೀಡಿ ವಂಚನೆ ಮಾದರಿಗಳನ್ನು ತೆಗೆದುಹಾಕಬೇಕು ಎಂದು ಸೂಚನೆ ನೀಡಿದರು.
ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರು ಮಾತನಾಡಿ, ಇ ಕಾಮರ್ಸ್‌ ವೇದಿಕೆಗಳಲ್ಲಿ ಡಾರ್ಕ್‌ ಪ್ಯಾಟ್ರನ್‌ಗಳು ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿವೆ. ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತವೆ. ಇದು ಗ್ರಾಹಕರ ನಂಬಿಕೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಗ್ರಾಹಕರ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ಡಿಜಿಟಲ್ ವಹಿವಾಟು ಪಾರದರ್ಶಕತೆಗೆ ಕ್ರಮ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ ಅವರು, ಡಾರ್ಕ್ ಪ್ಯಾಟರ್ನ್ಸ್ ಮೋಸಗೊಳಿಸುವ ವಿನ್ಯಾಸವಾಗಿದ್ದು, ಇದನ್ನು ಎದುರಿಸಲು ಮೀಸಲಾದ ಮಾರ್ಗಸೂಚಿ ಹೊರಡಿಸಿದ ಮೊದಲ ದೇಶ ಭಾರತವಾಗಿದೆ ಎಂದು ಹೇಳಿದರು.
ಪ್ರಮುಖ ಇ-ಕಾಮರ್ಸ್ ಕಂಪನಿಗಳಾದ 1mg.com, AIRBNB, Amazon, Apple, Zepto, Booking.com, Ola Electric, Tata Digital, Adidas India, Samsung, Ikigai Law, Indigo Airlines, Ixigo, MakeMyTrip, Mastercard, Meta, Netmeds, Namma Yatri, PharmEasy, Reliance Retail, Rapido, Shiprocket, Snapdeal, Swiggy, Thomas Cook, Uber, Whatsapp, Yatra, Zomato & Blinkit, Flipkart, Google, Justdial, ONDC, ಮತ್ತು Paytm ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ, ಪ್ರಮುಖ ಕೈಗಾರಿಕಾ ಸಂಘಗಳಾದ CAIT, CCI, FICCI, NASSCOM, PHDCCI, ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘವು ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು