7:36 AM Sunday5 - May 2024
ಬ್ರೇಕಿಂಗ್ ನ್ಯೂಸ್
ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ…

ಇತ್ತೀಚಿನ ಸುದ್ದಿ

ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ: 100ಕ್ಕೂ ಅಧಿಕ ವಾಹನಗಳ ಮೆರವಣಿಗೆ

22/01/2024, 00:49

ಬಂಟ್ವಾಳ(reporterkarnataka.com): ಇಲ್ಲಿನ ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.21ರಿಂದ 26ರ ವರೆಗೆ ಉಡುಪಿ ಅದಮಾರು ಮಠದ ಶ್ರೀ ಈಶ ತೀರ್ಥ ಶ್ರೀಪಾದಂಗಳರವರ ಉಪಸ್ಥಿತಿಯಲ್ಲಿ ನಡೆಯಲಿದ್ದು ಈ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣ ಮೆರವಣಿಗೆ ನಡೆಯಿತು.
ಮುರಳಿಧರ ಭಟ್ ಕಳ್ಳತಡಮೆ ಪ್ರಾರ್ಥನೆಯೊಂದಿಗೆ ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಅಜಿತ್ ಚೌಟ ತೆಂಗಿನ ಕಾಯಿ ಹೊಡೆದು ಚಾಲನೆ ನೀಡಿದರು.

ಏಕ ಕಾಲದಲ್ಲಿ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಭವ್ಯ ಶೋಭಾ ಯಾತ್ರೆಯು ಅಡ್ಯಾರು ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಬ್ರಹ್ಮರಕೊಟ್ಲು ಬ್ರಹ್ಮಸನ್ನಿಧಿಯಿಂದ ಸಹಸ್ರರು ಭಕ್ತ ಭಕರು, ಕಲಶ ಹೊತ್ತ ಮಾತೆಯರು, ಕುಣಿತ ಭಜನಾ ತಂಡ, ಚೆಂಡೆ, ತಾಲಿಮು, ಸೀತಾರಾಮ ಹನುಮರ ಭವ್ಯ ಸ್ಥಬ್ದಚಿತ್ರ ಸಹಿತ ನೂರಾರು ಭಗವದ್ವಜ ಹೊತ್ತ ವಾಹನಗಳು ದಾರಿಯುದ್ಧಕ್ಕೂ ಕೇಸರಿಮಯ ಭಗವಾಧ್ವಜ, ಆಕರ್ಷಕ ಕಮಾನು, ಮೆರವಣಿಗೆಗೆ ಮೆರಗು ನೀಡಿದವು.
ಸುಮಾರು 15ಸಾವಿರಕ್ಕೂ ಅಧಿಕ ಭಕ್ತರ ಪಾಲ್ಗೊಳ್ಳಯುವಿಕೆಯಲ್ಲಿ 100ಕ್ಕೂ ಅಧಿಕ ವಾಹನಗಳಲ್ಲಿ ಹೊರೆ ಕಾಣಿಕೆಯು ದೇವಸ್ಥಾನಕ್ಕೆ ಸಮರ್ಪಣೆಯಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಪ್ರ. ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ, ಸಂಚಾಲಕ ವಿಠ್ಠಲ್ ಆಳ್ವ ಗರೋಡಿ, ಕಾರ್ಯಾಧ್ಯಕ್ಷ ಅರ್ಕುಳ ಕಂಪ ಸದಾನಂದ ಆಳ್ವ , ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷ ಚಂದ್ರಶೇಖರ ಗಂಭೀರ , ಪ್ರದಾನ ಸಂಚಾಲಕ ದೇವಸ್ಯ ಪ್ರಕಾಶ್ ಚಂದ್ರ ರೈ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು, ಜಯರಾಜ ಕೊಟ್ಟಾರಿ,, ಜಯರಾಜ್ ಕರ್ಕೆರ, ಸಂತೋಷ ಗಾಂಭೀರ, ರವೀಂದ್ರ ಕಂಬಳಿ, ಗಣೇಶ್ ಸುವರ್ಣ , ಕವಿತಾ ದೇವದಾಸ ಅರ್ಕುಳ ಮತ್ತಿತರರ ಪದಾಧಿಕಾರಿಗಳು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು